ಪುಟ:Mrutyunjaya.pdf/೫೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೨೬ ಮೃತ್ಯುಂಜಯ

ಐಗುಪ್ತದ ರಾಜಕೀಯ ಚೌಕಮಣೆ ಆಟದ ಪ್ರಧಾನ ಆಟಗಾರ. ಮಹಾ
ಅರ್ಚಕರಿಂದ ಸಣ್ಣ ಮನುಷ್ಯನೊಬ್ಬನ ವಿಚಾರಣೆಯ ವೀಕ್ಷಣೆ? ಆಶ್ಚರ್ಯ !
ಹಾಗಾದರೆ ಆ ಬರಿದು ಪೀಠಗಳು ಮಹಾ ಅರ್ಚಕರ ಪರಿವಾರದವರಿಗೆ ?

ಪ್ರತಿಮೆಗಳು ಕುಳಿತಲ್ಲೇ ಮಿಸುಕುತ್ತಿವೆ. ಅಲ್ಲಲ್ಲಿ ತಲೆಗಳು ಪರಸ್ಪರ
ಹತ್ತಿರಕ್ಕೆ ಬಂದು ಪಿಸುನುಡಿಯುತ್ತಿವೆ.

ಹೊರಗೆ ಕಲರವ. ಬಂದರೇನೋ ?

ತಲೆಬಾಗಿಲ ಕಣ್ಣು ಹಾಯಿಸಿದ ದಳಪತಿ ನಿಂತಲ್ಲೆ ಕಂಬವಾದ.

ಮುಂದೆ ರೂಥ್ ಲಕಾಯ ಇನೇನಿ. ಹಿಂದಿನಿಂದ ಭವ್ಯತೆಯ ಸಾಕಾರ
ಮೂರ್ತಿ ಮಹಾ ಅರ್ಚಕ ಹೇಪಾಟ್. ('ಆಬ್ಟು ಯಾತ್ರಿಕನಾಗಿ ಐಗುಪ್ತದ
ಧರ್ಮಗುರವಿಗೆ ನಮಿಸಿದ್ದೆ. ದೈವಿಕವಾದ್ದದು ಏನಿದೆ ಈ ವ್ಯಕ್ತಿಯಲ್ಲಿ. ಈತನೂ
ಪ್ರತಿಷ್ಠೆ ಅಧಿಕಾರಗಳ ಘನರೂಪವಲ್ಲವೆ?')

ಅಮಾತ್ಯ ಮತ್ತಿತರ ಕೆಲವರಿಗೆ ಮಹಾ ಅರ್ಚಕನ ಹಿಂದಿನ ಇಬ್ಬರು
ಮೂವರ ಪರಿಚಯವಿತ್ತು. ಒಬ್ಬ ಮೆಂಫಿಸಿನ ಪ್‍ಟಾ ಮಂದಿರದ ಮುಖ್ಯ ಅರ್ಚಕ.
ಇನ್ನೊಬ್ಬ ಉತ್ತರದ ಆನ್ ನಗರಿಯ ರಾ ಮಂದಿರದ ಮುಖ್ಯ ಅರ್ಚಕ.
ಮೂರನೆಯವನು ದಕ್ಷಿಣದ ವೆಸಿನಗರಿಯ ಅಮನ್ ಮಂದಿರದ ಮುಖ್ಯ ಅರ್ಚಕ.
ಅವರ ಹಿಂದೆ ನಾಲ್ವರು ದೇವಸೇವಕರು. ('ಪೆರೋನ ಪರಿಚಾರಕರಿಗೆ ಸಮ ನಲ್ಲವೆ ಇವರು?')

ಆಮೆರಬ್ ಮತ್ತಿರರು ನಮಿಸಲು ಏಳುತ್ತಿದ್ದಂತೆ ಮಹಾ ಅರ್ಚಕ
ನ್ಯಾಯಮೂರ್ತಿಯ ವೇದಿಕೆಯ ಮೆಟ್ಟಲುಗಳನ್ನೇರಿ, ತನ್ನ ದೃಷ್ಟಿಯಿಂದ ತೆಳು
ಪರದೆಯನ್ನಿರಿದು ನೋಡುತ್ತ, “ಪೆರೋನ ಆಯುರಾರೋಗ್ಯ ವರ್ಧಿಸಲಿ!”
ಎಂದ.

ಪರದೆಗೆ ಬೆನ್ನು ಹಾಕಿ ಅಲ್ಲಿದ್ದವರನ್ನು ದಿಟ್ಟಿಸಿ, ಕಟಾ೦ಜನದ ಹಿಂದಿದ್ದ
ಮೆನೆಪ್‍ಟಾನನ್ನು ನೋಡಿ. ತನ್ನ ಪೀಠದಲ್ಲಿ ಮಹಾ ಅರ್ಚಕ ಆಸೀನನಾದ.
ಮುಖ್ಯ ಅರ್ಚಕರು ಮೂವರು ಕೆಳಗೆ ಸಾಲಾಗಿದ್ದ ಪೀಠಗಳಲ್ಲಿ ಕುಳಿತರು.
ಇನೇನಿ ಮಹಾ ಅರ್ಚಕನ ಹಿಂದೆ ತುಸು ದೂರದಲ್ಲಿ ನಿಂತ. ನ್ಯಾಯ
ಮೂರ್ತಿಯ ಹಿಂದೆ ಸೆನೆಬ್. ಮುಖ್ಯ ಅರ್ಚಕರ ಹಿಂದೆ, ಉಳಿದ ದೇವಸೇವಕರು
ನಿಂತುಕೊಂಡರು.