ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ೪* ವಂತೆ ಮಾಡಿ ಅವರನ್ನು ಸಂಕಟದಿಂದ ಪಾರು ಮಾಡಿದ್ದರು. ಆನಂದದ ಭರ ದಲ್ಲಿ ಹಿರಿಯ ಸಾಹೇಬನು ಲಕ್ಷ್ಮಣರಾಯರ ಕೈಯನ್ನು ಪ್ರೇಮದಿಂದ ಕುಲುಕಿ “ಶಾಬ್ಬಾಶ್ ನೀವು ನಿಜವಾಗಿಯೂ ಒಬ್ಬ ಇಂಗ್ಲೀಷ್ ಮನುಷ್ಯನಂತೆ ಕಾರ್ಯ ಮಾಡಿರುವಿರಿ, ನಿಮ್ಮಂತೆಯೇ ನಿನ್ನ ಜನರೆಲ್ಲರೂ ಕಾರ್ಯ ಮಾಡಹತ್ತಿದರೆ ಈ ದೇರದಲ್ಲಿ ಬ್ರಿಟಿಶರು ಉಳಿಯುವರೇಕೆ ? ಎಂದನು. ಲಕ್ಷಣರಾಯರು ನಗುತ್ತ “ನಿನ್ನ ಕೆಲಸವಾದುದು ನಮಗೆ ಸಂತೋಷ ವನ್ನುಂಟು ಮಾಡಿದೆ. ಈಗ ನಾವು ನರ ಹೋಗಬಹುದಷ್ಟೆ ? ನಾವು ಲೋಂಡಾ ಮುಟ್ಟಬೇಕಾಗಿದೆ.” ಎಂದರು. ಆಗ ಬೇಸಿಗೆ ಇದ್ದ ಮೂಲಕ ಸಂಜೆಯ ಸಮಯವಾಗಿದ್ದರೂ ಇನ್ನೂ ಕತ್ತಲೆಯು ಆಗಿದ್ದಿಲ್ಲ. ಮುರೆ ಸಾಹೇಬರು ನಡುವೆಯೇ ಬಾಯಿ ಹಾಕಿ “ನೀವು ಗುಲಿಗಳಿಗೆ ಆಹಾರವಾಗಬೇಕೆಂದಿರುವಿರೇನು ? ಈ ಅಡವಿಯಲ್ಲಿ ಹುಲಿಗಳು ಬಹಳ, ಅದನ್ನು ತಾವು ಮರೆತಂತೆ ಕಾಣುತ್ತದೆ. ಈ ರಾತ್ರಿ ನೀವು ನಮ್ಮೊಡನೆ ಬಂಗಲೆಯಲ್ಲಿಯೇ ಇದ್ದು ಬೆಳಿಗ್ಗೆ ಹೊರಡಿರಿ, ನಿಮ್ಮ ಊಟದ ವ್ಯವಸ್ಥೆಯನ್ನು ಮಾಡಲು ಫಾರೆಸ್ಟ ರೇಂಜರರಿಗೆ ಈ ಮೊದಲೇ ಹೇಳಿ ಕಳುಹಿದ್ದೇನೆ' ಎಂದರು. ಈ ಕೆಲಸಕ್ಕಾಗಿ ಲಕ್ಷ್ಮಣರಾಯರು ೨ ರೂಪಾಯಿ ಬಿಲ್ಲು ಕೊಟ್ಟರು. ಆದರೆ ಅಂಥೋವೇನ ಸಾಹೇಬರು ೫೦ ರೂಪಾಯಿ ಚಕ್ಕು ಕಳಿಸಿ “ನಿಮ್ಮ ಕಾರ್ಯಕ್ಕೆ ಎಷ್ಟು ಸಲ್ಲಬೇಕೋ ಅಷ್ಟನ್ನೇ ಕಳುಹಿಸಲಾಗಿದೆ ದಯವಿಟ್ಟು. ಸ್ವೀಕರಿಸಬೇಕು.” ಎಂದು ಬರೆದು ಕಳುಹಿದರು.
- ರಾಜ್ಯವಾಳುತ್ತಿದ್ದ ಅನೇಕ ಬ್ರಿಟಿಶರು ದೊಡ್ಡ ಮನಸ್ಸಿನವರೂ ಸತ್ ಪ್ರವೃತ್ತಿಯವರೂ ಇದ್ದರು, ಅವರು ಗುಣಗ್ರಾಹಕರು, ಆದುದರಿಂದ ಲಕ್ಷ .® ರಾಯರ ಗುಣಗಳನ್ನು ಅನೇಕ ಅಧಿಕಾರಿಗಳು ಮೆಚ್ಚಿದ್ದರು. ಲಕ್ಷಣರಾಯ ರಿಗೆ ತಮ್ಮಿಂದ ಶಕ್ಯವಿದ್ದಷ್ಟು ಸಹಾಯ ಮಾಡುತ್ತಿದ್ದರಲ್ಲದೆ ತನ್ನ ಸರಿ ಜೋಡಿಯ ಅಧಿಕಾರಿಗಳಲ್ಲಿ ಕೂಡ ರಾಯರ ಕಾರ್ಯದ ಬಗ್ಗೆ ಆದರದ ನುಡಿ ಗಳನ್ನಾಡುತ್ತಿದ್ದರು, ಇದರಿಂದ ಸ್ವಾಭಾವಿಕವಾಗಿ ಲಕ್ಷ ಣರಾಯರ ಬಗೆಗೆ ಮೇಲಾಧಿಕಾರಿಗಳಲ್ಲಿ ಆದರ ಉಂಟಾಯಿತು. ರಾಯರು ಯಾವುದೇ ಹೊಸ ಅಧಿಕಾರಿಗಳ ಭೆಟ್ಟಿಗೆ ಹೋದರೂ ಅವರು ತಾವು ಕಿರ್ಲೋಸ್ಕರರಲ್ಲವೇ ? ತಮ್ಮ ಬಗೆಗೆ ಇಂತಹರು ಬಹಳ ಹೇಳಿದ್ದಾರೆ. ತಾವು ಉತ್ತಮ ಕಾರ್ಯ ನಡೆಸಿರುವಿರೆಂದು ಕೇಳುತ್ತೇವೆ. ತಮಗೆ ನಮ್ಮಿಂದ ಏನಾದರೂ ಸಹಾಯ