ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\ ಕಿಶನ ಣರಾಯರು ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾ ಯರು ಟ್ವಿತು. ಮಂಗಳಾಷ್ಟಕವಾದನಂತರ ಅಕ್ಷತಾರ್ಹಣವಾಗಿ ಸಮಾರಂಭವು ಆನಂದದಲ್ಲಿ ಕೊನೆಗೊಂಡಿತು. ಇಂತಹ ಪ್ರಸಂಗವು ಮುಂದೆ ಬರಬಾರದೆಂದು ವೈದಿಕ ಕರ್ಮಗಳನ್ನು ಮಾಡಿಸಲು ಜೇರೆ ಶಾಸ್ತ್ರಿ ಎಂಬ ತರುಣನಿಗೆ ನೌಕರೀ ಕೊಟ್ಟು ವಾಡಿಯಲ್ಲಿಯ ಮಂಗಳ ಕಾರ್ಯಗಳ ಪ್ರಶ್ನೆಯನ್ನೇ ಬಗೆಹರಿಸಿದರು, ಪುರಾಣವನ್ನೂ ಅವನಿಂದ ಹೇಳಿಸಹತ್ತಿದರು. ಆದರೆ ಇಷ್ಟಕ್ಕೆ ಈ ಪ್ರಕರಣ ಮುಗಿಯಲಿಲ್ಲ. ಕುಂಡಲದ ಭಟ್ಟರೆಲ್ಲ ಕೂಡಿ ಶಂಕರಾಚಾರ್ಯರ ಕಡೆಗೆ ದೂರು ಒಯರು, 'ಕಿರ್ಲೋಸ್ಕರರು ತಮ್ಮ ವೃತ್ತಿಯ ಮೇಲೆ ಗದೆ ತಂದಿದ್ದಾರೆ. ಮಡಿ-ಮೈಲಿಗೆ, ಸೃಷ್ಣಾಸ್ಪಷ್ಟ, ತೆಗೆ ದೊಗೆದು ಜಾತಿಸಂಕರ ಪ್ರಾರಂಭಿಸಿದ್ದಾರೆ. ಈ ಭ್ರಷ್ಟಾಚಾರವನ್ನು ನಿಲ್ಲಿಸ ಬೇಕು.” ಎಂದು ಅರ್ಜಿ ಕಳಿಸಿದರು, ಇದರ ಸಲುವಾಗಿ ಶ್ರೀ ಕುರ್ತಕೋಟಿ ಶಂಕರಾಚಾರ್ಯರು ಕಿರ್ಲೋಸ್ಕರವಾಡಿಗೆ ಬರಬೇಕಾಯಿತು ರಾಯರು ಸೀಠಕ್ಕೆ ತಕ್ಕಂತೆ ಆತಿಥ್ಯ ನೀಡಿಗರು, ಕಾರಖಾನೆಯನ್ನೆಲ್ಲ ತೋರಿಸಿದರು. ಮತ್ತು ಕೆಳಗಿನಂತೆ ನಿವೇದಿಸಿದರು. - “ಕಿರ್ಲೋಸ್ಕರವಾಡಿಯು ಒಂದು ಹೊಸ ಊರು, ಇಲ್ಲಿ ನಾವೆಲ್ಲ ಒಂದೇ ಕುಟುಂಬದವರಂತೆ ನಡೆದುಕೊಳ್ಳುವೆವು. ಕಾರಖಾನೆಯನ್ನು ನಡೆಯಿಸುವವ ರಿಗೆ, ಇವನು ಹಿಂದು, ಇವನು ಮುಸಲ್ಮಾನ, ಇವನು ಬ್ರಾಹ್ಮಣನೆಂದು ಭೇದ ಮಾಡುವದು ಹೇಗೆ ಸಾಧ್ಯ ? ಇಲ್ಲಿ ಎಲ್ಲರೂ ಕಂಬಾರ ಕೆಲಸ ಮಾಡುವವರೇ ! ಹೊರಗೆ ಏನಿರುವರೋ ಇರಲಿ, ಇಲ್ಲಿರುವದು ಕೆಲಸಗಾರರ ಜಾತಿಯೊಂದೇ. ಎಲ್ಲರನ್ನೂ ಒಂದೇ ರೀತಿಯಿಂದ ನಡೆಯಿಸಿಕೊಳ್ಳುವದೇ ನನ್ನ ತತ್ವ, ದೇಶಕ್ಕೆ ಕಾರಖಾನೆಗಳು ಬೇಕಿದ್ದರೆ, ಅಲ್ಲಿ ಈ ಮಾತನ್ನೇ ಆಚರಿಸಬೇಕಾಗುವದು” ಎಂದರು. ಡಾ|! ಕುರ್ತಕೋಟಿಯವರು ವಿದ್ವಾಂಸರು, ಚಾಣಾಕ್ಷರು, ಪುರೋಗಾಮಿ ವಿಚಾರಿಗಳು, ಅವರು ರಾಯರ ವಿಚಾರಗಳಿಗೆ ಮೆಚ್ಚಿದರು, ಸಾಯಂಕಾಲದ ಪ್ರವಚನದಲ್ಲಿ “ಕಿರ್ಲೋಸ್ಕರವಾಡಿಯಲ್ಲಿ ನಡೆಯುವ ಕಾರ್ಯದ ಅವಶ್ಯಕತೆಯು ರಾಷ್ಟ್ರಕ್ಕೆ ಎಷ್ಟಿದೆ, ನಿಜವಾದ ಧರ್ಮದ ಸ್ವರೂಪವೇನು ? ಎಂಬುದನ್ನು ವಿವರಿಸುತ್ತ 'ಹೊಸ ಯುಗದಲ್ಲಿ ಉದ್ಯೋಗವೇ ಸರ್ವರ ಧರ್ಮವಾಗಿದೆ. ಇಲ್ಲಿ ಒಂದು ಧರ್ಮಪೀಠವಿದ್ದು, ಸಾಕ್ಷಾತ್‌ ಅಗ್ನಿನಾರಾಯಣನ ವಾಸ್ತವ್ಯವಿದೆ.