ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8Og ಶ್ರೀಮದಾನಂದ ಪಯಣ. - . ..- - - - - -

. ಸೈನ್ಯವನ್ನು ಕಾದಿದ್ದೆ ಸುಎಂದನು. ಶ್ರೀ ರಾಮನು ಹೆದರುತ್ತಿದ್ದ ಆ ವಾನರನನ್ನು ಸಮಾಧಾನಗೊಳಿಸಿ, ತನ್ನ ಸೇನೆಯನ್ನು ಭಾಗೀರಥಿಯ ಉತ್ತರತೀರದಲ್ಲಿ ನಿಲ್ಲು ವಂತೆ ಆಜ್ಞೆ ಮಾಡಿದನು. ನಳನು ಶ್ರೀ ರಾಮನ ಈ ಸೈನ್ಯವನ್ನು ನೋಡಿ ಹೆದರಿ ದರೂ, ಕ್ಷತ್ರಿಯಧರ್ಮವನ್ನನುಸರಿಸಿ ಧೈರ್ಯದಿಂದ ಯುದ್ದೆ ಮಾಡಲು ತೆರಳಿದನು. ಶ್ರೀರಾಮನು ಆ ದಿವಸ ನಳನೊಡನೆ ಏಾಸರರಿಗೆ ಯುದ್ಧ ಮಾಡುವಂತೆ ಆಜ್ಞಾಪಿಸಿ ದನು, ವಾನರರು ಭಾಗೀರಥಿಯಲ್ಲಿ ಸ್ನಾನಮಾಡಿ, ಸೀತಾ-ರಾಮರ ಪಾದಗಳ ಮಸ್ತಕವನ್ನಿಟ್ಟು ನಮಸ್ಕರಿಸಿ ನಳನೊಡನೆ ಯುದ್ಧ ಮಾಡಲು ಉಪಕ್ರಮಿಸಿದ ರು, ಉಭಯ ಪಕ್ಷದವರಿಗಾ ದೊಡ್ಡ ಯುದ್ಧವಾಯಿತು. ವಾನರರು ನಳನ ಸೇನಾ ಜನರನ್ನು ಪರ್ವತ, ಮರ, ಇತ್ಯಾದಿಗಳಿಂದ ಹೊಡೆದರು, ಸುಗ್ರೀವ, ಅಂಗದ, ಮಾರುತಿ ಇತ್ಯಾದಿ ವೀರರು ನಳನ ಸೈನ್ಯವನ್ನು ಒಣಗಿದ ಎಲೆಗಳಂತೆ ಕೆಳಗುದುರಿ ಸಿದರು. ಇರಲಿ, ಕೊನೆಗೆ ನಳನ ಸೇನಾಪತಿಗಳು ಅಪಜಯವನ್ನು ಹೊಂದಿ ಹಿಂತಿ ರುಗಿದರು. ಆ ಕಾಲದಲ್ಲಿ ಅನೇಕ ವಾನರರು ಶತ್ರುಗಳ ಹೊಡೆತದಿಂದ ಭೂಮಿ ಯ ಮೇಲೆ ಬಿದ್ದಿದ್ದರೂ ಮಾರುತಿಯ ಕೃಪೆಯಿಂದ ಅವರೆಲ್ಲರೂ ಚೇತರಿಸಿಕೊಂ ಡರು. ಅನಂತರ ನಳನ ಕಡೆಯಿಂದ ಸಪ್ತದೀಪಗಳ ಪೂರ್ವದ ರಾಜರು, ರಾಮು ಸೇನೆಯೊಡನೆ ಯುದ್ಧ ಮಾಡಲು ತೆರಳಿದರು. ಆಗಲಾತಂದೆ ಮಕ್ಕಳಿಗೆ ಯುದ್ಧವ ನಡೆಯಿತು. ತಂದೆಯನ್ನು ಮಗ ಕೊಲ್ಲುವನು, ಮೊಮ್ಮಗನನ್ನು ಅಜ್ಜಿ ಕೊಲ್ಲು ವನು. ಈ ರೀತಿ ಅನರ್ಥಗಳು ನಡೆದು ಕೊನೆಗೆ ಶ್ರೀ ರಾಮನ ಕಡೆಯ ಸಸ್ತ ಪಗಳ ನೃಪತಿಗಳಿಗೇ ಜಯವಾಯಿತು. ಬಳಿಕ ನಳನು ತನ್ನ ವಂಶದವರನ್ನು ಶ್ರೀ ಕಾಮನ ಸೇನೆಯೊಡನೆ ಯುದ್ಧ ಮಾಡುವಂತೆ ಆಜ್ಞಾಪಿಸಿದನು. ಆಗ ಶ್ರೀರಾಮನು ಕುಶಾದಿ ಪುತ್ರರಿಗೆ ಯುದ್ಧ ಮಾಡುವಂತೆ ಅಪ್ಪಣೆ ಮಾಡಿದನು. ಆ ರಾಜಿ ಬಂಧು ಗಳಿಗೆ ಪರಸ್ಪರ ಘೋರವಾದ ಯುದ್ಧವು ನಡೆಯಿತು ತನ್ನ ಕಡೆಯವರಿಗೆ ಅಪ ಜಿಯವಾಗುವದೆಂಬ ಸೂಕ್ಷವನ್ನು ತಿಳಿದು ನಳ' ಯುದ್ಧಕ್ಕೆ ಬಂದನು. ಆತ ನನ್ನು ನೋಡಿದ ಕೂಡಲೆ ಕುಶನು ನಳನ ಎದುರಿಗೆ ಎಂತು ಯುದ್ದ ಮಾಡಲಾರಂಭಿ ಸಿದನು. ಅವರ ಯುದ್ಧವು ವರ್ಣಿಸಲು ಸಾಧ್ಯವಿಲ್ಲದಂತೆ ಇತ್ತು. ಆಗ ರಕ್ತದ ಪ್ರವಾಹಗಳು ಗಂಗಾನದಿಗೆ ಸೇರಲಾರಂಭಿಸಿದವು. ಕುಶನು ನಳನ ಕಡೆಯ ರಜಪುತ್ರರನ್ನೆಲ್ಲಾ ಭೂಮಿಗುರುಳಿಸಿ, ನಳನನ್ನು ಬಾಣಗಳಿಂದ ಬಹಳ ಹಿಂಸಿಸಿದ ನು, ಅವರಿಬ್ಬರಿಗೂ ಬಹಳ ಕಾಲಗಳ ವರೆಗೆ ಅಸ್ತ್ರ ಯುದ್ಧಗಳು ನಡೆದವು. ಇರಲಿ, ಕೊನೆಗೆ ಕುಶನು ತನ್ನ ದಿವ್ಯಾಸ್ತ್ರಗಳಿಂದ ನಳನ ಕುದುರೆ, ರಥ, ಸಾರಥಿ, ಕವಚ