ಮುನ್ನುಡಿ ಶ್ರೀ, ಕಿಕ್ಕೋಸ್ಕರ ಲಕ್ಷ್ಮಣರಾಯರು ಈ ಚರಿತ್ರೆಯ ನಾಯಕರು. ಅದನ್ನು ಬರೆದವರು ಕಿರೋಸ್ಕರ ಶಂಕರರಾಯರು, ಇಬ್ಬರೂ ಪ್ರಸಿದ್ಧ ವ್ಯಕ್ತಿಗಳು, ಒಬ್ಬರು ಯಂತ್ರಯೋಗಿಗಳು, ಇನ್ನೊಬ್ಬರು ಪತ್ರಿಕಾ ವ್ಯವಸಾಯ ದಲ್ಲಿ ನಿಷ್ಣಾತರು, ಒಳ್ಳೆ ಲೇಖಕರು, ಆ ಮೂಲಕ ಈ ಜೀವನ ಚರಿತೆಗೆ ಒಳ್ಳೆ ಕಳೆಕಟ್ಟಿದೆ. ಇತಿಹಾಸವೆಂಬುದು ದೇಶದ ಚರಿತ್ರೆ, ಆದರೆ ದೇಶದ ಚರಿತ್ರೆ ಕೂಡ ವ್ಯಕ್ಕಿಗಳ ಚರಿತ್ರೆಯಿಂದಲೆ ತುಂಬಿಕೊಂಡಿರುತ್ತದೆ. ಅನೇಕ ವ್ಯಕ್ತಿಗಳ ಸಮೂಹವೇ ದೇಶ, ಜನಾಂಗ ಎನಿಸುವದು, ದೇಶದ ಚರಿತ್ರೆಯು ಎಷ್ಟು ಅವಶ್ಯವೋ ಅಷ್ಟೇ ವ್ಯಕ್ತಿಗಳ ಚರಿತ್ರೆಯ ಅವಶ್ಯ. ಎರಡಕ್ಕೂ ಸತ್ಯ ಸಂಗತಿಗಳೇ ಮೂಲ, ಸರಸ ಭಾಷೆಯೇ ಒಪ್ಪು, ಮಕ್ಕಳಿಗೆ, ತರುಣರಿಗೆ, ಮುಂದಿನ ಪೀಳಿಗೆಗೆ ಇವೆರಡರಿಂದಲೂ ಸ್ಟೋರಿ-ಮಾದರನ ಇವು ದೊರೆ ಯುವವು. ಕನ್ನಡದಲ್ಲಿ ವ್ಯಕ್ತಿಚರಿತ್ರೆಯ ಒಳ್ಳೆಯ ಪುಸ್ತಕಗಳು ಬಹಳ ಕಡಿಮೆ ಎಂದೇ ಹೇಳಬಹುದು, ಆ ದೃಷ್ಟಿಯಿಂದ ಈ ಪುಸ್ತಕವು ಸ್ವಾಗತಾರ ವಿದೆ. ಇದು ಅನೇಕ ವಿವರಗಳಿಂದ ಕೂಡಿದೆ. ಸಣ್ಣ ಪುಟ್ಟ ಘಟನೆಗಳ ನಲ್ಲನೆಯಿಂದ ತುಂಬಿದೆ. ಇದರಲ್ಲಿ ಶ್ರೀ ಲಕ್ಷ್ಮಣರಾಯರ ಸ್ವಭಾವಚಿತ್ರವು ಚನ್ನಾಗಿ ಬಣ್ಣಿಸಲಾಗಿದೆ. ಅವರ ಜೀವನದ ಪ್ರಗತಿಯ ಚಿತ್ರವು ಅಚ್ಚು ಕಟ್ಟಾಗಿ ಇದರಲ್ಲಿ ಮೂಡಿದೆ. ಮೇಲಾಗಿ ಆಯಾ ಕಾಲದ ನಮ್ಮ ಸಮಾಜದ ಹಾಗೂ ರಾಷ್ಟದ ಪರಿಸ್ಥಿತಿಯೊಡನೆ ಚರಿತ್ರನಾಯಕನ ಜೀವನಚರಿತ್ರೆ ಅರಿಕೆ ಬೆರಿಕೆ ಯಾಗಿ ಹೊಂದಿಕೊಳ್ಳುವಂತೆ ಬರೆಯಲಾಗಿದೆ. ಭಾಷೆ ಸುಲಭ, ಸ್ಪಷ್ಟ ಇದ್ದು ರಸವತ್ತಾಗಿದೆ. ಈ ಹೊತ್ತು ಭಾರತದ ಉದ್ಯೋಗ ಕ್ಷೇತ್ರದಲ್ಲಿ (ಕಿರೋಸ್ಕರ' ಎಂಬ ಹೆಸರು ಜನಜನಿತವಾಗಿದೆ. ಆದರೆ ಈ ಕೀರಿಸ್ತಂಭದ ಮೂಲಾಧಾರವೇನು,
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೦
ಗೋಚರ