ಯಂತ್ರಯೋಗಿ ಕಿರ್ಲೋಸ್ಕರ.ಲಕ್ಷ್ಮಣರಾಯರು ತಪ್ಪಿಗೆ ಶಿಕ್ಷೆ ಅವಶ್ಯ. ಆದರೆ ಅವರು ಸುಧಾರಿಸಬೇಕಿದ್ದರೆ ಅವರಿಗೆ ಪ್ರಾಮಾಣಿಕ ಜೀವನ ಸಾಗಿಸಲು ಸಂಧಿಯನ್ನೊದಗಿಸಬೇಕೆಂಬುದೇ ರಾಯರ ಅಭಿಪ್ರಾಯ. ರಾಯರ ಈ ಕೃತಿಯು ರಾಜಾಸಾಹೇಬರಿಗೆ ಸಾಹಸದ್ದೆನಿಸಿತು, ಆದರೆ ಅವರು ಅಡ್ಡ ಬರಲಿಲ್ಲ. ಪೀರಾನ ಬಿಡುಗಡೆಗೆ ಆಜ್ಞೆ ಕೊಟ್ಟರು. ಅವನೊಡನೆ ತುಕಾ-ರಾಮೋಸಿ, ಬಾಳಾರಾಮೋಸಿಯಂತಹ ನಾಲ್ವರನ್ನು ಆರಿಸಿ ಅವರನ್ನು ವಾಡಿಗೆ ಕರೆತಂದರು. ಅವರ ಪ್ರತಿಜ್ಞಾವಿಧಿಗಾಗಿ ಸಭೆ ಏರ್ಪಡಿಸಿದರು. ವಾಡಿಯ ಊರೇ ಅಲ್ಲಿ ನೆರೆಯಿತು. “ನಾನು ಇನ್ನು ಮುಂದೆ ಯಾವ ಅಪ ರಾಧವನ್ನೂ ಮಾಡುವದಿಲ್ಲ, ಸೆರೆ ಕುಡಿಯುವದಿಲ್ಲ, ಮತ್ತು ಕಾರಖಾನೆಯ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುವೆ,” ಎಂಬ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಮಾಡಿದರು. ನಂತರ ಲಕ್ಷ್ಮಣರಾಯರು ಪ್ರತಿಯೊಬ್ಬರ ಕೈಯಲ್ಲಿ ಒಂದು ಚಿಮಿಟಗೆ ಉಪ್ಪನ್ನು ಹಾಕಿದರು. ಅದನ್ನು ಸೇವಿಸಿ ಎಲ್ಲರೂ ಭಂಡಾರವನ್ನು ಹಚ್ಚಿಕೊಂಡರು, ಇದೊಂದು ಅಪೂರ್ವವಾದ ಸಮಾರಂಭ ಎಂದು ಜನ ಆಶ್ಚರ್ಯಬಟ್ಟರು. - ಇವರಿಗೆ ರಂಟೆಗಳನ್ನು ಜೋಡಿಸಲು ಕಲಿಸಿದರು. ಇರಲು ಮನೆಗಳನ್ನು ಕಟ್ಟಿಸಿಕೊಟ್ಟರು. ಅವರ ಮಕ್ಕಳು ಇತರರೊಡನೆ ಶಾಲೆಯಲ್ಲಿ ಕಲಿಯಹತ್ತಿದರು. ಸೀರಾ ಮೊದಲಾದವರು ಕೈಯಲ್ಲಿ ಚಪಗೊಡ್ಡಿ ಹಿಡಿದುಕೊಂಡು ಕಿರ್ಲೋಸ್ಕರ ವಾಡಿಯಲ್ಲಿ ರಾತ್ರಿ ಗಸ್ತಿ ತಿರುಗಹತ್ತಿದರು. ಈ ಸುದ್ದಿ ಹಾ ಹಾ ಎನ್ನುವಷ್ಟ ರಲ್ಲಿ ಎಲ್ಲ ಕಡೆಗೆ ಹಬ್ಬಿತು, ಇವರ ಹೆಸರು ಉಚ್ಚರಿಸಿದರೆ ಜನ ಎದೆಗೆಡುತಿತ್ತು. ಅಂದಮೇಲೆ ನಾಡಿಯ ಕಡೆಗೆ ನೋಡುವ ಧೈರ್ಯ ಯಾರಿಗೆ ? ಇವರು ಯಮನಂತೆ ಕಾಣುತ್ತಿದ್ದರೂ ಗೂಗಿಯ ಕೂಗಿಗೆ ಬೆದರಿ ಬಾಯಿಮುಚ್ಚಿಕೊಂಡು ತೆಪ್ಪಗೆ ಕುಳಿತುಕೊಳ್ಳುತ್ತಿದ್ದರು, ಹೊಟ್ಟಿಗೆ ಉದ್ಯೋಗ ದೊರೆಯಿತು. ಒಳ್ಳೆ ಸಮಾಜದಲ್ಲಿ ಇರಲು ಅವಕಾಶ ಸಿಕ್ಕಿತು. ಇದರಿಂದ ಮೆಲ್ಲನೆ ಅವರ ನಡೆ-ನುಡಿ ಗಳಲ್ಲಿ ಬದಲಾವಣೆಯಾಗಹತ್ತಿತು. - ಒಂದು ದಿನ ಪೀರಾ ಸಂತೆಗೆ ಹೋದ, ಹಳೆಯ ಗೆಳೆಯರು ಭೆಟ್ಟಿಯಾ ದರು. ಅವರ ಜುಲುಮೆಗೆ ಸಿಕ್ಕು ಗಡಂಗಕ್ಕೆ ಹೋಗಿ ಮನದಣಿ ಕುಡಿದು ಮತ್ತನಾಗಿ ಬಾಯಿಗೆ ಬಂದುದನ್ನು ಬಕಾಸು ಕೈಯಲ್ಲಿ ಕೊಡ್ಲಿ ಹಿಡಿದು ಕೊಂಡು, ಊರಲೆಲ್ಲ ತಿರುಗಾಡಹತ್ತಿದ: ' ಈ ಸುದ್ದಿ ತಿಳಿದೊಡನೆ ರಾಯರು
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೯೦
ಗೋಚರ