ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಣ್ಣಾಮಲೈ
ಗೋಚರ
ಅಣ್ಣಾಮಲೈ
ಈ ಹೆಸರಿನ ಪರ್ವತ ಶ್ರೇಣಿಗಳು ಮದರಾಸು ರಾಜ್ಯದ ಕೊಯಮತ್ತೂರು ಜಿಲ್ಲೆಯಲ್ಲಿವೆ ( ಉ. ಅಕ್ಷಾಂಶ, ಪೂ. ರೇಖಾಂಶ). ಇವು ಪಶ್ಚಿಮಘಟ್ಟಗಳ ಭಾಗವಾಗಿದ್ದು, ಪಾಲ್ಘಾಟ್ ಕಣಿವೆಯ ದಕ್ಷಿಣಕ್ಕೆ ವಿಸ್ತರಿಸಿವೆ. ಶ್ರೇಣಿಗಳ ಎತ್ತರ ಇಳಕಲು ಪ್ರದೇಶಗಳು ದಟ್ಟವಾದ ಕಾಡುಗಳಿಂದಲೂ ಚಿಕ್ಕ ಪ್ರಸ್ಥಭೂಮಿಗಳು ಹುಲ್ಲುಗಾವಲುಗಳಿಂದಲೂ ಆವೃತವಾಗಿವೆ. ಅಣ್ಣಾಮುಡಿ ಶಿಖರ ದಕ್ಷಿಣಭಾರತದಲ್ಲೇ ಅತ್ಯಂತ ಉನ್ನತವಾದುದು ()
ಈ ಶ್ರೇಣಿಗಳಲ್ಲಿ ನೈಸ್ ರೂಪಾಂತರಿತ ಶಿಲೆಗಳೊಂದಿಗೆ ಫೆಲ್ಸ್ಟಾರ್ ಮತ್ತು ಕ್ವಾಟ್ರ್ಜ್ ಎಳೆಗಳು ಮತ್ತು ಕೆಂಪು ಪಾರ್ಫೆರೈಟ್‍ಗಳನ್ನು ಬೆರೆತಿರುವ ಶಿಲಾಭಾಗಗಳೂ ಇವೆ. ಮೇಲಿನ ಇಳಿಜಾರಿನಲ್ಲಿ ವರೆಗೆ ಕಾಫಿ ಮುಖ್ಯಬೆಳೆ. ಕೆಳಮಟ್ಟದ ಇಳಿಜಾರುಗಳಲ್ಲಿ ದಕ್ಷಿಣಭಾರತದಲ್ಲೇ ಉತ್ತಮದರ್ಜೆಯ ತೇಗದ ಮರಗಳಿವೆ.
ಇಲ್ಲಿ ಕಾಡೆಮ್ಮೆ, ಕಾಡುಕೋಣಗಳು, ಸಾರಂಗ, ಹುಲಿ, ಚಿರತೆ, ಕರಡಿ ಮುಂತಾದ ಪ್ರಾಣಿಗಳು ಹೆಚ್ಚಾಗಿ ಕಂಡುಬರುತ್ತವೆ. ಉತ್ತರ ಭಾಗಗಳಲ್ಲಿ ಕಂಡು ಬರದ ನೀಲಗಿರಿ ಕಾಡು ಟಗರುಗಳು (ಐಬೆಕ್ಸ್) ಇಲ್ಲಿ ಇವೆ.
(ಎಂ.ಎನ್.ವಿ.ಡಿ.)