13 ಗಿಯೇ ಯೋಚಿಸಿ, ಅದರಿಂದ ಉಂಟಾಗತಕ್ಕ ಕೇಡನ್ನು ತಪ್ಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಈ ಕರ್ತವ್ಯವನ್ನು ಮಾಡದೆ, ನಮಗೆ ಉಂಟಾಗತಕ್ಕೆ ಕೇಡು ಗಳೆಲ್ಲಾ ಅದೃಷ್ಟಗಳೆಂದು ನಾವು ತಿಳಿದುಕೊಂಡರೆ, ಅದಕ್ಕೆ ನಾವೇ ಉತ್ತರವಾ ದಿಗಳು, ಇಂದ್ರಿಯಪರವಶರಾಗಿ ಮಾಡಬಾರದ ಕೆಲಸಗಳನ್ನು ಮಾಡಿದರೆ, ಅದಕ್ಕೆ ತಕ್ಕ ಫಲವು ಆಗಿಯೇ ಆಗುವುದು, ಅದನ್ನು ಜಗದೀಶ್ವರನೂ ಕೂಡ ತಪ್ಪಿಸುವದಿಲ್ಲ. ಎಚ್ಚರವಾಗಿರು ” ಎಂದು ಮೆಂಟರನು ಹೇಗನು. (ಈ ಉಪದೇಶವು ನನಗೆ ತುಂಬಾ ಸಂತೋಷವನ್ನುಂಟುಮಾಡಿತು, ನರ ಕದಿಂದ ಸ್ವರ್ಗಕ್ಕೆ ಆರೋಹಣ ಮಾಡಿದರೆ, ಹೇಗೋ ಹಾಗೆ ನನಗೆ ಆನಂದ ಉಂಟಾಯಿತು. ಏನೋ ಒಂದು ಜನ್ಮಾಂತರ ಸುಕೃತದಿಂದ ಈತನ ಸಹಾಯವು ನನಗೆ ದೊರೆಯಿತು, ಅಪ್ರತಿಹತವಾದ ಸಾವರ್ಧದಿಂದ ಅವನು ನನ್ನನ್ನು ರಕ್ಷಿ ಸಿದನು. ಆ ಹಡಗುಗಳಲ್ಲಿ ಒಂದು ಪ್ರತ್ಯೇಕವಾಯಿತು, ಆ ಹಡಗಿನಲ್ಲಿರತಕ್ಕ ವರು ನಾವು ಅವರ ಶತ್ರುಗಳೆಂದು ತಿಳಿದುಕೊಳ್ಳಲಿಲ್ಲ. ನಾವು ಯಾರೊ: ಉದಾ ಸೀನರೆಂದು ಭಾವಿಸಿಕೊಂಡು, ಮುಂದಕ್ಕೆ ಪ್ರಯಾಣ ಮಾಡಿದರು. ದೈವಯೋ ಗದಿಂದ ನಾವು ಇಂಧಾನರೆಂದು ಅವರಿಗೆ ತಿಳಿಯದೆ ಹೋಗುವುದಕ್ಕೆ ಅವಕಾಶ ವಾಯಿತೆಂದು ಸಂತೋಷದಿಂದ ನಾವು ಆ ಸಿಸಿಲಿ ದ್ವೀಪಕ್ಕೆ ಹೋದೆವು. ನಮ್ಮ ದುರದೃಷ್ಟದಿಂದ ಆ ದ್ವೀಪದ ತೀರದಲ್ಲಿ ಬ್ರಾಯ ದೇಶದ ಜನರು ಕೆಲವರಿದ್ದ ರು. ನಾವು ತೀರಕ್ಕೆ ಬಂದ ಕೂಡಲೆ, ನಮ್ಮನ್ನು ಶತ್ರಗಳೆಂದು ಭಾವಿಸಿ, ಎಲ್ಲರನ್ನೂ ಕೊಂದುಹಾಕಿ, ನಮ್ಮಿಬ್ಬರನ್ನು ಮಾತ್ರ ಹಿಂಗಟ್ಟು ಮುರಿಕಟ್ಟಿ, ತಮ್ಮ ಮುಖಂಡ ನಾದ ಅಸೆಸ್ಟಿಸ್ ಎಂಬುವನ ಬಳಿಗೆ ಕರೆದುಕೊಂಡು ಹೋದರು.' ( ಅಸೆಸೀಸನು ಒಂದು ಯಜ್ಞಶಾಲೆಯಲ್ಲಿ ಕುಳಿತು, ನ್ಯಾ-ರವಿಮರ್ಶೆ ಯನ್ನು ಮಾಡುತ್ತಿದ್ದನು. ನಮ್ಮನ್ನು ಕರೆದುಕೊಂಡು ಹೋಗಿ ನಿಲ್ಲಿಸಿ.3 ಕೂಡ ೮, ನೀವ್ಯಾರು ? ನೀವು ಇಲ್ಲಿಗೆ ಬರುವುದಕ್ಕೆ ಕಾರಣವೇನು ? ಎಂದು ಆತನು ಅತ್ಯಂತ ದರ್ಪದಿಂದ ಕೇಳಿದನು. “ ನಾವು ಹೆಸೀರಿಯಾ ದೇಶದಿಂದ ಬಂದಿದ್ದೇವೆ. ಇಲ್ಲಿಂದ ಸ್ವಲ್ಪ ದೂರ ದಲ್ಲಿ ಆ ದೇಶವಿದೆ ” ಎಂಬದಾಗಿ ಮೆಂಟರನು ಹೇಳಿದನು. ನಾವು ಶತ್ರುಗಳಲ್ಲವೆಂಬದಾಗಿಯೂ, ಯಾರೋ ಅಜ್ಞಾತಕುಲಗೋತ್ರ ರಂಬದಾಗಿಯೂ ತಿಳಿದುಕೊಂಡು, ಅರಣ್ಯದಲ್ಲಿ ಅವನ ದನಗಳನ್ನು ಕಾಯುವು ದಕ್ಕೆ ನಮ್ಮನ್ನು ನಿಯಮಿನುವುದೆಂದು ಆತನು ಆಜ್ಞೆ ಮಾಡಿದನು. ಇದು ನನಗೆ ತುಂಬಾ ಅವಮಾನವಾಗಿ ತೋರಿತು, ಅವನನ್ನು ನೋಡಿ ಎಲೈ ದೊರೆಯೇ ನಮ್ಮ ಪದವಿಗೆ ಅನುಚಿತವಾದ ಉದ್ಯೋಗಕ್ಕೆ ನಮ್ಮನ್ನು ನಿಯಮಿಸುವುದ
ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೨೩
ಗೋಚರ