ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು » ಇದ್ದಿತು, ಆದರೆ ಹುಡುಗನು ತನ್ನ ಕರ್ತೃತ್ವ ಶಕ್ತಿಯಿಂದ ಜಗತ್ತಿನಲ್ಲಿ ಮುಂದೆ ಬರುತ್ತಿರುವದನ್ನು ಕಂಡು, ಅವರ ಅಂತಃಕರಣವು ಉಕ್ಕೇರಿ ಬಂದುದರಲ್ಲಿ ಆಶ್ವರವೇನು ? ಈ ಸಮಾರಂಭದಲ್ಲಿ ಲಕ್ಷ್ಮಣರಾಯರ ಅತ್ರೆಯವರು ಮಾತ್ರ ಮುನಿಸು ಗೊಂಡಿದ್ದರು, ತನ್ನ ಹೆಣ್ಣು ಮಕ್ಕಳಿಗೆ ಉತ್ತಮವಾದ ಸ್ಥಳಗಳು ದೊರೆಯ ಬೇಕೆಂದು ಅವರ ಪ್ರಬಲವಾದ ಇಚ್ಛೆ, “ನನ್ನ ನಾಗೂರಾಯಿಗೆ ಮಾಮಲೇದಾರ ವರನಾಗಬೇಕು, ಓಡಾಡಲು ಕುದುರೆ ಇರಬೇಕು, ಮನೆಯಲ್ಲಿ ಸಿಪಾ. ಯಿಯು ಕೈ ಜೋಡಿಸಿಕೊಂಡು ನಿಂತಿರಬೇಕು, ಅಡಿಗೆಯವನು ಇರಬೇಕು. ಹೆಂಡತಿಯ ಮೈ ಮೇಲೆ ಮಣಗಟ್ಟಲೆ ಬಂಗಾರವನ್ನು ಹಾಕಬೇಕು” ಎಂದು ಬಯಸುತ್ತಿರುವ ಆಕೆಗೆ ಊರಲ್ಲಿ ಮನೆಯಿಲ್ಲದ, ಅಡವಿಯಲ್ಲಿ ಹೊಲವಿಲ್ಲದ ಮೈ-ಕೈ ಕೊಳೆ ಮಾಡಿಕೊಂಡು ಕೂಲಿಕಾರರಂತೆ ದುಡಿಯುತ್ತಿರುವ ವರನು ನಾಜೂಕಾದ ಮಗಳಿಗೆ ದೊರೆತುದುದು ಅಸಮಾಧಾನಕ್ಕೆ ಕಾರಣವಾಗಿದ್ದಿತು, - ಈ ಮುದಿಕೆಯು ಮುಂದೆ ೫೦ವರ್ಷ ಮಗಳ ಮನೆಯಲ್ಲಿಯೇ ನೆಲೆ ಸಿದ್ದು ಸಾಯಕಲ್ಲಅಂಗಡಿಯ ಅಳಿಯನು ದೊಡ್ಡ ಕಾರಖಾನೆದಾರನಾಗಿ ಜಗತ್ತಿನಲ್ಲಿ ಕೀರ್ತಿವಂತನಾದುದನ್ನು ಕಣ್ಣಾರೆ ಕಂಡರೂ ಆಕೆ ತನ್ನ ಮೊದಲಿನ ಅಭಿಪ್ರಾಯವನ್ನೇನೂ ಬದಲಿಸಿರಲಿಲ್ಲ. ಕಿರ್ಲೋಸ್ಕರವಾಡಿಯಲ್ಲಿ ಮೇಲಿಂದ ಮೇಲೆ ಜರಗುವ ದೊಡ್ಡ ಸಮಾರಂಭ, ಇಲ್ಲವೆ ದೊಡ್ಡ ಅತಿಥಿಗಳ ಆಗಮನವಾದಾಗ ಮುದಿಕಿಗೆ (ಅತ್ತೆ) ಸ್ವಲ್ಪ ಚೇಷ್ಟೆ ಮಾಡಬೇಕೆಂದು “ಮಾಮಲೇದಾರ ಅಳಿಯನು ಸಿಕ್ಕಿದ್ದರೆ, ಇಂತಹ ದೊಡ್ಡ ಮನುಷ್ಯರು ಅವರ ಕಡೆಗೆ ಬರುತ್ತಿದ್ದರೆ ?” ಎಂದು ಲಕ್ಷಣರಾಯರು ಅನ್ನುತ್ತಿದ್ದರು. ಅತ್ತೆಯವರ ಉತ್ತರವು ಸಿದ್ದವಾಗಿರುತ್ತಿತ್ತು. “ಹೋಗೋ ಏನ ಡೌಲ ಹಚ್ಚದಿ ನಿಂದು, ನೀನು ದೊಡ್ಡ ಕಾರಖಾನೆದಾರ ನಾಗಿದ್ದರೂ ಮಾಮಲೇದಾರನ ಕಿಮ್ಮತ್ತು ನಿನಗೆ ಹೇಗೆ ಬಂದೀತು ??” ಎಂದು ಅನ್ನುತ್ತಿದ್ದರು. ಕೂಡಲೆ ನೆರೆದವರೆಲ್ಲ ಬೊಳ್ಳೆಂದು ನಗುತ್ತಿದ್ದರು: ಮುದಕಿಯ ಮಾತು ಏನೇ ಇರಲಿ, ಆಗ ಸರಕಾರಿ ನೌಕರಿಗೆ ಎಷ್ಟು ಬೆಲೆ ಇತ್ತೆಂಬುದೂ ನೌಕರಿಯನ್ನು ಬಿಟ್ಟು ಅನ್ಯ ಮಾರ್ಗವನ್ನು ಹಿಡಿದು ಲಕ್ಷ್ಮಣರಾಯರಂತೆ ಸಾಹಸ ಮಾಡಿದರೆ ಅವರನ್ನು ಸಮಾಜವು ಯಾವ ದೃಷ್ಟಿಯಿಂದ ನೋಡು, ತಿತ್ತೆಂಬುದೂ ಇದರಿಂದ ವ್ಯಕ್ತವಾಗುವದು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೪೦
ಗೋಚರ