ಸದ್ಯಕ್ಕೆ CIS-A2K(Centre for Internet and Society-Access to Knowledge) ಐದು ಭಾರತೀಯ ಭಾಷೆಗಳ ಸಮುದಾಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ(ಕನ್ನಡ,ಕೊಂಕಣಿ,ಮರಾಠಿ,ಒಡಿಯಾ ಮತ್ತು ತೆಲುಗು). ಮೇಲ್ಕಂಡ ಭಾರತೀಯ ಭಾಷೆಗಳ ಸಮುದಾಯಗಳೊಂದಿಗೆ ಕಾರ್ಯನಿರ್ವಹಿಸುವಾಗ ಅವುಗಳನ್ನು ಕಾಡುತ್ತಿರುವ ಕೆಲವು ಸಾಮಾನ್ಯ ಸಮಸ್ಯೆಗಳನ್ನು ಗುರುತಿಸಲಾಯಿತು.ಆ ಸಮಸ್ಯೆಗಳ ನಿವಾರಣೆಗಾಗಿ ಭಾರತೀಯ ವಿಕಿಪೀಡಿಯ ನಿಮಮ,ಮಾರ್ಗದರ್ಶಿ ಕೈಪಿಡಿಯನ್ನು ರಚಿಸಲಾಗಿದೆ
ಈ ಕೈಪಿಡಿಯನ್ನು ತರಲು ಯೋಚಿಸಿದಾಗ ಹೊಸ ನಿಯಮಗಳನ್ನು ರಚಿಸುವುದು ಹೇಗೆ ? ಈಗಿರುವ ನಿಯಮಗಳ ಬದಲಾವಣೆ,ಅರಳೀಕಟ್ಟೆ,ನಿಯಮಗಳ ಜಾರಿ ಹೇಗೆ ಎಂಬುದೇ ಮೊದಲಾದ ವಿಷಯಗಳನ್ನು ಸೇರಿಸಲಾಗಿತ್ತು. ನಂತರ ಭಾರತೀಯ ಭಾಷೆಗಳ ವಿಕಿಪಿಡಿಯನ್ನರ ಬಳಿ ಅವರನ್ನು ಕಾಡುತ್ತಿದ್ದ ಮಾರ್ಗದರ್ಶಿ ಸಂಬಂಧೀ ಸಮಸ್ಯೆಗಳ,ನಿಯಮಗಳ ಬಗ್ಗೆ ಚರ್ಚಿಸಲಾಯಿತು. ಈ ಕೈಪಿಡಿಯ ಮೊದಲ ಕರಡಿನ ಬಗ್ಗೆ ಅವರ ಅಭಿಪ್ರಾಯವನ್ನೂ ಕೇಳಲಾಯಿತು. ಈ ನಿಟ್ಟಿನ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಕೇಳಿದಾಗ ಅವರೆಲ್ಲಾ ಅತೀ ಉತ್ಸಾಹದಿಂದ ಪಾಲ್ಗೊಂಡರು. ಇದರಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು. ನಮ್ಮ ನಿಜವಾದ ಕೆಲಸ ಈ ಕೈಪಿಡಿಯ ಬಿಡುಗಡೆಯ ನಂತರ ಸಮುದಾಯಗಳೊಂದಿಗಿನ ಒಡನಾಟದದೊಂದಿಗೆ ಶುರುವಾಗುತ್ತದೆ. ಸಮುದಾಯಗಳಲ್ಲಿ ಈಗಿರುವ ನಿಯಮ ಮತ್ತು ಮಾರ್ಗದರ್ಶಿ ಸೂತ್ರಗಳ ಉತ್ತಮಪಡಿಸುವಿಕೆಯೇ ಈ ಕೈಪಿಡಿಯ ಉದ್ದೇಶ
ಸಂದರ್ಶನಕ್ಕೊಳಪಡಿಸಿದ ವಿಕಿಪೀಡಿಯನ್ನರು (ಹೆಸರು ಮತ್ತು ಹೈಪರ್ ಲಿಂಕುಗಳ ಅಳವಡಿಕೆ ಬಾಕಿಯಿದೆ)
- ಬೆಂಗಾಲಿ ವಿಕಿಪೀಡಿಯ
- ಇಂಗ್ಲೀಷ್ ವಿಕಿಪೀಡಿಯ
- ಕನ್ನಡ ವಿಕಿಪೀಡಿಯ
- ಕೊಂಕಣಿ ವಿಕಿಪೀಡಿಯ