ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಗಿಂತಲೂ ಅವರಿಂದ ಹೆಚ್ಚು ವಿಸುಂಟಾಗುವುದೆಂದು ತೋರಿತು, ನಾನು ಭಯಭಾಂತನಾದೆನು, ವಿಪತ್ತು ಬಂದಾಗ ಶಾಂತವಾಗಿಯೂ, ನಿರ್ಭಯವಾ ಗಿಯೂ ಇರುವುದು ಮಹಾತ್ಮರ ಲಕ್ಷಣ, ಪಿಂಟರನು ಈ ರೀತಿಯಲ್ಲಿದ್ದನು. ಭಯಪಡಬೇಡಬವಾಗಿಯೂ, ಧೈರ್ಯುಂದ ಸರ್ವಸ್ವವೂ ಸಾಧ್ಯವಾಗುವು ದೆಂಬದಾಗಿಯೂ, ಅಪ್ಪರ್ಯವು ಅನರ್ಧ ಕಾರಿಯಾದ್ದೆಂಬದಾಗಿಯೂ ಮಂದಹಾ ಸಪೂರ್ವಕವಾಗಿ ಈತನು ನನಗೆ ಹೇಳಿದನು. ಇದರಿಂದ ಅಸಾಧಾರಣವಾದ ಧೈರ್ಯವು ನನಗೆ ಉ೦ತು. ಸ್ವಲ್ಪವೂ ಗಾಬರಿಗೆ ಗುರಿಯಾಗದೆ, ಮೆಂಟ ರನು ಹಡಗು ನಡೆಸತಕ್ಕವರ ಜತೆಯಲ್ಲಿ ಸೆರಿ, ಅವರಿಗೆ ಧೈರವನ್ನು ಹೇಳುತ್ತಾ, ಅವರ ಕರ್ತವ್ಯವನ್ನು ಅವರಿಗೆ ಬೋಧಿಸಿದನು, ಅದುವರೆಗೂ ಮೆಂಟರನು ತನ್ನಂತೆಯೇ ಒಬ್ಬ ಸಾಧಾರಣ ಮನುಷ್ಯನೆಂದು ತಿಳಿದುಕೊಂಡಿದ್ದೆನು, ಈ ವಿಪತ್ತು ಕಾಲ ಬಂದ ಕೂಡಲೆ, ಅವನಿಗೂ, ನನಗೂ ಒದ್ದ ವ್ಯತ್ಯಾಸವು ಗೊತ್ತಾ ಯಿತು. ಅವನು ಸರ್ವಜ್ಞನೆಂಬಗಿ ಗೊತ್ತಾದ ಕೂಡಲೆ, ಅವನ ವಿಷಯದಲ್ಲಿ ಅಭೂತಪೂರ್ವವಾದ ಭಕ್ತಿಯು ನನಗೆ ಹುಟ್ಟಿತು. ಈ ವಿಸತ್ತಿನಿಂದ ಮೋಕ್ಷವು ಉಂಟಾದ ಪಕ್ಷದಲ್ಲ, ನಿನ್ನ ಆಜ್ಞೆಯನ್ನು ಮಾರದೆ, ನಿನ್ನ ನಲಹೆಗಳ ಪೂರ್ವಾಪ ರಗಳನ್ನು ವಿಚಾರಿಸದೆ, ನೀನು ಹೇಳುವಂತೆ ನಗುವೆನೆಂದು ನಾನು ಹೇಳಿ ದೆನು.” ಅದಕ್ಕೆ tಂಟರನು ನಕ್ಕು ಹೇಳಿದ್ದೇನಂದರೆ - “ ನಿನ್ನ ಅಪರಾಧಗಳನ್ನು ಕ್ಷಮಿಸಿರುವೆನು, ನೀನು ಮಾಡಿದ ಆಪರಾ ಧವು ಅಪರಾಧವೆಂದು ನಿನಗೆ ಗೊತ್ತಾಗಿರುವುದು, ಇದರಿಂದ ನಾನು ಸಂತುಷ್ಟ ನಾಗಿರುವೆನು, ಈ ವಿಪತ್ತು ಕಳೆದ ಕೂಡಲೆ, ನೀನೇ ಸರ್ವಜ್ಞನೆಂದು ತಿಳಿದು ಕೊಳ್ಳುವ ಕಾಲವು ಬರಹುದು. ಇದು ನಾಮಾವ್ರ ಜನಗಳ ಸ್ವಭಾವ, ಅದು ಹೇಗಾದರೂ ಇರಲಿ, ವಿಪತ್ತು ಬರುವುದಕ್ಕೆ ಮುಂಚೆ, ನಾವು ಅದನ್ನು ತಪ್ಪಿಸಿ ಕೊಳ್ಳುವ ಉಪಾಯವನ್ನು ಮಾಡಬೇಕು. ವಿಪತ್ತು ಬಂದ ಮೇಲೆ ಭಯಪಡ ಬಾರದು, ಧೈರ್ಯದಿಂದ ಅದನ್ನು ನಿಗ್ರಹಿಸುವ ಪ್ರಯತ್ನವನ್ನು ಮಾಡಬೇಕು. ನಿಮ್ಮ ತಂದೆಯಲ್ಲಿ ಈ ಗುಣಾತಿಶಯವು ವಿಶೇಷವಾಗಿತ್ತು. ಇದನ್ನು ನೀನೂ ಸಂಪಾದಿಸಿಕೊಳ್ಳುವುದು ಆವಶ್ಯಕ, ನಮಗೆ ಉಂಟಾಗತಕ್ಕೆ ಸಕಲ ಅನರ್ಥಗ ಳಿಗೂ ನಾವೇ ಕಾರಣಭೂತರು, ಮಾಡಬೇಕಾದ ಕೆಲಸಗಳನ್ನು ಬಿಡುವುದ ರಿ೦ದಲೂ, ಮಾಡಬಾರದ ಕೆಲಸಗಳನ್ನು ಮಾಡುವುದರಿಂದಲೂ ನಮಗೆ ಅನಿರ್ವ ಚನೀಯವಾದ ಅನರ್ಧಗಳು ಉಂಟಾಗುವುವು, ಇವುಗಳೆಲ್ಲಾ ಅದೃಷ್ಟಗಳೆಂದು ಅಜ್ಞಾನಿಗಳು ತಿಳಿದುಕೊಳ್ಳುವರು, ದೀರ್ಘದರ್ಶಿಗಳಿಗೆ ಅದೃಷ್ಟಗಳೇ ಇರುವು ದಿಲ್ಲ, ನನ್ನ ಮನೋವಾಕ್ಕರ್ಮಗಳ ಪರಿಣಾಮ ಫಲವನ್ನು ಪೂರ್ವಭಾವಿಯಾ