೪೨ Cಂಚಿಸಬಳ್ಳಿ ೩ಳ್ಳಿ ಆವಕವಿತ್ತು, ಅವನಿಗೆ ಆಕಳುಗಳನ್ನು ಮಲಗಿಸಲು ಕಬ್ಬಿಣದ ಮೇಜು ಗಳು, ರಸ ತೆಗೆಯಲು ಹಾಗು ಚುಚ್ಚಲು ಬೇಕಾಗುವ ಶಸ್ತ್ರಗಳೂ ಮತ್ತು ಕಟ್ಟಡಗಳಿಗೆ ಬೇಕಾಗುವ ವಸ್ತುಗಳೂ ಸಂಸ್ಥೆಗಾಗಿ ಬೇಕಾಗಿದ್ದು, ಈ ವಸ್ತು ಗಳನ್ನೆಲ್ಲ ಪೂರೈಸುವ ಕೆಲಸವನ್ನು ಲಕ್ಷಣರಾಯರು ವಹಿಸಿಕೊಂಡರು. ಅವರಿಂದ ಕಾರಖಾನೆಗೆ ತಾತ್ತೂರ್ತಿಕ ಆರ್ಥಿಕ ಸಹಾಯವಾಯಿತು, ಆದರೆ ಕಾರಖಾನೆ ಚಿಕ್ಕದಾದರೂ ಸಾಕಷ್ಟು ಭಂಡವಲು ಇಲ್ಲದೆ ದೈನಂದಿನ ಜೀವನ ನನ್ನು ಸಾಗಿಸುವದೆಂತು ? ಲಕ್ಷಣರಾಯರ ಭಂಡವಲು ಸಂಪುಷ್ಟಕ್ಕೆ ಬಂದಿತ್ತು, ಆಗ ಅವರು ಬಾಂಬೆ ಬ್ಯಾಂಕಿಂಗ ಕಾದ್ರೋರೇಶನಕ್ಕೆ ಹತ್ತು ಸಹಸ್ತ ರೂಪಾಯಿ ಸಾಲವನ್ನು ಕೇಳಿದರು, ಜಾಮೀನಿನ ಅಭಾವದ ಮೂಲಕ ಆ ಪ್ರಯತ್ನವು ವ್ಯರ್ಥವಾಯಿತು. ಲಕ್ಷ್ಮಣರಾಯರು ಹೀಗೆ ಚಿಂತೆಯಲ್ಲಿದ್ದಾಗ ಒಂದು ಸೋಜಿಗ ನಡೆ ಯಿತು, ಒಬ್ಬರು ಕಾರಖಾನೆಗೆ ಬಂದು ರಾಯರೇ, ನಾನು ಇಲ್ಲಿ ನಡೆಯುವ ಕಾರ್ಯವನ್ನು ದಿನಾಲು ನೋಡುತ್ತಿದ್ದೇನೆ, ನಿಮ್ಮ ಬಗೆಗೆ ನನ್ನಲ್ಲಿ ಒಳ್ಳೆಯ ಅಭಿಪ್ರಾಯ ಉಂಟಾಗಿದೆ. ಸದ್ಯಕ್ಕೆ ನಿಮಗೆ ಹಣದ ಅವಶ್ಯಕತೆಯು ಇದೆ ಎಂದು ಕೇಳಿದ್ದೇನೆ. ನಿಮಗಾಗಿ ಎರಡು ಸಹಸ್ರ ರೂಪಾಯಿಗಳನ್ನು ತಂದಿದ್ದೇನೆ. ತೆಗೆದುಕೊಳ್ಳಿರಿ, ನಿಮಗೆ ಅನುಕೂಲ ಒದಗಿದಾಗ ಈ ಹಣವನ್ನು ಮರಳಿ ಕೊಡಿ” ಎಂದು ಅಂದರು. ಅವರೇ ಶ್ರೀ ರಾಮಭಾವು ಗಿಂಡೆಯವರು, ಶಹಾಪುರದಲ್ಲಿಯ ಒಬ್ಬ ಪ್ರತಿಷ್ಠಿತ ಗೃಹಸ್ಥರು, ಇವರು ಮಾಡಿದ ಈ ಸಹಾಯವು ಲಕ್ಷಣರಾಯರಿಗೆ ಬಹಳ ಉಪಯೋಗ ಬಿದ್ದಿತೆಂದು ಹೇಳಬೇಕೇ ? ಅವರ ಆಯುಷ್ಯದಲ್ಲಿ ಎಂದೂ ಮರೆಯದ ಘಟನೆಯಿದು, ಅವರ ಈ ಗೆಳೆತನವು ಕೊನೆಯ ವರೆಗೂ ಉಳಿ ಯಿತು, ಲಕ್ಷ್ಮಣರಾಯರಿಗೆ ಹಣದ ಕೊರತೆಯಾದಾಗ ಅವರ ಚೀಟಿ ಹೋಗು ನದೇ ತಡ ಗಿಂಡೆಯವರಿಂದ ಹಣ ದೊರೆಯುತ್ತಿತ್ತು. ಈ ಜಗತ್ತಿನಲ್ಲಿ ವಿಘ್ನ ಸಂತೋಷಗಳೂ ಉಂಟು. ಆದರೆ ಶಕ್ಯವಿದ್ದಷ್ಟು ಸಹಾಯವನ್ನು ನೀಡಿ ಆನಂದಪಡುವ ಸಜ್ಜನರೂ ಉಂಟು. ಸ್ವಯಂಸ್ಫೂರ್ತಿಯಿಂದ ಸಹಾಯ ಮಾಡಿದ ಶ್ರೀ ರಾಮಭಾವೂ ಗಿಂಡೆಯವರ ಗಣನೆಯ, ಸಜ್ಜನಕೋಟಿಯಲ್ಲಿ ಸೇವದು...
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೬೩
ಗೋಚರ