ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಣಾಟಕದ ಭೂ ವಿಜ್ಞಾನ
ಮೂಲದೊಡನೆ ಪರಿಶೀಲಿಸಿ
ಕರ್ಣಾಟಕದ ಭೂ ವಿಜ್ಞಾನ
74(- 78(20ಪೂರ್ವ ರೇಖಾಂಶ ವೃತ್ತಗಳು ಹಾಗೂ 11( 45-18( 20 ಉತ್ತರ ಅಕ್ಷಾಂಶ ವೃತ್ತಗಳು ಆವೃತ್ತಿಸಿರುವ ಪ್ರದೇಶ ಕರ್ಣಾಟಕ (ಮೈಸೂರು ರಾಜ್ಯ). ಇದರ ವಿಸ್ತೀರ್ಣ ಸುಮಾರು 1,92,203 ಚದರ ಕಿಲೋಮೀಟರುಗಳು. ಪಶ್ಚಿಮತೀರದ ಹೊರತು ರಾಜ್ಯದ ಬಹುಭಾಗ ಪ್ರಸ್ಥಭೂಮಿ. ಭೌತಲಕ್ಷಣಗಳನ್ನು ಅನುಸರಿಸಿ ಕರ್ಣಾಟಕದಲ್ಲಿ ಮೂರು ಮುಖ್ಯ ಭಾಗಗಳನ್ನು ಗುರುತಿಸಬಹುದು. 1. ಪಶ್ಚಿಮತೀರಪ್ರದೇಶ, 2. ಮಲೆನಾಡು, 3. ಮೈದಾನ.
ಪಶ್ಚಿಮ ತೀರಪ್ರದೇಶ ಸಮುದ್ರದ ಕಡೆಯಿಂದ ಪಶ್ಚಿಮಘಟ್ಟಗಳ ತಪ್ಪಲವರೆಗೆ ಹಬ್ಬಿದೆ. ಮಲೆನಾಡು ಬೆಟ್ಟಗುಡ್ಡಗಳಿಂದ ಕೂಡಿದ್ದು ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿದೆ. ಇಲ್ಲಿ ಅರಣ್ಯಗಳು ಹೆಚ್ಚು. ಭೂಮಿ ಫಲವತ್ತಾದ ಪ್ರದೇಶವಾಗಿದ್ದು ವರ್ಷದ ಬಹುಭಾಗ ಹಸಿರಾಗಿರುವುದು. ಮೈದಾನಪ್ರದೇಶ ಕರ್ಣಾಟಕದ ಬಹುಭಾಗವನ್ನು ಆವರಿಸಿದೆ. ಬೆಟ್ಟದಸಾಲು ಪಶ್ಚಿಮತೀರಕ್ಕೆ ಹೆಚ್ಚು ಕಡಿಮೆ ಸಮಾಂತರವಾಗಿ ಹಬ್ಬಿದೆ ; ಇದೇ ಸಹ್ಯಾದ್ರಿ ಶ್ರೇಣಿ. ಮುಳ್ಳಯ್ಯನಗಿರಿ, ಕುದುರೆಮುS, ಕಲ್ಹತ್ತಗಿರಿ, ಕೊಡಚಾದ್ರಿ ಇತ್ಯಾದಿ ಅತ್ಯಂತ ಎತ್ತರವಾದ ಶಿಖರಗಳು ಈ ಸಾಲಿನ ಪೂರ್ವಕ್ಕೆ ಇವೆ. ಉತ್ತರಕ್ಕೆ ಹೋದಂತೆಲ್ಲ ಎತ್ತರ ಕಡಿಮೆಯಾಗುತ್ತದೆ. ಪಶ್ಚಿಮಘಟ್ಟಗಳು ಸಮುದ್ರದತ್ತ ಕಡಿದಾದ ಇಳಿಜಾರಿನಿಂದಲೂ ಪೂರ್ವದತ್ತ ಸಾಧಾರಣ ಇಳಿಜಾರಿನಿಂದಲೂ ಕೂಡಿವೆ. ಬಯಲುಸೀಮೆಯಲ್ಲಿ ರಾಮನಗರ, ಶಿವಗಂಗೆ, ಬಿಳಿಗಿರಿರಂಗನಬೆಟ್ಟ, ದೇವರಾಯನ ದುರ್ಗ, ಚಿತ್ರದುರ್ಗ, ಹೊಸದುರ್ಗ, ನಂದಿಬೆಟ್ಟಗಳ ಗುಂಪು, ಚಾಮುಂಡಿಬೆಟ್ಟ ಗೋಪಾಲಸ್ವಾಮಿ ಬೆಟ್ಟ ಮುಂತಾದವು ಇವೆ.
ಕರ್ಣಾಟಕ ರಾಜ್ಯದಲ್ಲಿ ನೀರು ಹರಿಯುವ ಪಾತ್ರ ಪೂರ್ವಾಭಿಮುಖವಾಗಿದೆ. ಈ ಕಾರಣದಿಂದ ಶರಾವತಿ, ನೇತ್ರಾವತಿ (ಇವು ಅರಬ್ಬೀ ಸಮುದ್ರವನ್ನು ಸೇರುತ್ತವೆ) ಮೊದಲಾದ ಕೇವಲ ಕೆಲವು ಪ್ರಸಿದ್ಧ ನದಿಗಳನ್ನುಳಿದು ಮಿಕ್ಕವು ಪಶ್ಚಿಮದಿಂದ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿಯನ್ನು ಸೇರುವುವು. ಕೆಲವು ಕಡೆ ನೂರಾರು ಅಡಿಯ ಜಲಪಾತಗಳು ಇವೆ. ಶರಾವತಿಯ ಜೋಗ್ ಅಥವಾ ಗೇರುಸೊಪ್ಪೆ (830'), ಕಾವೇರಿಯ ಗಗನಚುಕ್ಕಿ, ಭರಚುಕ್ಕಿ (300'), ಘಟಪ್ರಭಾ ನದಿಯ ಗೋಕಾಕ್ (180'), ಶಿಂಷಾ ಜಲಪಾತ (ಸುಮಾರು 100'), ಬಾಬಾಬುಡನ್ ಗಿರಿಯ ಹೆಬ್ಬೆ ಜಲಪಾತ (100') ಮುಖ್ಯವಾದುವು.
ಶಿಲಾಸಮುದಾಯಗಳು : ಈ ರಾಜ್ಯದಲ್ಲಿ ಬೆಟ್ಟಗಳು ಅಧಿಕ ಸಂಖ್ಯೆಯಲ್ಲಿವೆ. ಇವುಗಳಲ್ಲಿನ ಶಿಲಾಸಮುದಾಯಗಳು ಅತಿ ಪುರಾತನ ಕಾಲದವು. ಇವುಗಳ ವ್ಯಾಪ್ತಿ ಸುಮಾರು 1,50,200 ಚದರ ಕಿಲೋಮೀಟರುಗಳಷ್ಟು. ಈ ಶಿಲಾಸಮುದಾಯಕ್ಕೆ ಆರ್ಷೇಯ (ಆರ್ಕೆಯನ್) ಕಲ್ಪವೆಂದು ಹೆಸರು. ಇಲ್ಲಿನ ಶಿಲೆಗಳನ್ನು ಮುಖ್ಯವಾಗಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
1. ಕಣರಚನೆಯ ಪದರು ಶಿಲೆಗಳು (ಷಿಸ್ಟ್ಸ್) : ಧಾರವಾಡ ಶಿಲಾವರ್ಗವೆಂದು ಇವುಗಳ ಹೆಸರು. ರೂಪಾಂತರ ಹೊಂದಿದ ಜಲಜಶಿಲೆಗಳು ಮತ್ತು ಜ್ವಾಲಾಮುಖಿಜಶಿಲೆಗಳೂ ಆಂಫಿಬೊಲೈಟ್, ಪೆಂಡೊಟೈಟ್, ಡನೈಟ್ ಮುಂತಾದ ಅಲ್ಪಸಿಲಿಕಾಂಶ (ಬೇಸಿಕ್) ಶಿಲೆಗಳೂ ಇವುಗಳಲ್ಲಿ ಸೇರಿವೆ. ವ್ಯಾಪ್ತಿ ಸುಮಾರು 20,700 ಚದರ ಕಿಲೋಮೀಟರುಗಳು.
2. ಗ್ರಾನೈಟ್ ಮತ್ತು ನೈಸ್ ಶಿಲಾವಿಧಗಳು : ಈ ಶಿಲೆಗಳು ರಾಜ್ಯದಲ್ಲಿ ಅಧಿಕವಾಗಿದೆ. ರಾಜ್ಯದ ದಕ್ಷಿಣಕ್ಕೆ ಇವುಗಳ ಹಂಚಿಕೆ ಹೆಚ್ಚು. ಅನೇಕ ಕಡೆ ಧಾರವಾಡ ಪದರು ಶಿಲೆಗಳನ್ನು ಛೇದಿಸಿಕೊಂಡು ಹೊರಬಂದಿರುವುದರಿಂದ (ಅಂತಸ್ಸರಣ) ಧಾರವಾಡ ಶಿಲಾವರ್ಗವೇ ಈ ರಾಜ್ಯದಲ್ಲಿ ಅತ್ಯಂತ ಪುರಾತನವಾದುದೆಂದು ಪರಿಗಣಿಸಲಾಗಿದೆ.
ಈಗ ಹೊರಕಾಣುತ್ತಿರುವ ಧಾರವಾಡ ಶಿಲಾವರ್ಗಗಳು ಹಲವಾರು ಉದ್ದವಲಯಗಳಾಗಿ ಉತ್ತರದಕ್ಷಿಣದುದ್ದಕ್ಕೂ ಹಬ್ಬಿವೆ. ಇವುಗಳ ಸುತ್ತ ಗ್ರಾನೈಟ್ ಮತ್ತು ನೈಸ್ ಶಿಲೆಗಳು ಹೆಚ್ಚುಕಡಿಮೆ ಸಮಾಂತರವಾಗಿ ಮೂರು ದೊಡ್ಡ ವಲಯಗಳಲ್ಲಿ ಹರಡಿವೆ. ಪಶ್ಚಿಮದಿಂದ ಪೂರ್ವಕ್ಕೆ ಹಾದುಹೋಗುವಾಗ ಧಾರವಾಡ ಶಿಲಾವಲಯಗಳನ್ನು ಒಂದಾದಮೇಲೊಂದರಂತೆ ಕಾಣಬಹುದು. ಇವನ್ನು ಬಿ.ರಾಮರಾಯರು ಕೆಳಕಂಡಂತೆ ವಿಂಗಡಿಸಿದ್ದಾರೆ (1940).
1. ಪಶ್ಚಿಮ ವಲಯ : ಕ್ಯಾಸಲ್ರಾಕ್, ಕೊಡಚಾದ್ರಿ, ಆಗುಂಬೆ, ಕುದುರೆಮುಖ ಮತ್ತು ಮಡಿಕೇರಿ ಶಿಲಾಪ್ರದೇಶಗಳನ್ನೊಳಗೊಂಡಿದೆ.
2. ಪಶ್ಚಿಮ ಮಧ್ಯವಲಯ : ಧಾರವಾಡಕ್ಕೆ ಸ್ವಲ್ಪ ಉತ್ತರದಲ್ಲಿ ಪ್ರಾರಂಭವಾಗಿ ದಕ್ಷಿಣದಲ್ಲಿ ಕಾವೇರಿ ನದಿಯ ತೀರದವರೆಗೆ ಸುಮಾರು 435 ಕಿಲೋಮೀಟರುಗಳಷ್ಟು ಉದ್ದವಾಗಿ ಹಬ್ಬಿದೆ. ಇದರಲ್ಲಿ ಮುಖ್ಯವಾಗಿ ಶಿವಮೊಗ್ಗ, ಹೊಳೆನರಸೀಪುರ ಮತ್ತು ಕೃಷ್ಣರಾಜಪೇಟೆ ಪದರು ಶಿಲಾವಲಯಗಳು ಸೇರಿವೆ. ಪಶ್ಚಿಮ ಮತ್ತು ಪಶ್ಚಿಮ ಮಧ್ಯ ಹರವಿನ ಒಟ್ಟು ವಿಸ್ತೀರ್ಣ ಸುಮಾರು 11,650 ಚದರ ಕಿಲೋಮೀಟರುಗಳು.
3. ಮಧ್ಯವಲಯ : ಉತ್ತರದಲ್ಲಿ ಗದಗ ಡಂಬಳದಿಂದ ಪ್ರಾರಂಭವಾಗಿ ಸ್ವಲ್ಪ ದೂರ ಆಗ್ನೇಯಾಭಿಮುಖವಾಗಿ ದಕ್ಷಿಣದತ್ತ ಹರಡಿದೆ. ಇದು ಚಿತ್ರದುರ್ಗ, ಚಿಕ್ಕನಾಯಕನ ಹಳ್ಳಿ, ನಾಗಮಂಗಲ ಮತ್ತು ನುಗ್ಗೇಹಳ್ಳಿ ಮುಂತಾದ ಪದರುಶಿಲಾಪ್ರದೇಶಗಳನ್ನೊಳಗೊಂಡಿದೆ.
4. ಪೂರ್ವಮಧ್ಯವಲಯ : ಅನೇಕ ಚಿಕ್ಕಪ್ರದೇಶಗಳನ್ನೊಳಗೊಂಡಿದೆ. ಇವುಗಳಲ್ಲಿ ಬ್ಯಾಂಡೈಟ್ ಶಿಲಾವರ್ಗ, ಕೋಡಮೈಟ್ ಶಿಲಾವರ್ಗ ಮತ್ತು ಸಾಕರಸನೈಟ್ ಶಿಲಾವರ್ಗಗಳು ಮುಖ್ಯವಾದವು.
5. ಪೂರ್ವವಲಯ : ಕೋಲಾರ ಜಿಲ್ಲೆಯಲ್ಲಿದೆ. ಇದಕ್ಕೆ ಕೋಲಾರ ಶಿಲಾವಲಯವೆಂದು ಹೆಸರು. ಈ ಶಿಲೆಗಳು ಉತ್ತರದಕ್ಷಿಣವಾಗಿ ಹಬ್ಬಿವೆ. ಸುಮಾರು 260 ಚದರ ಕಿಲೋಮೀಟರುಗಳು. ಭಾರತದ ಚಿನ್ನದ ಉತ್ಪತ್ತಿಗೆ ಇದೇ ಮುಖ್ಯ ಕೇಂದ್ರ.
ಶಿಲಾ ಓಟ : ಧಾರವಾಡ ಶಿಲೆಗಳ ಪ್ರಾದೇಶಿಕ ಶಿಲಾ ಓಟ (ಸ್ಟ್ರೈಕ್) ಉತ್ತರ ಭಾಗದಲ್ಲಿ ಉತ್ತರವಾಯುವ್ಯ ಮತ್ತು ದಕ್ಷಿಣಾಆಗ್ನೇಯವಾಗಿಯೂ ದಕ್ಷಿಣಕ್ಕೆ ಬಂದಂತೆಲ್ಲ ಉತ್ತರ ದಕ್ಷಿಣವಾಗಿಯೂ ದಕ್ಷಿಣದ ಎಲ್ಲೆಯ ಹತ್ತಿರ ಈಶಾನ್ಯ ನೈಋತ್ಯವಾಗಿಯೂ ಇದೆ.
ಶಿಲಾವಿಭಜನೆ : ಧಾರವಾಡ ಶಿಲಾಸಮುದಾಯಗಳನ್ನು ಬಹುಕಾಲದಿಂದ ಹಲವಾರು ಭೂ ವಿe್ಞÁನಿಗಳು ವಿಂಗಡಿಸಲು ಪ್ರಯತ್ನಿಸಿದ್ದಾರೆ. ಇವರಲ್ಲಿ ಮೊದಲಿಗರು ಸಂಪತ್ ಐಯ್ಯಂಗಾರ್ (1906) ಅನಂತರ ಡಬ್ಲ್ಯು.ಎಫ್. ಸ್ಮೀತ್ (1916). ಇತ್ತೀಚೆಗೆ ಬಿ.ರಾಮರಾಯರು (1940). ಅದರ ಪಟ್ಟಿರೂಪದ ಚಿತ್ರಣವನ್ನು ಇಲ್ಲಿಕೊಟ್ಟಿದೆ. ಪ್ರೀಕೇಂಬ್ರಿಯನ್ ಅನನುರೂಪತೆ ಆರ್ಷೇಯಕಲ್ಪ ಮೂಲಶಿಲಾವಿಧಗಳು ಆಗಿರಬಹುದಾದ ವ್ಯತ್ಯಾಸ
ನೈಸಿಕ್ ಶಿಲಾಸಮುದಾಯ
9 ಸಿಲಿಕಾಂಶರಹಿತ ಡೈಕುಗಳು
ಮುಖ್ಯವಾಗಿ ಡಾಲರೈಟು
8 ಫೆಲ್ಸೈಟ್ ಮತ್ತು ಪಾರ್ಫಿರಿ
ಡೈಕುಗಳು
7ಕ್ಲೋಸ್ಪೇಟೆ ಗ್ರಾನೈಟುಗಳು
.....ಪುರಾತನ ಶಿಲಾವಿಧಗಳು
ಅಂಚಿನಲ್ಲಿ ಪದರರಚನೆ ಇದೆ.
ಪುನರ್ಸ್ಫಟಿಕೀಕರಿಸಿ ಪುನಾರಚಿತವಾಗಿ ಚಾರ್ನಕೈಟ್ ಶಿಲಾವಿಧಗಳಾಗಿರುವುವು...
6 ನೋರೈಟ್ ಡೈಕುಗಳು
5 ಹಾರನ್ಬ್ಲೆಂಡ್ ಡೈಕುಗಳು
4 ಪೆನಿನ್ಸುಲಾರ್ ನೈಸ್
ಸ್ವಲ್ಪ ಜರ್ಝರಿತವಾಗಿ ಕಣವಾಗಿ ಕಣಶಿಲಾ ರಚನೆ ಪಡದಿವೆ. ಗ್ರಾನಿಟಿಕ್ ನೈಸ್ ಶಿಲಾತೊಡಕು
ಅನನುರೂಪತೆ
ಧಾರವಾಡ ಶಿಲಾ ಸಮುದಾಯ
ಮೇಲು ಕೆಲವು ಫೆರುಜಿನಸ್ ಮತ್ತು ಚೆರ್ಟಿ ಸಿಲ್ಟ್ ಜೇಡುಗಳು, ಸುಣ್ಣ ಅಂಶ ಉಳ್ಳ ಸಿಲ್ಟ್ ಮತ್ತು ಜೇಡುಗಳು ;ಅಶುದ್ಧವಾದ ಕ್ವಾಟ್ರ್ಜೈಟ್ ಮತ್ತು ಕಂಗ್ಲಾಮರೇಟ್ (ಜಿ.ಆರ್. ಶಿಲಾವರ್ಗದ ಸ್ವಲ್ಪಭಾಗ) ಅನನುರೂಪತೆ
ಸ್ವಲ್ಪಮಟ್ಟಿಗೆ ಬದಲಾವಣೆ ಆದಂತಿರುವುವು. ಇಲ್ಲದಿದ್ದರೆ ಸುಲಭವಾಗಿ ಗುರುತಿಸಲಾಗುವುವು.
ಮಧ್ಯ
ಸಣ್ಣ ಮತ್ತು ದಪ್ಪ ಕಣ ರಚನೆಯ
ಗ್ರಾನೈಟ್ ಪಾರ್ಫಿರಿ ಮತ್ತು ಕೆಲವು
ಗ್ರಾನಿಟಿಕ್ ಶಿಲೆಗಳು.
ಅಲ್ಪಸಿಲಿಕಾಂಶ (ಬೇಸಿಕ್) ಮತ್ತು ಅತ್ಯಲ್ಪ ಸಿಲಿಕಾಂಶ (ಅಲ್ಟ್ರಬೇಸಿಕ್) ಶಿಲೆಗಳು. ಕಬ್ಬಿಣ ಶಿಲೆಗಳು, ಸುಣ್ಣ ಶಿಲೆಗಳು, ಆರ್ಚ್ಲೈಟ್, ಗ್ರೇವ್ಯಾಕ್ ಕ್ವಾಟ್ರ್ಜೈಟ್, ಕಂಗ್ಲಾಮರೇಟುಗಳುಮತ್ತು ತೆಳುವಾಗಿ ಬೆರೆತಿರುವ ಜ್ವಾಲಾಮುಖಿಜ ಶಿಲೆಗಳು. ಡಯೊಲೈಟ್, ಫೆಲ್ಸೈಟ್, ಬೆಣಚು ಪಾರ್ಫಿರಿ ಮತ್ತು ಇತರ ಅಧಿಕ ಸಿಲಿಕಾಂಶದ ಜ್ವಾಲಾಮುಖಿಜಶಿಲೆಗಳು ಒಪಾಲಸೆಂಟ್ ಬೆಣಚು ಇರುವ ಜ್ವಾಲಾಮುಖಿಜ ಬೂದಿ ಮತ್ತು ಇತರ ಪದಾರ್ಥಗಳು. ಜ್ವಾಲಾ ಮುಖಿಜ ಚರಟ (ಗಸಿ). ಅಲ್ಪ ಸಿಲಿಕಾಂಶದ ಜ್ವಾಲಾಮುಖಿಜ ಲಾವಾರಹಿತ, ಸಿಲ್ಲುಗಳು, ಹರವು (ಫಲಕ) ಮತ್ತು ಡೈಕುಗಳು.
ಅಭ್ರಕ (ಮೈಕೇಷಿಯಸ್) ಗ್ರಾನಿಟಿಕ್ ನೈಸುಗಳು ಮತ್ತು ಜರ್ಝರಿತವಾದಪದರ ರಚನೆ ಉಳ್ಳ ನೈಸಿಕ್ ಕಣಶಿಲೆಗಳು (ಗ್ರಾನೈಟ್) ಹೆಚ್ಚು ಜರ್ಝರಿತವಾದ ಮತ್ತು ಕಣ ರಚನೆಯ ಶಿಲೆಗಳು. ಆಂಫಿಬೋಲ್ ಇರುವ ಪಟ್ಟಿರಚನೆಯ ಕಬ್ಬಿಣ ಶಿಲೆಗಳು. ಕಣ ರಚನೆಯ ಸುಣ್ಣ ಶಿಲೆಗಳು. ಸಿಲ್ಲಿಮನೈಟ್, ಕಾರ್ಡಿಯ ರೈಟ್, ಇರುವ ಅಭ್ರಕನೈಸುಗಳು. ಸಿಲ್ಲಿಮನೈಟ್ ಕ್ವಾಟ್ರ್ಜೈಟುಗಳು. ಪದರ ರಚನೆಯ ಕಂಗ್ಲಾಮರೇಟ್ ಬೆಣಚು ಪದರುಶಿಲೆಗಳು, ಅಭ್ರಕ ಬೆಣಚು ಪದರು ಶಿಲೆಗಳು ಮತ್ತು ಒಪಾಲಸೆಂಟ್ ಬೆಣಚು ಇರುವ ನೈಸುಗಳು ಹೆಚ್ಚು ಜರ್ಝರಿತವಾಗಿವೆ. ಹಸುರುಶಿಲೆಗಳು, ಹಾರನ್ಬ್ಲೆಂಡ್ಪದರುಶಿಲೆಗಳು ಇತ್ಯಾದಿ.
ಗುರುತಿಸಲಾದ ಮೂಲ ಅಡಿಪಾಲದ ಶಿಲೆಗಳು.,
ಧಾರವಾಡ ಶಿಲೆಗಳ ಉತ್ಪತ್ತಿ : ಇದೊಂದು ಆಸಕ್ತಿಯನ್ನುಂಟುಮಾಡುವ ಸಮಸ್ಯೆ. ಕಾರಣ ಈ ಶಿಲೆಗಳು ಸಮುದ್ರದ ಅಡಿಯಲ್ಲಾದ ಇತರ ಶಿಲೆಗಳಂತಲ್ಲ. ಈವರೆಗೆ ಅನೇಕ ಭೂವಿe್ಞÁನಿಗಳು ಇವುಗಳ ಉತ್ಪತ್ತಿಯ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಶಿಲೆಗಳು ಸಮಕಾಲೀನ ಶಿಲಾ ರಸ ಪ್ರವಾಹ ಹಾಗೂ ಸಿಲಿಕಾಂಶರಹಿತ ಅಗ್ನಿಶಿಲೆಗಳಿಂದಾಗಿರುವ ಮತ್ತು ನೈಸ್ ಅಡಿಪಾಯದ ಶಿಲಾತೊಡಕಿನ ಮೇಲೆ ಅನನುರೂಪತೆಯಿಂದಿರುವ ತೀವ್ರ ರೂಪಾಂತರ ಜಲಜ ಶಿಲೆಗಳೆಂದು ರಾಬರ್ಟ್ ಬ್ರೂಸ್ಫುಟ್ ಹೇಳಿದ್ದಾನೆ (1896). ಆದರೆ ಡಬ್ಲ್ಯು.ಎಫ್. ಸ್ಮೀತನ ಅಭಿಪ್ರಾಯದಲ್ಲಿ (1911) ಈ ಶಿಲೆಗಳೆಲ್ಲವೂ ಅಗ್ನಿಶಿಲೆಗಳಿಂದಾದವುಗಳೇ ವಿನಾ ಜಲಜಶಿಲೆಗಳ ರೂಪಾಂತರದಿಂದಾದವುಗಳಲ್ಲ ಎಂದಿದೆ. ಸುಮಾರು ಎರಡು ದಶಕಗಳ ತರುವಾಯ ಬಿ.ರಾಮರಾವ್ ಮತ್ತು ಸಹೋದ್ಯೋಗಿಗಳು ಧಾರವಾಡ ಪದರು ಶಿಲಾವರ್ಗದಲ್ಲಿ ಅಲೆಯ ಗುರುತುಗಳು, ಪ್ರವಾಹಸ್ತರಗಳು ಮುಂತಾದ ನಿರ್ದಿಷ್ಟ ಜಲಜಶಿಲಾರಚನೆಗಳನ್ನು ಕಂಡು ಇವು ಜಲಜಶಿಲಾಜನ್ಯವೆಂದು ಅಭಿಪ್ರಾಯಪಟ್ಟರು. ಸಿ. ಎಸ್. ಪಿಚ್ಚಮುತ್ತು ಮತ್ತು ಇತರ ಸಂಶೋಧಕರ ಅಭಿಪ್ರಾಯದಲ್ಲಿ ಧಾರವಾಡ ಪದರುಶಿಲಾವರ್ಗದ ಅನೇಕ ಶಿಲಾವಿಧಗಳು ಜಲಜನ್ಯವೆಂದಿದೆ.
ಶಿಲಾವರ್ಣನೆ : ಈ ವರ್ಗದಲ್ಲಿರುವ ಅನೇಕ ಶಿಲಾವಿಧಗಳನ್ನು ಸ್ಥೂಲವಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು.
1. ಸಿಲ್ ಮತ್ತು ಡೈಕುಗಳನ್ನೊಳಗೊಂಡ ಜ್ವಾಲಾಮುಖಿಜಶಿಲೆಗಳು : ಧಾರವಾಡ ಪದರುಶಿಲೆಗಳ ಕೆಳಭಾಗದಲ್ಲಿ ರೂಪಾಂತರ ಹೊಂದಿರುವ ಜ್ವಾಲಾಮುಖಿಜ ಶಿಲೆಗಳಿವೆ. ಇವುಗಳ ಕಾಲದ ಬಗ್ಗೆ ಬಲು ತೊಡಕಿದೆ. ಇವುಗಳಲ್ಲಿ ಕೆಲವು ಅಧಿಕ ಸಿಲಿಕಾಂಶ, ಮಧ್ಯವರ್ತಿ (ಮಿತ ಸಿಲಿಕಾಂಶ) ಮತ್ತು ಅತ್ಯಲ್ಪ ಸಿಲಿಕಾಂಶ ಶಿಲೆಗಳು. ಇವು ಲಾವಾ ಪ್ರವಾಹಗಳು, ಸಿಲ್ಲುಗಳು, ಪದರಗಳು, ಡೈಕುಗಳು- ಈ ರೂಪಗಳಲ್ಲಿಯೂ ಜ್ವಾಲಾಮುಖಿಜ ಬೂದಿ. ಟುಫ್ ಮತ್ತು ಅಗ್ಲಾಮರೇಟುಗಳಾಗಿಯೂ ಇವೆ. ಅಧಿಕ ಸಿಲಿಕಾಂಶದ ಜ್ವಾಲಾಮುಖಿಜ ಶಿಲೆಗಳು ರೂಪಾಂತರಿಸಿ ಒಪಾಲ್ಸೆಂಟ್ ಬೆಣಚಿನಿಂದ ಕೂಡಿದ ಶಿಲೆಗಳಾಗಿವೆ. ಇವು ಚಿತ್ರದುರ್ಗ ಜಿಲ್ಲೆಯ ಮಲೆಬೆನ್ನೂರು ಮತ್ತು ತೆಕ್ಕಲುವಟ್ಟಿ ಬಳಿ ಸಿಗುವುವು. ಮಿತ ಸಿಲಿಕಾಂಶ ಮತ್ತು ಅಲ್ಪ ಸಿಲಿಕಾಂಶ ಶಿಲೆಗಳು ರೂಪಾಂತರದಿಂದ ಪದರು ರಚನೆಪಡೆದು ತಿಳಿ ಹಸಿರುಬಣ್ಣದ ಕ್ಲೋರೈಟ್ ಪದರು ಶಿಲೆಗಳಾಗಿವೆ. ಇವುಗಳಿಗೆ ಸಣ್ಣಕಣರಚನೆ ಇದೆ. ಇವು ಶಿವಮೊಗ್ಗ ಮತ್ತು ಚಿತ್ರದುರ್ಗಶಿಲಾಪ್ರದೇಶಗಳಲ್ಲಿವೆ.
2. ಕಣರಚನೆಯ ಪದರು ಶಿಲೆಗಳು : ಧಾರವಾಡ ಪದರುಶಿಲಾವರ್ಗದ ಬಹುಭಾಗ ಅನೇಕ ಬಗೆಯ ಕಣರಚನೆಯಿಂದ ಕೂಡಿರುವ ಪದರುಶಿಲೆಗಳಿಂದಲೂ ಕಣಕ ಶಿಲೆಗಳಿಂದಲೂ ಕೂಡಿದೆ. ಇವುಗಳಲ್ಲಿ ಮುಖ್ಯವಾದವು : (i) ಕ್ಲೋರೈಟ್ ಪದರುಶಿಲೆ ; (ii) ಮೈಕಾ ಪದರುಶಿಲೆ ; (iii) ಕಪ್ಪು ಹಾರ್ನ್ಬ್ಲೆಂಡ್ ಪದರುಶಿಲೆ ; (iv) ಟ್ರಿಮೊಲೈಟ್ ಆಕ್ಟಿನೊಲೈಟ ಪದರುಶಿಲೆ ; (v) ಕ್ಯಾಲ್ಕ್ಪೈರಾಕ್ಸೀನ್ ಕಣಕ ಶಿಲೆಗಳು ; (vi) ಕಯನೈಟ್ ಸ್ಟಾರೊಲೈಟ್ ಪದರುಶಿಲೆ ; (vii) ಕಾರ್ಡಿಯರೈಟ್ ಸಿಲಿಮನೈಟ್ ಪದರುಶಿಲೆ ; (viii) ಟಾಲ್ಕ್ ಬಯೊಟೈಟ್ ಪದರುಶಿಲೆ, (ix) ಕಯನೈಟ್ ಸಿಲಿಮನೈಟ್ -ಗ್ರಾಫೈಟ್ ಪದರುಶಿಲೆ.
3. ವಿರೂಪ ಜಲಜಶಿಲೆಗಳು : ಈ ಶಿಲೆಗಳು ಇತರ ಶಿಲೆಗಳಿಗಿಂತ ಕಡಿಮೆಯಾಗಿದ್ದರೂ ಉತ್ಪತ್ತಿಯ ರೀತಿಯಿಂದ ಬಹುಮುಖ್ಯವೆನಿಸಿವೆ. ಇವು ಅನೇಕ ಭೂವೈe್ಞÁನಿಕ ಕಾರಣಗಳಿಂದಾಗಿ ವಿರೂಪಹೊಂದಿರುವುವು. ಇವುಗಳಲ್ಲಿ ಮುಖ್ಯವಾದವು : (i) ಕಂಗ್ಲಾಮರೇಟುಗಳು ; (ii) ಕ್ವಾಟ್ರ್ಜೈಟುಗಳು ; (iii) ಪೆರುಜಿನಸ್ ಕ್ವಾಟ್ರ್ಜೈಟುಗಳು ; (iv) ಫಿಲ್ಲೈಟುಗಳು ಮತ್ತು ಅರ್ಜಿಲೈಟುಗಳು ; (v) ಗ್ರೇವಾಕುಗಳು ; (vi) ಸುಣ್ಣಶಿಲೆಗಳು. ಇವುಗಳಲ್ಲದೆ ಅತ್ಯಲ್ಪ ಸಿಲಿಕಾಂಶ (ಅಲ್ಟ್ರ ಬೇಸಿಕ್) ಶಿಲೆಗಳು ದೊಡ್ಡ ಪರಿಮಾಣದಲ್ಲಿ ಪದರುಶಿಲೆಗಳನ್ನು ಭೇದಿಸಿವೆ. ಇವನ್ನು ಟ್ರಾಸ್ ಶಿಲೆಗಳೆಂದೂ ಕರೆಯುವುದುಂಟು. ಗ್ರಾನೈಟ್ ಮತ್ತು ನೈಸುಗಳು : ಕರ್ಣಾಟಕ ರಾಜ್ಯದ ಬಹುಭಾಗವನ್ನಾವರಿಸಿರುವ ಈ ಶಿಲೆಗಳಲ್ಲಿ ಸ್ಮೀತ್ ನಾಲ್ಕು ರೀತಿಯ ಶಿಲೆಗಳನ್ನು ಗುರುತಿಸಿ (1916) ಇವು ವಿವಿಧ ಅಂತಸ್ಸರಣ ಕಾಲಗಳಿಗೆ ಸಂಬಂಧಿಸಿದುವೆಂದು ತೋರಿಸಿದ್ದಾನೆ.
4. ಕ್ಲೋಸ್ಪೇಟೆ ಗ್ರಾನೈಟ್ ಈ ನಾಲ್ಕು ಶಿಲಾಗುಂಪುಗಳಲ್ಲಿಯೂ ಅನೇಕ ಪ್ರಭೇದಗಳಿವೆ.
3. ಚಾರ್ನಕೈಟ್ ಇವು ಆಳದಲ್ಲಿ ವಿವಿಧ ಕಾಲಗಳಲ್ಲಿ ಮಾತೃಶಿಲಾದ್ರವದಿಂದ
2. ಪೆನಿನ್ಸುಲಾರ್ ನೈಸ್ ಹೊರಬಂದವು. ಸ್ಮೀತ್ ಮಾಡಿರುವ ಈ ವಿಂಗಡಣೆ ಈಗಲೂ
1. ಚಾಂಪಿಯನ್ ನೈಸ್ ಬಳಕೆಯಲ್ಲಿದೆ.
1. ಚಾಂಪಿಯನ್ ನೈಸ್ ಶಿಲೆಗಳು ಗ್ರಾನಿಟಿಕ್ ಶಿಲೆಗಳಲ್ಲಿ ಅತ್ಯಂತ ಪುರಾತನವಾದವು ; ಕೋಲಾರ ಚಿನ್ನದ ಗಣಿಪ್ರದೇಶ, ಶೃಂಗೇರಿ ಮತ್ತು ಭದ್ರಾವತಿ ಸಮೀಪದಲ್ಲಿ ಹರಡಿವೆ. ಇವನ್ನು ಮೊಟ್ಟಮೊದಲು ಕೋಲಾರ ಪದರು ಶಿಲಾವಲಯದಲ್ಲಿ ಗುರುತಿಸಲಾಯಿತು. ಹೆಚ್ಚು ಅಭ್ರಕದಿಂದ ಕೂಡಿದ್ದು ಬೂದು ಬಣ್ಣದ ಒಪಾಲಸೆಂಟ್ ಬೆಣಚು ಇರುವುದು ಇವುಗಳ ವಿಶೇಷ ಲಕ್ಷಣ. ಇವು ಪೆನಿನ್ಸುಲಾರ್ ನೈಸುಗಳಿಗಿಂತ ಹಿರಿಯವು. ಆದರೆ ಪೆನಿನ್ಸುಲಾರ್ನೈಸಿನ ಕೆಲವು ಶಿಲಾವಿಧಗಳನ್ನು ಈ ಗುಂಪಿನ ಶಿಲೆಗಳಿಂದ ಗುರುತಿಸುವುದು ಬಹಳ ಕಷ್ಟ.
2. ಕರ್ಣಾಟಕದ ಬಹುಭಾಗವನ್ನಾಕ್ರಮಿಸಿರುವ ನೈಸ್ ಮತ್ತು ಗ್ರಾನೈಟ್ ಶಿಲಾತೊಡಕನ್ನು ಪೆನಿನ್ಸುಲಾರ್ನೈಸ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಮುಖ್ಯ ಶಿಲಾವಿಧಗಳೆಂದರೆ ಗ್ವಾನೋಡಯೊರೈಟ್, ನೈಸಿಕ್ ಗ್ರಾನೈಟ್ ಮತ್ತು ಕಲಬೆರಕೆ ನೈಸುಗಳು ಇವೆಲ್ಲ ಬಹುಮಟ್ಟಿಗೆ ಒಂದೇ ಅಂತಸ್ಸರಣ ಕಾಲದವೇ ಅಥವಾ ಬೇರೆ ಬೇರೆ ಕಾಲಗಳಿಗೆ ಸೇರಿವೆಯೇ ಎಂದು ಹೇಳುವುದು ಕಷ್ಟ. ಅಂತೂ ಇವು ಚಾಂಪಿಯನ್ ನೈಸುಗಳಿಗಿಂತ ಕಿರಿಯವೆಂದು ಸ್ಮೀತ್ ಅಭಿಪ್ರಾಯ ಪಟ್ಟಿದ್ದಾನೆ.
3. ಚಾರ್ನಕೈಟ್ ಶಿಲೆಗಳು ಧಾರವಾಡ ಶಿಲಾವರ್ಗವನ್ನು ಭೇದಿಸುವ ಮೂರನೆಯ ಅಂತಸ್ಸರಣ ಶ್ರೇಣಿ. ಬಿಳಿಗಿರಿರಂಗನಬೆಟ್ಟದ ಸಾಲು, ಪಿರಿಯಾಪಟ್ಟಣದ ಪಶ್ಚಿಮಭಾಗ ಮತ್ತು ಕೊಡಗು ಪ್ರದೇಶಗಳಲ್ಲಿ ಈ ಶಿಲಾಸಮೂಹ ಇದೆ. ಇದಲ್ಲದೆ ರಾಮನಗರ, ಮದ್ದೂರು, ಮಳವಳ್ಳಿ, ಹಲಗೂರು ಮತ್ತು ಇತರ ಪ್ರದೇಶಗಳಲ್ಲಿ ಹೈಪರಸ್ತೀನ್ ಇರುವ ಅಥವಾ ಇಲ್ಲದಿರುವ ಕಣಶಿಲಾವಿಧಗಳಿವೆ.
ಚಾರ್ನಕೈಟುಗಳ ಉತ್ಪತ್ತಿಯ ಬಗ್ಗೆ ವಿವಾದವಿದೆ. ಸರ್ ಥಾಮಸ್ ಹಾಲೆಂಡ್ ಮೊದಲು ಈ ಶಿಲೆಗಳನ್ನು ವರ್ಣಿಸಿ ಇವು ಅಗ್ನಿಶಿಲೆಗಳೆಂದು ಹೇಳಿದ. ಅನಂತರ ಎಫ್.ಎಲ್.ಸ್ಟಿಲ್ವೆಲ್ ಎಂಬಾತ ಈ ಶಿಲೆಗಳಲ್ಲಿ ಅಗ್ನಿಶಿಲಾರಚನೆ ಇದ್ದರೂ ಇವು ಪಾತಾಳ ರೂಪಾಂತರದಿಂದ (ಪ್ಲೂಟಾನಿಕ್ ಮೆಟಮಾರ್ಫಿಸಮ್) ಆದವುಗಳೆಂದು ತಿಳಿಸಿದ. ಇವು ಧಾರವಾಡಶಿಲೆಗಳ ತೀವ್ರರೂಪಾಂತರದಿಂದ ಆದವುಗಳೆಂದು ವೃಡೆನ್ಬರ್ಗನ ಅಭಿಪ್ರಾಯ. ಸಿ.ಎಸ್.ಪಿಚ್ಚಮುತ್ತುರವರು ಸಹ ಈ ಶಿಲೆಗಳು ಪೆನಿನ್ಸುಲಾರ್ ನೈಸುಗಳ ಪ್ರಾದೇಶಿಕ ರೂಪಾಂತರದಿಂದಾದವೆಂದು ಅಭಿಪ್ರಾಯ ಪಟ್ಟಿದ್ದಾರೆ. ಅಂತೂ ಚಾರ್ನಕೈಟ್ಶಿಲೆಗಳ ಉತ್ಪತ್ತಿಯ ಬಗ್ಗೆ ಇದೇ ನಿಖರವಾದ ತೀರ್ಮಾನ ಎಂದು ಹೇಳಲು ಸಾಧ್ಯವಿಲ್ಲ.
4. ಕ್ಲೋಸ್ಪೇಟೆ ಗ್ರಾನೈಟುಗಳು ಅತ್ಯಂತ ಕಿರಿಯ ಅಂತಸ್ಸರಣ ಶಿಲೆಗಳು. ಇವೂ ಬಳ್ಳಾರಿ ಬಳಿ ಇರುವ ಗ್ರಾನೈಟ್ ಶಿಲಾವಿಧಗಳೂ ಒಂದೇ ತೆರನಾಗಿರುವುದರಿಂದ ಬಿ.ರಾಮರಾಯರು ಇವನ್ನು ಬಳ್ಳಾರಿನೈಸ್ ಎಂದು ಕರೆಯುವುದು ಉಚಿತವೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಶಿಲೆಗಳು ಅನೇಕ ಕಡೆ ಇವುಗಳಿಗಿಂತ ಹಿರಿಯ ವಯಸ್ಸಿನ ಪೆನಿನ್ಸುಲಾರ್ ನೈಸ್ ಮತ್ತು ಇತರ ಗ್ರಾನೈಟ್ನೈಸ್ ಶಿಲಾವರ್ಗಗಳನ್ನು ಭೇದಿಸಿರುವುದು ಸ್ಪಷ್ಟವಾಗಿದೆ. ಇವು ದಕ್ಷಿಣದಲ್ಲಿ ಶಿವನಸಮುದ್ರದಿಂದ ಉತ್ತರದಲ್ಲಿ ಬಳ್ಳಾರಿಯವರೆಗೆ ಉದ್ದವಾಗಿ ಹಬ್ಬಿವೆ. ಈ ಶಿಲೆಗಳಿಗೆ ಸಾಮಾನ್ಯವಾಗಿ ದಪ್ಪಕಣ ರಚನೆ ಇದೆ. ಅಲ್ಲಲ್ಲಿ ಪಾರ್ಫಿರಿಟಿಕ್ ರಚನೆಯಿರುವ ಪ್ರಭೇದಗಳಿವೆ. ಇವುಗಳಲ್ಲಿರುವ ಫೆಲ್ಸ್ಪಾರ್ಕಣಗಳು ತಿಳಿಗುಲಾಬಿ ಬಣ್ಣ ಅಥವಾ ಮಾಂಸಖಂಡದ ಕೆಂಪು ಬಣ್ಣದಿಂದ ಕೂಡಿರುವ ಕಾರಣ ಗುಲಾಬಿ ಮತ್ತು ಬೂದುಬಣ್ಣದ ಶಿಲಾವಿಧಗಳುಂಟಾಗಿವೆ. ಕ್ಲೋಸ್ಪೇಟೆ (ಈಗ ರಾಮನಗರ) ಪ್ರದೇಶದ ದಕ್ಷಿಣ ಭಾಗದಲ್ಲಿ ಅಧಿಕ ಸಿಲಿಕಾಂಶದ ಪಾರ್ಫಿರಿ, ಫೆಲ್ಸೈಟ್, ಲ್ಯಾಂಪ್ರೊಫೈರ್ ಮತ್ತು ಇತರ ಡೈಕ್ ವಿಧಗಳು ಈ ಗ್ರಾನೈಟುಗಳನ್ನು ಛೇದಿಸಿವೆ. ಕ್ಲೋಸ್ಪೇಟೆ ಗ್ರಾನೈಟ್ ನಿರ್ದಿಷ್ಟವಲಯದ ಹೊರಗೆ, ಇದೇ ರೀತಿಯ ತಿಳಿ ಗುಲಾಬಿ ಮತ್ತು ಬೂದುಬಣ್ಣವಿರುವ ಪಾರ್ಪಿರಿಟಿಕ್ ಗ್ರಾನೈಟ್ ವಿಧಗಳು ಚಿತ್ರದುರ್ಗ, ಹೊಸದುರ್ಗ, ಅರಸೀಕೆರೆ, ಬಾಣಾವರ, ಕೈವಾರ (ಚಿಂತಾಮಣಿ ಬಳಿ) ಮತ್ತು ಮೈಸೂರು (ಚಾಮುಂಡಿಬೆಟ್ಟ) ಹಾಗೂ ಹೆಗ್ಗಡದೇವನಕೋಟೆ ಬಳಿ ಇವೆ.
ಡೈಕ್ ಶಿಲೆಗಳು : ಆರ್ಷೇಯ ಕಲ್ಪದ ಶಿಲಾವಿಧಗಳನ್ನೆಲ್ಲ ಛೇದಿಸಿರುವ ಅನೇಕ ವಿಧವಾದ ಡೈಕ್ ಸಮೂಹಗಳನ್ನು ಕೆಳಗೆ ಸೂಚಿಸಿದೆ.
1. ಕಪ್ಪು ಹಾರ್ನ್ಬ್ಲೆಂಡ್ ಡೈಕುಗಳು : ತುಮಕೂರಿಗೆ ಪಶ್ಚಿಮ ಭಾಗದಲ್ಲೂ ಹಾಸನಕ್ಕೆ ಪೂರ್ವಭಾಗದಲ್ಲೂ ಹರಡಿವೆ. ತಿಪಟೂರಿಗೆ ಉತ್ತರ ಮತ್ತು ದಕ್ಷಿಣದಲ್ಲಿ ಅತಿ ಒತ್ತಾಗಿ ಹರಡಿವೆ.
2. ನೊರೈಟ್ ಡೈಕುಗಳು : ಬಿಡದಿ, ಹಾರೋಹಳ್ಳಿ, ಮಧ್ಯೆ, ಹುಣಸೂರಿಗೆ ಪಶ್ಚಿಮ ಮತ್ತು ನೈಋತ್ಯ ದಿಕ್ಕಿನಲ್ಲಿ ಹೆಚ್ಚಾಗಿವೆ.
3. ಫೆಲ್ಸೈಟ್ ಮತ್ತು ಪಾರ್ಫಿರಿ ಡೈಕುಗಳು : ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣದ ಸುತ್ತಮುತ್ತಲೂ ಕ್ಲೋಸ್ಪೇಟೆ ಗ್ರಾನೈಟ್ ಶಿಲೆಗಳಲ್ಲಿಯೂ ಇವೆ.
4. ಡಾಲರೈಟ್ ಮತ್ತು ಎನ್ಸ್ಟಟೈಟ್ ಡೈಕುಗಳು : ಕ್ಲೋಸ್ಪೇಟ್ ಗ್ರಾನೈಟುಗಳೊಂದಿಗಿರುವ ಫೆಲ್ಸೈಟ್ ಮತ್ತು ಪಾರ್ಫಿರಿಗಳನ್ನು ಛೇದಿಸಿವೆ. ಇವು ಆರ್ಷೇಯ ಕಲ್ಪದಲ್ಲಿ ಅತ್ಯಂತ ಕಿರಿಯಶಿಲಾವಿಧಗಳಾದ್ದರಿಂದ ಈ ಕಲ್ಪವಾದ ತರುವಾಯ ಅಂತಸ್ಸರಣಗೊಂಡಿರಬಹುದೆಂದು ಪರಿಗಣಿಸಲಾಗಿದೆ.
ಪುರಾಣಯುಗ (ಪ್ರೀಕೇಂಬ್ರಿಯನ್) ಕಲಾದಗಿ ಶಿಲಾಶ್ರೇಣಿ : ಕರ್ಣಾಟಕದ ಉತ್ತರಭಾಗದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಬೆಳಗಾಂವಿ ಮತ್ತು ಕಲಾದಗಿಗಳ ಮಧ್ಯೆ ಸುಮಾರು 260 ಕಿಮೀ. ಉದ್ದ ಹಾಗು 65-100 ಕಿಮೀ. ಅಗಲವಿದ್ದು ಪೂರ್ವಪಶ್ಚಿಮವಾಗಿ ಹಬ್ಬಿರುವ ರೂಪಾಂತರಿತ ಜಲಜಶಿಲಗಳಿವೆ. ಈ ಶಿಲಾವಿಧಗಳಿಗೆ ಕಲಾದಗಿ ಶಿಲಾಶ್ರೇಣಿಯೆಂದು ಹೆಸರು. ಇವು ಸಮತಲವಾಗಿ ಧಾರವಾಡ ಪದರುಶಿಲಾವಿಧಗಳ ಮೇಲೆ ಅನನುರೂಪತೆಯಿಂದ ಹರಡಿವೆ. ಇವುಗಳ ಮಂದ ಸುಮಾರು 3050-4575 ಮೀಟರುಗಳಷ್ಟು. ಇವನ್ನು ಕೆಳಕಲಾದಗಿ ಮತ್ತು ಮೇಲು ಕಲಾದಗಿ ಎಂದು ಎರಡು ವರ್ಗಗಳಾಗಿ ವಿಭಜಿಸಿದ್ದಾರೆ. ಈ ಶಿಲಗಳ ಓಟ ಉತ್ತರ ಪಶ್ಚಿಮವಾಗಿದ್ದು ___ ಗಳಿಗಿಂತ ಕಡಿಮೆ ಪಶ್ಚಿಮಕ್ಕೆ ಬಾಗಿವೆ. ಮುಖ್ಯವಾಗಿ ಕಂಗ್ಲಾಮರೇಟು, ಮರಳುಶಿಲೆ, ಕ್ವಾಟ್ರ್ಜೈಟ್, ಬ್ರೆಕ್ಷಿಯ, ಚೆರ್ಟ್, ಸುಣ್ಣಶಿಲೆ, ಜೇಡುಶಿಲೆ ಮತ್ತು ಹಾರನ್ ಸ್ಟೋನುಗಳಿಂದ ಕೂಡಿದೆ. ಈ ಶ್ರೇಣಿಯ ಕ್ವಾಟ್ರ್ಜೈಟ್ ಮತ್ತು ಮರಳುಶಿಲೆಗಳಲ್ಲಿ ಅಲೆಗುರುತು ಹಾಗೂ ಪ್ರವಾಹ ಪದರು ರಚನೆಗಳು ಇವೆ. ಬಾದಾಮಿ ಗುಹೆಗಳಲ್ಲಿ ಪ್ರವಾಹಪದರ ಕ್ವಾಟ್ರ್ಜೈಟುಗಳನ್ನು ಉಪಯೋಗಿಸಿ ದೇವಾಲಯಗಳನ್ನೂ ಸುಂದರಮೂರ್ತಿಗಳನ್ನು ಕೆತ್ತಿದ್ದಾರೆ. (ನೋಡಿ- ಕಲಾದಗಿ-ಶ್ರೇಣಿ)
ಭೀಮಾಶಿಲಾಶ್ರೇಣಿ : ಈ ಶಿಲಾಶ್ರೇಣಿ ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಯಲ್ಲಿ ಕೃಷ್ಣಾನದಿಯ ಉಪನದಿ ಭೀಮಾನದಿಯ ಪಾತ್ರದಲ್ಲಿ ಚೆನ್ನಾಗಿ ಹೊರಕಾಣುತ್ತದೆ. ವಿಸ್ತಾರ ಸುಮಾರು 5200 ಕಿಮೀ. ಇವು ಆರ್ಷೇಯ ಕಲ್ಪದ ಶಿಲಾವಿಧಗಳ ಮೇಲೆ ಅನನುರೂಪತೆಯಿಂದ ಹರಡಿವೆ. ಈ ಶ್ರೇಣಿಯಲ್ಲಿ ಕಂಗ್ಲಾಮರೇಟ್, ಮರಳುಶಿಲೆ ಊದಾ ಜೇಡುಶಿಲೆ ಮತ್ತು ಸುಣ್ಣಶಿಲೆಗಳು ಮುಖ್ಯವಾದವು. ಇದನ್ನು ಡಬ್ಲ್ಯು.ಕಿಂಗ್ ಮತ್ತು ಆರ್.ಬ್ರೂಸ್ಫೂಟ್ ಅವರು ಮೇಲು ಮತ್ತು ಕೆಳ ಎಂದು ವಿಂಗಡಿಸಿದರು. ಆದರೆ ಸಿ.ಮಹದೇವನ್ ಮೂರು ವಿಭಾಗಗಳಾಗಿ ವಿಂಗಡಿಸಿದರು. ಈ ಶ್ರೇಣಿಯ ಶಿಲೆಗಳು ಕರ್ನೂಲು ಶಿಲಾಸಮುದಾಯಕ್ಕೆ ಸಮಕಾಲೀನ (ಸುಮಾರು 1,450 ದಶಲಕ್ಷವರ್ಷಗಳು) ವಯಸ್ಸನ್ನು ಸೂಚಿಸುತ್ತವೆ. ಇಲ್ಲಿ ಹೇರಳವಾಗಿ ದೊರೆಯುವ ಸಣ್ಣ ಶಿಲೆಗಳನ್ನು ಸಿಮೆಂಟ್ ತಯಾರಿಸಲು ಉಪಯೋಗಿಸುತ್ತಾರೆ.
ಆರ್ಷೇಯೋತ್ತರಕಾಲದ ಅತ್ಯಲ್ಪ ಸಿಲಿಕಾಂಶದ ಡೈಕ್ ಶಿಲೆಗಳು : ಇವು ಆರ್ಷೇಯ ಕಾಲದ ತರುವಾಯ ಮೈದೋರಿವೆ. ಈ ಸಮೂಹದಲ್ಲಿ ಡಾಲರೈಟ್, ಆಲಿವೀನ್ ಡಾಲರೈಟ್, ಎನ್ಸ್ಟಟೈಟ್ ಡಾಲರೈಟ್, ಕ್ವಾಟ್ರ್ಜ್ ಡಯೋರೈಟ್, ಬಸಾಲ್ಟ್ಟ್ ಮುಂತಾದ ಶಿಲೆಗಳ ಡೈಕುಗಳಿವೆ. ಇವು ಸಾಮಾನ್ಯವಾಗಿ ಕಪ್ಪು ಗುಂಡುಗಳಂತೆ ಹೊರಕಾಣುತ್ತವೆ. ಅಲ್ಲದೆ ಪುರಾತನ ಶಿಲೆಗಳಾದ ನೈಸ್ (ಗೀರುಶಿಲೆ) ಗ್ರಾನೈಟ್ ಶಿಲೆಗಳನ್ನು ಛೇದಿಸಿಕೊಂಡು ಹೊರಬಂದಿವೆ. ಇವನ್ನು ಕಡಪ ಶಿಲಾವರ್ಗದ ಕಾಲ ಅಥವಾ ದಖನ್ ಟ್ರಾಪ್ ಕಾಲಕ್ಕೆ ಸೇರಿಸಲಾಗಿದೆ.
ದಖನ್ ಟ್ರಾಪುಗಳು : ಈ ಶಿಲೆಗಳನ್ನು ದಖನ್ ಜ್ವಾಲಾಮುಖಿಜ ಶಿಲೆಗಳೆಂದೂ ಪ್ರಸ್ಥಭೂಮಿಯಂತೆ ಎತ್ತರವಾದ ಸ್ಥಳವನ್ನು ಆವರಿಸಿರುವುದರಿಂದ ಪ್ರಸ್ಥಭೂಮಿ ಬಸಾಲ್ಟ್ ಎಂದೂ ಕರೆಯುವುದುಂಟು. ಮಧ್ಯಜೀವಿಯುಗದ ಅಂತ್ಯಕಾಲದಲ್ಲಿ (ಅಂದರೆ ಹಿಮಾಲಯ ಪರ್ವತಸ್ತೋಮ ರೂಪುಗೊಳ್ಳುವುದಕ್ಕೆ ಮುಂಚೆ) ಉಂಟಾದ ಭೂ ಚಲನೆಯಿಂದ ಭೂಮಿಯ ಹೊರಮೈಯ್ಯಲ್ಲಾದ ಬಿರುಕುಗಳ ಮೂಲಕ ಅತ್ಯಧಿಕ ಪ್ರಮಾಣದ ಶಿಲಾರಸ (ಲಾವಾ) ಹೊರಹೊಮ್ಮಿ ವಿಶಾಲ ಭಾಗವನ್ನು ಆವರಿಸಿಕೊಂಡಿತ್ತು. ಇಂಥ ಕ್ರಿಯೆಗೆ ಸೀಳುಶಿಲಾರಸ ಹೊರಚಿಮ್ಮುವಿಕೆ (ಫಿಶ್ಯರ್ ಎರಪ್ಷನ್ಸ್) ಎಂದು ಹೆಸರು. ದಖನ್ ಟ್ರಾಪುಗಳು ಇಂಥ ಪ್ರದೇಶದಲ್ಲಿ ವ್ಯಾಪಿಸಿವೆ. ಈ ಶಿಲೆಗಳ ಹೊರಸ್ತರ ಹಂತಹಂತವಾಗಿ ಕಾಣುವುದರಿಂದ ಇವುಗಳಿಗೆ ಟ್ರಾಪ್ ಶಿಲೆಗಳೆಂದು ಹೆಸರುಬಂದಿದೆ. ಕೆÀಲವು ಪ್ರದೇಶಗಳಲ್ಲಿ ಟ್ರಾಪ್ಸ್ತರಗಳ ಅಡಿಯಲ್ಲಿ, ಮಧ್ಯದಲ್ಲಿ ಮತ್ತು ಮೇಲೆ ಜಲಜ ಶಿಲಾವಿಧಗಳಿವೆ. ಇವುಗಳಿಗೆ ಅನುಕ್ರಮವಾಗಿ ಟ್ರಾಪ್ ಕೆಳಸ್ತರ ಅಂತರ, ಟ್ರಾಪ್ಸ್ತರ, ಟ್ರಾಪ್ ಮೇಲುಸ್ತರಗಳೆಂದು ಹೆಸರು. ಇವುಗಳಲ್ಲಿರುವ ಜೀವ್ಯವಶೇಷಗಳ ಆಧಾರದ ಮೇಲೆ ಟ್ರಾಪ್ ವಯಸ್ಸು ಕ್ರಿಟೇಷಸ್ಸಿನಿಂದ ಇಯೋಸೀನ್ವರೆಗೆ ವ್ಯಾಪಿಸಿದೆ ಎಂದು ಅಭಿಪ್ರಾಯಪಡಲಾಗಿದೆ. ಭಾರತದ ದಕ್ಷಿಣ ಮತ್ತು ಪಶ್ಚಿಮಭಾಗಗಳಲ್ಲಿ ದಖನ್ ಟ್ರಾಪ್ ಶಿಲೆಗಳು ವಿಶಾಲವಾಗಿ ಹರಡಿವೆ. ಕರ್ಣಾಟಕದಲ್ಲಿ ಬೆಳಗಾಂವಿ, ಬಿಜಾಪುರ ಮತ್ತು ಗುಲ್ಬರ್ಗದ ಹಲವಾರು ಭಾಗಗಳಲ್ಲಿ ಒಟ್ಟು ಸುಮಾರು 25,900 ಚದರ ಕಿಲೋಮೀಟರುಗಳಷ್ಟು ಪ್ರದೇಶದಲ್ಲಿ ಇವುಗಳ ವ್ಯಾಪ್ತಿ ಉಂಟು. ಮಂದ ಸುಮಾರು 60 ಮೀಟರ್. ಈ ಶಿಲೆಗಳು ಅನೇಕ ಹಳೆಯ ಶಿಲಾಸಮುದಾಯಗಳ ಮೇಲೆ ಅನನುರೂಪತೆಯಾಗಿ ವಿಸ್ತರಿಸಿವೆ. ಸತತ ಸವೆತದಿಂದ ದಖನ್ ಟ್ರಾಪ್ ಶಿಲೆಗಳು ಮತ್ತು ಲ್ಯಾಟರೈಟ್ ಎಂಬ ನಿಕ್ಷೇಪಗಳಾಗಿವೆ. ಇವುಗಳಿಗೆ ಶೇಷ ನಿಕ್ಷೇಪಗಳೆಂದು ಹೆಸರು. ಸಾಧಾರಣ ರೀತಿಯಲ್ಲಿ ಶಿಲೆ ಶಿಥಿಲವಾಗಿ ಕಪ್ಪು ಮಣ್ಣು ಉಂಟಾಗುತ್ತದೆ. ಇಂಥ ಮಣ್ಣು ಬಹಳ ಫಲವತ್ತಾಗಿರುತ್ತದೆ.
ತೃತೀಯ ಭೂ ಕಾಲಯುಗದ ಶಿಲಾಸಮುದಾಯಗಳು. ಲ್ಯಾಟರೈಟ್ : "ಈ ನಿಕ್ಷೇಪಗಳು ಭೂಮಿಯ ಹೊರಪದರದ ಶಿಲಗಳ ಬದಲಾವಣೆಯಿಂದಾಗಿವೆ. ಇಂಥ ಬದಲಾವಣೆಗಳು ಭಾರತ ಮತ್ತೆ ಹಲವು ಉಷ್ಣವಲಯದ ದೇಶಗಳಲ್ಲಿನ ಗ್ರಾನೈಟ್, ನೈಸ್ ಪದರುಶಿಲೆ ಮತ್ತು ಬಸಾಲ್ಟ್ ಇತ್ಯಾದಿ ಶಿಲೆಗಳ ಬದಲಾವಣೆಯಿಂದಾಗುವುವು. ಕಬ್ಬಿಣ, ಮ್ಯಾಂಗನೀಸ್ ಮತ್ತು ಅಲ್ಯೂಮಿನಿಯಂ ಅಂಶಗಳು ಹೆಚ್ಚಾಗಿ ಇರು ಲ್ಯಾಟರೈಟ್ ಉತ್ತಮ ಅದುರು ನಿಕ್ಷೇಪಗಳೆನಿಸಿವೆ. ಲೋಹಾಂಶವನ್ನು ಅನುಸರಿಸಿ ಇವುಗಳ ಬಣ್ಣ ಹಳದಿಮಿಶ್ರಿತ ಕೆಂಪು ಬೂದು ಮತ್ತು ಕಪ್ಪು ಕಂದು. ಕರ್ಣಾಟಕದಲ್ಲಿ ಇವು ಕೋಲಾರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಬೆಳಗಾಂವಿ ಜಿಲ್ಲೆಯಲ್ಲಿ ಅನೇಕ ಕಡೆ ಇವೆ. ಲ್ಯಾಟರೈಟುಗಳನ್ನು ಮಲೆನಾಡು ಮುಂತಾದ ಕಡೆ ಅಗೆದು ಹೊರತೆಗೆದು ದೊಡ್ಡ ದೊಡ್ಡ ಇಟ್ಟಿಗೆ ರೂಪದಲ್ಲಿ ಕತ್ತರಿಸಿ ಗೋಡೆಗಳನ್ನು ಕಟ್ಟಲು ಉಪಯೋಗಿಸುತ್ತಾರೆ.
ಇತ್ತೀಚಿನ ಕಾಲದ ಶಿಲಾಸಮುದಾಯಗಳು : ಇತ್ತೀಚಿನ ಶಿಲಾಸಮುದಾಯಗಳಲ್ಲಿ ತೀರಪ್ರದೇಶದ ನಿಕ್ಷೇಪಗಳು, ಮೆಕ್ಕಲು ನಿಕ್ಷೇಪಗಳು ಮತ್ತು ಮಣ್ಣುಗಳು ಮುಖ್ಯವಾದವು.
ತೀರಪ್ರದೇಶದ ನಿಕ್ಷೇಪಗಳು : ಕರ್ಣಾಟಕದ ಪಶ್ಚಿಮ ಭಾಗದ ಸಮುದ್ರತೀರದಲ್ಲಿ ಮಂಗಳೂರಿಗೆ ಸ್ವಲ್ಪ ದಕ್ಷಿಣದಿಂದ ಕಾರವಾರದವರೆಗೆ ಇವು ಹಬ್ಬಿವೆ. ಇವುಗಳಲ್ಲಿ ಬಹುಶಃ ಲ್ಯಾಟರೈಟುಗಳೂ ಸೇರುತ್ತವೆ. ಇವು ಪ್ಲೀಸ್ಟೋಸೀನ್ ಕಾಲದಿಂದ ಇತ್ತೀಚಿನ ಕಾಲದವು.
ಮೆಕ್ಕಲು ನಿಕ್ಷೇಪಗಳು : ನದಿಗಳ ಇಕ್ಕೆಲಗಳಲ್ಲಿಯೂ ಅಳಿವೆಯ ಗಾಳಿಯಿಂದ ತೂರಿಬಂದ ಮತ್ತು ಇತರ ಶಿಲಾವಿಧಗಳು ಸೇರಿವೆ. ಇವು ವ್ಯವಸಾಯಕ್ಕೆ ಫಲವತ್ತಾದ ಪ್ರದೇಶಗಳು.
ಮಣ್ಣುಗಳು : ವಿವಿಧ ಶಿಲೆಗಳ ಸತತವಾದ ಶಿಥಿಲತೆಯಿಂದಾದ ಹಲವಾರು ಬಗೆಯ ಮಣ್ಣುಗಳ ಉತ್ಪತ್ತಿಯಾಗಿವೆ. 1. ಕಪ್ಪು ಮಣ್ಣು ಅಥವಾ ಎರೆಮಣ್ಣು ಚಿತ್ರದುರ್ಗದ ಜಿಲ್ಲೆ, ಚಾಮರಾಜನಗರ, ಗುಂಡ್ಲುಪೇಟೆ ಮತ್ತು ನಂಜನಗೂಡು ತಾಲ್ಲೂಕು, ಸ್ವಲ್ಪ ಭಾಗ ಮಂಡ್ಯ ಜಿಲ್ಲೆಯಲ್ಲಿಯೂ ಕಾಣಬರುತ್ತದೆ. 2. ಹಳದಿಮಣ್ಣು ಬಲು ನುಣುಪು. ಇದು ಷಿಕಾರಿಪುರ, ಕುಂಸಿ, ಸೊರಬ ತಾಲ್ಲೂಕುಗಳಲ್ಲಿ ಅನೇಕ ಕಡೆ ಮತ್ತು ಪದರು ಶಿಲಾವಲಯಗಳಲ್ಲಿದೆ. 3. ಕೆಂಪು ಮಣ್ಣು. ಇದು ಗ್ರಾನೈಟ್, ನೈಸುಗಳು ಶಿಥಿಲವಾಗಿ ಉತ್ಪತ್ತಿಯಾಗುತ್ತದೆ. 60-130 ಸೆಂಮೀ. ಆಳದವರೆಗೆ ಇರುವುದು. ಇದನ್ನು ಬೆಂಗಳೂರು, ತುಮಕೂರು, ಕೋಲಾರ ಇತ್ಯಾದಿ ಪ್ರದೇಶಗಳಲ್ಲಿ ಕಾಣಬಹುದು. 4. ಉಪ್ಪು ಮತ್ತು ಕ್ಷಾರ ಮಣ್ಣುಗಳು. ಮೈಸೂರು, ಮಂಡ್ಯ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕೆಲವೆಡೆ ಇವೆ. ಇವನ್ನು ಚೌಳುಪ್ಪು ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಗ್ರಾನೈಟ್ ಅಥವಾ ನೈಸ್ ವಲಯಗಳಲ್ಲಿ ತಗ್ಗಾದ ಜೌಗು ಪ್ರದೇಶದಲ್ಲಿ ಮಳೆಗಾಲದಲ್ಲಿ ಈ ಮಣ್ಣುಗಳ ಉತ್ಪತ್ತಿ ಆಗುವುದು. 5. ಕಂಕರ್ ಮತ್ತು ಕಂಕರ್ ಮಣ್ಣುಗಳು. ಗ್ರಾನಿಟಿಕ್ ನೈಸುಗಳು. ಪದರುಶಿಲೆಗಳು ಮತ್ತು ಕರಿಕಲ್ಲುಗಳಿಂದ (ಡಾಲರೈಟ್) ಇವು ಉತ್ಪತ್ತಿಯಾಗುತ್ತವೆ. ಇವು ಉಂಡಿಯಾಕಾರದ ಕೆಳದರ್ಜೆಯ ಸುಣ್ಣಕಲ್ಲುಗಳು.
ಕರ್ಣಾಟಕದ ಶಿಲೆಗಳ ವಯಸ್ಸು : ಶಿಲೆಗಳ ವಯೋನಿರ್ಧಾರ ಸಾಧಾರಣ ಜಲಜಶಿಲೆಗಳಂತೆ ಸುಲಭವಲ್ಲ. ಕಾರಣ ಅತಿ ಪುರಾತನಕಾಲದವು ಅವು ಉತ್ಪತ್ತಿಯಾದ ಅನಂತರ ಹಲವಾರು ಭೂಕ್ರಿಯೆಗಳಿಂದಾಗಿ ಅನೇಕ ರೀತಿಯಲ್ಲಿ ಮಾರ್ಪಟ್ಟಿವೆ. ಮೇಲಾಗಿ ಈ ಶಿಲೆಗಳಲ್ಲಿ ಪ್ರಾಚೀನ ಶಿಲೆಗಳ ಅವಶೇಷಗಳಿಲ್ಲದಿರುವುದು ಮತ್ತಷ್ಟು ತೊಡಕನ್ನೊಡ್ಡಿದೆ. ಈ ರಾಜ್ಯದ ಶಿಲೆಗಳನ್ನು ಅಂತರರಾಷ್ಟ್ರೀಯ ಭೂ ಇತಿಹಾಸ ಕಾಲ ಪ್ರಮಾಣದ ಪಟ್ಟಿಗೆ ಹೋಲಿಸಿ ಈ ಪುಟದ ಕೊನೆಯಲ್ಲಿರುವ ಪಟ್ಟಿಯಲ್ಲಿ ಬರೆದಿದೆ.
ಹಲವಾರು ಭೂವಿe್ಞÁನಿಗಳು ಕರ್ಣಾಟಕದ ಶಿಲಾವಿಧಗಳ ವಯೋನಿರ್ಧಾರ ಮಾಡಲು ಪ್ರಯತ್ನಿಸಿದ್ದಾರೆ. ಆ ಪ್ರಕಾರ ಈ ಶಿಲಾವಿಧಗಳ ವಯಸ್ಸು ಸುಮಾರು 1,500-2,000 ದಶಲಕ್ಷವರ್ಷಗಳೆಂದು ಪರಿಗಣಿಸಲಾಗಿದೆ. ಆರ್ಥರ್ ಹೋಮ್ಸನ ಪ್ರಕಾರ (1956) ಭಾರತದ ಆರ್ಷೇಯ ಕಾಲದ ಶಿಲಾವಿಧಗಳ ವಯಸ್ಸು 4,500 ದಶಲಕ್ಷವರ್ಷಗಳು ಮತ್ತು ಧಾರವಾಡ ಪದರುಶಿಲಾವರ್ಗದ ವಯಸ್ಸು ಸುಮಾರು 3,500 ದಶಲಕ್ಷವರ್ಷಗಳು. ಇತ್ತೀಚೆಗೆ ಎ.ಆರ್.ಕ್ರಾಫರ್ಡ್ ಎಂಬುವರು ಧಾರವಾಡ ಶಿಲಾಸಮುದಾಯಗಳ ವಯಸ್ಸು ಅನಿಶ್ಚಿತವಾದರೂ ರುಬಿಡಿಯಂ (ಖb) ಮತ್ತು ಸ್ಟ್ರಾನ್ಷಿಯಂ (Sಡಿ) ಪ್ರಮಾಣದ ಆಧಾರದ ಮೇಲೆ ಚಿತ್ರದುರ್ಗದ ಬಳಿ ಇರುವ ಲಾವಾ ಶಿಲಾಸ್ತರಗಳ ವಯಸ್ಸು 2,400 ರಿಂದ 2,450 ದಶಲಕ್ಷ ವರ್ಷಗಳು ಮತ್ತು ಕ್ಲೋಸ್ಪೇಟೆ (ರಾಮನಗರ) ಗ್ರಾನೈಟ್ ವಯಸ್ಸು ಸುಮಾರು 2,400 ರಿಂದ 2,450 ದಶಲಕ್ಷವರ್ಷಗಳೆಂದು ನಿರ್ಧರಿಸಿದ್ದಾರೆ (1969).
ಭೂ ಇತಿಹಾಸದ ಯುಗ ಭೂ ಇತಿಹಾಸದ ಕಾಲ ಕರ್ಣಾಟಕದ ಶಿಲಾ ಸಮುದಾಯಗಳು ಕಳೆದಿರುವ ಕಾಲ (ದಶಲಕ್ಷ ವರ್ಷಗಳಲ್ಲಿ) ವಯಸ್ಸು (ದಶಲಕ್ಷ ವರ್ಷಗಳಲ್ಲಿ)
ನವೀನ ಜೀವಿ ಯುಗ ಚತುರ್ಥ ಭೂಕಾಲಯುಗ ಇತ್ತೀಚಿನ ಕಾಲ ಪ್ಲೀಸ್ಟೋಸೀನ್ ತೃತೀಯ ಭೂಕಾಲಯುಗ ಪ್ಲಿಯೊಸೀನ್ ಮಯೋಸೀನ್ ಆಲಿಗೋಸೀನ್ ಇಯೊಸೀನ್
ಲ್ಯಾಟರೈಟ್
(ಇಯೊಸೀನ್ ಮತ್ತು ಕ್ರಿಟೇಷಸುಗಳು ಒಟ್ಟಾಗಿ ದಖನ್ ಟ್ರಾಪ್)
-- 1
14 15 10 20
-- 1
15 30 40 60
ಮಧ್ಯ ಜೀವಿಯುಗ ಕ್ರಿಟೇಷಸ್ ಜುರಾಸಿಕ್ ಟ್ರಯಾಸಿಕ್
65 33 27 125 158 185
ಪ್ರಾಚೀನ ಜೀವಿ ಯುಗ ಪರ್ಮಿಯನ್ ಕಾರ್ಬಾನಿಫೆರಸ್ ಡೆವೋನಿಯನ್ ಸೈಲೂರಿಯನ್ ಆರ್ಡೊವಿಶಿಯನ್ ಕೇಂಬ್ರಿಯನ್ (ಕ್ರಿಟೇಷಸಿನಿಂದ ಕೇಂಬ್ರಿಯನ್ವರೆಗಿನ ಶಿಲಾ ಸಮುದಾಯಗಳನ್ನು ಕರ್ಣಾಟಕದಲ್ಲಿಲ್ಲ) 40 85 45 25 70 100 225 310 355 380 450 550
ನಿರ್ಜೀವಿ ಯುಗ ಆಲ್ಗಾಂಕಿಯನ್
ಆರ್ಷೇಯ ಶಿಲಾತೊಡಕು (ಅಡಿಪಾಯ ತಿಳಿಯದು) ಪುರಾಣಯುಗ ಭೀಮಾಶ್ರೇಣಿ ಕಲಾದಗಿಶ್ರೇಣಿ
ಗ್ರಾನಿಟಿಕ್ ಅಂತಸ್ಸರಗಳು ಧಾರವಾಡ ಶಿಲಾಸಮುದಾಯಗಳು 900 1450
2000
(ಎಂ.ಎನ್.ಎಂ.)