೫೩ ಮಿಂಚಿನಬಳ್ಳಿ ಕೂಲಿಕಾರರಿಗೆ ಅನಕೂಲತೆಗಳನ್ನು ಒದಗಿಸಿಕೊಟ್ಟರೆ ಅವರು ತಮ್ಮ ಕೆಲಸವನ್ನು ಹೆಚ್ಚು ದಕ್ಷತೆಯಿಂದ ಮಾಡುವರೆಂದು ಕಾರ್ಖಾನೆಗಾರಿಕೆ ಅನುಭವವಾಗಿದ್ದಿತು. ಈ ಉಪಕ್ರಮವು ಕಾರಖಾನೆಯ ದೃಷ್ಟಿಯಿಂದ ಹಿತಕರವೆಂದು ಎಲ್ಲರಿಗೂ ಮನವರಿಕೆಯಾಗಿದ್ದಿತು. ಅಲ್ಲದೆ ಭಾರತದಲ್ಲಿ ತಾನೇ ಮೊದಲು ಈ ಉಪಕ್ರಮವನ್ನು ಮಾಡುವ ವರು ಎಂಬ ವಿಚಾರವು ಅವರನ್ನು ಮತ್ತಿಷ್ಟು ಉತ್ತೇಜನಗೊಳಿಸಿತ್ತು. ೬ ಕಲ್ಪನೆಯು ಸುಂದರವಾಗಿದ್ದರೂ ಪ್ರತ್ಯಕ್ಷ ಕೃತಿಗಿಳಿಸುವದು ಅಷ್ಟು ಸುಲಭ ವಿರಲಿಲ್ಲ. ಒಂದು ಚಿಕ್ಕ ಮನೆ ಕಟ್ಟಬೇಕಾದರೆ ಎಷ್ಟೋ ತೊಂದರೆಗಳನ್ನು ಎದುರಿಸಬೇಕಾಗುವದು. ರಾಯರಂತೂ ಒಂದು ಊರನ್ನೇ ಕಟ್ಟಲು ಹೊರಟಿ ಇರು, ಇವೆಲ್ಲವೂ ಹದಿನಾಲವರೆ ಸಾವಿರ ರೂಪಾಯಿಗಳ ಬಲದಿಂದ. ರಾಜಾಸಾಹೇಬರು ಕೊಟ್ಟ ಕೈಗಡ ೧೦,೦೦೦ ರೂಪಾಯಿ, ಠಳಕವಾಡಿಯನ್ನು ಬಿಡುವ ಮುಂದೆ ಕಲೆಕ್ಟರರು ಲುಕ್ಸಾನನೆಂದು ಕೊಡಿಸಿದ ೪೫೦೦ ರೂಪಾಯಿ ಇದೇ ಇವರ ಬಂಡವಲು, ಆದರೆ ಈ ಬಂಡವನಕ್ಕಿಂತಲೂ ಲಕ್ಷಣರಾಯರ ಆತ್ಮವಿಶ್ವಾಸವೇ ಪ್ರಬಲಶಕ್ತಿಯಾಗಿದ್ದಿತು. - ಲಕ್ಷ್ಮಣರಾಯರಿಗೆ ದೊರೆತ ಸ್ಥಳವು ೩೬ ಎಕರೆ ಇದ್ದಿತು, ಸ್ಟೇಶನ್ನಿನಿಂದ ಒಂದು ಫರ್ಲಾಂಗಿನ ಮೇಲೆ ಊರು ಹಾಗೂ ಕಾರಖಾನೆಗಳು ಇದ್ದವು. ಸ್ಟೇಶನ್ನಿನಲ್ಲಿ ಇಳಿದ ಸಾಮಾನುಗಳನ್ನು ಅಲ್ಲಿಗೆ ಸಾಗಿಸುವದೆಂತು ? ಎಂಬ ಪ್ರಶ್ನೆಯು ಎದುರಾಯಿತು. ಚಕ್ಕಡಿಗಳು ಸಿಗಲಿಲ್ಲ. ಸಿಕ್ಕರೂ ಮನಬಂದಂತೆ ಬಾಡಿಗೆ ಕೇಳಹತ್ತಿದರು, ಇವೆಲ್ಲವನ್ನು ನೆನೆದು ಲಕ್ಷಣರಾಯರು ಬೆಳಗಾಂವಿ ಯಿಂದ ಎರಡು ಚಕ್ಕಡಿಗಳನ್ನು ತರಿಸಿ ನಾಲ್ಕು ಎತ್ತುಗಳನ್ನು ಕೊಂಡು, ಹೂಡಿ ಅಂತೋಬಾನಿಗೆ ಗಾಡಿ ಹೊಡೆಯಲು ಹೇಳಿದರು, ಇವರ ನೀರನ; ಅರಿತು ಜನ ತಾವಾಗಿಯೇ ದಿನಗೂಲಿಗೆ ಬರಹತ್ತಿದರು. - ಕಾರಖಾನೆಯ ಜೊಗೆ ಹೊಸ ವಸತಿ ಸ್ಥಾನಕ್ಕೆ ಬರಲು ಬಯಸುವ ೩೦-೩೫ ಜನ ಕೆಲಸಗಾರರು ಕುಟುಂಬ ಸಹಿತವಾಗಿ ಕುಂಡಲ ಸ್ಟೇಶನ್ನಕ್ಕೆ ಬಂದು ಇಳಿದರು, ಈ ಗುಂಪು ಬರಹೋಗುವ ಗಾಡಿಗಳ ಜನರ ಲಕ್ಷವನ್ನು ಸೆಳೆಯಿತು, ಬೇಸಿಗೆ ಇದ್ದ ಮೂಲಕ ಎಲ್ಲ ಜನ ಬೈಲಲ್ಲಿಯೇ, ಎಲ್ಲರ ಅಡಿ ಗೆಯು ಮಾತ್ರ ಧರ್ಮಶಾಲೆಯಲ್ಲಿ, ಸೌ! ಕಿರ್ಲೋಸ್ಕರ ರಾಧಾಬಾಯಿಯವರ ಒಲೆಯ ಹತ್ತಿರವೇ ಬಡಿಗ ಸಂತುವಿನ ಹೆಂಡತಿ ಒಲೆ ಹೂಡಿದ್ದಳು, ಅವಳ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೮೧
ಗೋಚರ