ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪಾದಕರ ನುಡಿ ಮುಂಚಿನಬಳ್ಳಿಯಲ್ಲಿ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರ ಚರಿತ್ರೆಯು ಪ್ರಕಟವಾಗುತ್ತಿರುವದು ಬಳ್ಳಿಗೆ ಭೂಷಣ, ಭಾರತದ ಔದ್ಯೋಗಿಕ ಕ್ಷೇತ್ರದಲ್ಲಿ ನವಮನ್ವಂತರವನ್ನುಂಟುಮಾಡಿದ ಮಹಾಪುರುಷರಿವರು, ಆದರ್ಶ ಜೀವಿಗಳು, ತಮ್ಮ ಕತೃತ್ವ ಶಕ್ತಿಯಿಂದ ಭಾರತಕ್ಕೆ ಕೀರ್ತಿತಂದ ಐತಿಹಾಸಿಕ ಪುರುಷರಿವರು, ಹೆಮ್ಮೆಯ ವಿಷಯವೆಂದರೆ, ಕಿರ್ಲೋಸ್ಕರರು ಕರ್ನಾಟಕಸ್ಥರು. ಇವರ ಚರಿತ್ರೆಯು ನಾಡಿನ ಯುವಕರಿಗೆ ಮಾರ್ಗದರ್ಶಕವಾಗಿದೆ, ಸ್ಫೂರ್ತಿದಾಯಕವಾಗಿದೆ. ಇದನ್ನು ಬರೆದವರು ಶ್ರೀ ಶಂಕರರಾವ ಕಿರ್ಲೋಸ್ಕರರು, ಇವರು ಪತ್ರಿಕಾ ಪ್ರಪಂಚದಲ್ಲಿ ಪ್ರಸಿದ್ದರು, ನಿಷ್ಣಾತ ಮರಾಠಿ ಲೇಖಕರು, ಲಕ್ಷ್ಮಣರಾಯರ ಜೀವನವನ್ನು ಪ್ರತ್ಯಕ್ಷ ಕಂಡವರು. ಅವರ ಗರಡಿಯಲ್ಲಿ ಆಡಿದವರು, ಅವರ ಜೀವನದೊಡನೆ ಬೆರೆತು ದುಡಿದವರು. ಅಂದಮೇಲೆ ಕೇಳುವದೇನು ? ಕಬ್ಬಿನ ಮೇಲೆ ಜೇನಿಟ್ಟಂತೆ, ಈ ಚರಿತ್ರೆಯನ್ನು ಬರೆಯುವಾಗ ಶಂಕರರಾಯರು ತನ್ಮಯರಾಗಿದ್ದಾರೆ. ತಮ್ಮ ಹಿರಿಯರ ಚಿತ್ರವನ್ನು ಯಥಾಸ್ಥಿತವಾಗಿ, ರಸವತ್ತಾಗಿ, ಸ್ಫೂರ್ತಿದಾಯಕವಾಗಿ ಚಿತ್ರಿಸಿದ್ದಾರೆ. ಇಂತಹ ಗ್ರಂಥವು ಕನ್ನಡದಲ್ಲಿ ಬರುತ್ತಿರುವದು ಆನಂದದ ಸಂಗತಿ. ನಾನು ಅಕಸ್ಮಾತ್ತಾಗಿ ಕರ್ನಾಟಕ ಆರೋಗ್ಯಧಾಮಕ್ಕೆ ಹೋದಾಗ ಶ್ರೀ. ಶಂಕರರಾಯರ ಪರಿಚಯವಾಯಿತು, ಅವರು ಈ ಚರಿತ್ರೆಯು ಕನ್ನಡದಲ್ಲಿ ಬರಬೇಕೆಂದರು. ಭಾರತೀಯ ಔದ್ಯೋಗಿಕ ಮಹಾಪುರುಷರ ಪರಿಚಯವನ್ನು ಕನ್ನಡಿಗರಿಗೆ ಮಾಡಿಕೊಡಬೇಕೆಂದು ಆಲೋಚಿಸುತ್ತಿರುವಾಗ, ಈ ಸೂಚನೆ ಬಂದುದು ಈಶಸಂಕಲ್ಪವೆಂದು ಭಾವಿಸಿ, ಈ ಕಾರ್ಯಕ್ಕೆ ಕೈ ಹಾಕಿದೆ. ಇದು ಮರಾಠಿ ಗ್ರಂಥದ ಅನುವಾದವು. ಅದು ಇಂದು ಪೂರ್ಣವಾಗುತ್ತಿರುವದನ್ನು ಕಂಡು ಆನಂದವಾಗುತ್ತಿದೆ. ಈ ಗ್ರಂಥವು ಬಳ್ಳಿಯ ೩-೪ನೆಯ ಕುಡಿಯಾಗಿ ಹೊರಟಿದೆ.