ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ೧» ಮಶಿನಿಸ್ಟ” ಮತ್ತು “ಸಾಯಿಂಟಿಫಿಕ್ ಅಮೇರಿಕನ್” ಅಂತಹ “ಮಾಸಿಕ ಪುಸ್ತಕ ಹಾಗೂ ಗ್ರಂಥಗಳ ಸತತ ವಾಚನದಿಂದ ಹಾಗೂ ಸ್ವಂತ ಪ್ರಯತ್ನ ದಿಂದ ತಮ್ಮ ಜ್ಞಾನವನ್ನು ಅವರು ಬೆಳೆಯಿಸಿಕೊಂಡರು. ಅಲ್ಲದೆ ವಿದ್ಯಾರ್ಥಿ ಗಳಿಗೆ ಕಲಿಸುವ ಉದ್ದೇಶದಿಂದ ಪಾಠಗಳನ್ನು ಉತ್ಕೃಷ್ಟ ರೀತಿಯಿಂದ ಸಿದ್ಧಪಡಿ ಸುತ್ತಿದ್ದರು. ಇದರಿಂದ ಅವರು ಇಂಗ್ಲಿಷಿನಲ್ಲಿ ಪರಿಣತರಾಗಿದ್ದರು. - ಇವರು ಕೆಲಸಮಾಡುತ್ತಿದ್ದ ಯಾಂತ್ರಿಕ ವಿದ್ಯಾಲಯದಲ್ಲಿ ಉಗಿ (ಮ) ಯ ವಿಷಯವನ್ನು ಕಲಿಸುತ್ತಿದ್ದ ಪ್ರಾಧ್ಯಾಪಕರು ರಜೆಯನ್ನು ತೆಗೆದು ಕೊಂಡರು. ಆ ವರ್ಗವನ್ನು ಹೇಗೆ ಸಾಗಿಸಬೇಕೆಂಬ ಪ್ರಶ್ನೆಯು ಪ್ರಿನ್ಸಿಪಾಲಶ ತಲೆತಿನ್ನಹತ್ತಿತು. ಆಗ ಅವರ ದೃಷ್ಟಿಯು ಲಕ್ಷ್ಮಣರಾಯರ ಕಡೆಗೆ ಹೊರ ಳಿತು, ಅವರನ್ನು ಕರೆಯಿಸಿ ಕೇಳಲು ರಾಯರು ಕೂಡಲೇ ಆನಂದದಿಂದ ಒಪ್ಪಿಕೊಂಡರು. ಮರುದಿನವೇ ತಮ್ಮ ಡ್ರಾಯಿಂಗಿನ ವರ್ಗವನ್ನು ಮುಗಿಸಿ, ಪ್ರಾಧ್ಯಾಪಕರೆಂದು ಸ್ವೀಮ ವಿಷಯವನ್ನು ಕಲಿಸಹತ್ತಿದರು, ಇದನ್ನು ಕಂಡು ಎಲ್ಲರಿಗೂ ಆಶ್ಚರವಾಯಿತು. ಲಕ್ಷಣರಾಯರು ಯಂತ್ರಗಳ ವಿಷಯದಲ್ಲಿ ಆಳವಾದ ಅಭ್ಯಾಸವನ್ನು ಮಾಡಿದ ಮೂಲಕ, ಯಾಂತ್ರಿಕ ತಜ್ಞರಲ್ಲಿ ಅವರ ಗಣನೆಯಾಯಿತು. ಅನೇಕ ಜನರು ಸಲಹೆಗಾಗಿ ಅವರ ಕಡೆಗೆ ಬರಹತ್ತಿದರು. ಹೀಗೆ ಬಂದವರೊಡನೆ ತಮ್ಮ ವಿಷಯವನ್ನು ಸಮರ್ಥಿಸಲು ಎಷ್ಟೋಸಲ ಅವರು ವಾದಮಾಡ. ಬೇಕಾಗುತ್ತಿತ್ತು, ಮತ್ತು ತಮ್ಮ ಮತವನ್ನು ಪ್ರತ್ಯಕ್ಷ ಪ್ರಮಾಣಗಳಿಂದ ಸಿದ್ದ ಮಾಡಿ ತೋರಿಸ ಬೇಕಾಗುತ್ತಿತ್ತು, ಒಮ್ಮೆ ಡನ್ಲಪ್ ಎಂಬ ಇಂಗ್ಲಿಷ ಗೃಹಸ್ಥರು 'ಇಂಗ್ಲಂಡದ ಯಾಂತ್ರಿಕ ಪ್ರಗತಿಯು ಅಮೇರಿಕೆಗಿಂತ ಹೆಚ್ಚಿದೆಯೆಂದು ವಾದಿಸಹತ್ತಿದರು. ಈ ವಿಷಯದಲ್ಲಿ ಅಮೇರಿಕೆಯು ಮುಂದಿದೆ. ಯೆಂದು ಲಕ್ಷ್ಮಣರಾಯರ ನಿಶ್ಚಿತ ಅಭಿಪ್ರಾಯವಿದ್ದಿತು. ಈ ವಾದವನ್ನು ನಿರ್ಣಯಿಸಲು ಪ್ರಯೋಗವನ್ನೇ ಮಾಡಬೇಕೆಂದು ಗೊತ್ತು ಮಾಡಿದರು. ಡನ್ಲಪ್ ಸಾಹೇಬರು ಒಂದು ಇಂಗ್ಲಿಷ ಪೇಚಪಟ್ಟಿಯನ್ನು ತಂದರು. ಲಕ್ಷಣರಾಯರು ಅಂತಹದೇ ಪೇಚಪಟ್ಟಿಯನ್ನು ಅಮೇರಿಕೆಯಿಂದ ತರಿಸಿದರು. ಸ್ಪರ್ಧೆ ನಡೆಯಿತು, ಡನ್ಲಪ್ ಸಾಹೇಬರು ಒಂದು ಬೋಲ್ಪಿಗೆ ತಿರುಪುಗಳನ್ನು ಹಾಕಿ ಅದನ್ನು ಸಿದ್ಧಪಡಿಸುವಷ್ಟರಲ್ಲಿ, ರಾಯರು ಮೂರು ಬೋಲ್ಟುಗಳನ್ನು ಸಿದ್ಧ ಪಡಿಸಿದರು. ಲಕ್ಷ್ಮಣರಾಯರು ವಿಜಯಿಗಳಾದರು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೨
ಗೋಚರ