ವಿಷಯಕ್ಕೆ ಹೋಗು

ಪುಟ:ಪ್ರತಾಪರುದ್ರದೇವ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕ , 13 ಹದಿನಾರುಕಡೆ ಪರಭಾಷೆಯ ಸಹಾಯವನ್ನ ಸೇಕ್ಷಿಸುವ ಕನ್ನಡದಲ್ಲಿ ಸಮಾನಾ ರ್ಥವನ್ನು ಕೊಡುವ ಪ್ರತಿಶಬ್ದಗಳನ್ನು ದೊರಕಿಸಿಕೊಳ್ಳಬೇಕು, ಇಲ್ಲದಿದ್ದರೆ ಸಂಸ್ಕೃತದಲ್ಲಿ ಹುಡಕಬೇಕು. ಆ ಸಂಸ್ಕೃತವೊ ಭರತಖಂಡದಲ್ಲಿ ಹುಟ್ಟಿ ಬೆ ಇದು ಲಯವಾಗಿ ಸಾವಿರಾರುನರಸುಗಳಾಯಿತು. ಈಗ ಇಂಗ್ಲೀದು ಅದರ ಸಾರವನು ತೆಗೆದುಕೊಂಡಿರುವದಲ್ಲದೆ ಪ್ರತಿದಿನವೂ ಬೆಳೆಯುತ್ತಲೇ ಬರುತ್ತಿ ರುವದು. ಇಂತಹ ಭಾಷೆಯ ಉತ್ತಮ ಗ್ರಂಥವನ್ನು ಆ ಸಾಮತಿಗೆ ಎಡೆ ಗೊಡದೆ ಕನ್ನಡಿಸಬೇಕೆನ್ನುವದು ಆ ಇಂಗ್ಲೆಂಡ್ ದೇಶವಿರತಕ್ಕ ಪಶ್ಚಿಮ ಸಮುದ್ರದ ನೀರನ್ನು ನಮ್ಮ ಕರ್ನಾಟಕದ ರಾಜಧಾನಿಯ ದೊಡ್ಡ ಕೆರೆಗೆ ತರಲು ಮಧ್ಯದದಲ್ಲಿರತಕ್ಕೆ ಅನೇಕ ಸಾವಿರ ಮೈರಿಗಳ ನೆಲವನ್ನೂ, ಅನೇಕ ಉನ್ನತಸರತಗಳನ್ನೂ, ಅಗಾಧವಾದ ನದಿಗಳನ್ನೂ, ಅಘೋರವಾದ ಅರ ಣ್ಯಗಳನ್ನೂ, ದಾಟಿಸಿ ಬರುವಂತೆ ಕಾಲುವೆಯನ್ನು ತೆಗೆಯಬೇಕೆಂದು ಪ್ರಯತ್ನ ಪಟ್ಟಂತಲ್ಲವೆ? ಅದನ್ನು ನಮ್ಮ ದೊಡ್ಡ ಕೆರೆಗೆ ತಿರಿಗಿಸಿದರೆ ನಮ್ಮ ಈಗಿನ ಕೆರೆಯು ಅದರ ಪ್ರವಾಹವನ್ನು ಹಿಡಿಯುವದು ಎಲ್ಲಾದರೂ ಹೋ ಗರಿ; ಕೆರೆಯೇ ಉಳಿಯುವದೊ ಕೊಚ್ಚಿಹೋಗುವದೊ ? ಇನ್ನೂರ ನಲವತ್ತು ಕೋಟಿ ಪ್ರಜೆಗಳಿಂದ ಕೂಡಿದ ಭರತ ಖಂಡದ ಸಾಮ್ರಾಜ್ಯಕ್ಕಿಂತಲೂ ಅತಿಶಯವಾದ ಆ ಕವಿರಾಜ ಸಾವ್ರಭೌಮ ನಾದ ಷೇಕ್ಸ್ಪೀರ್ ಇಂತಾ ಇಂಗ್ಲೀಷ್ ಭಾಷೆಯ ಅನುಕೂಲಗಳು ಸಾಲದೆ ಇದ್ದ ನಿರ್ಬಂಧಗಳನ್ನೆಲ್ಲ ಉಲ್ಲಂಘಿಸಿ ಮನಸ್ಸೇ ಬರೆದರೂ, ಛಂದಸ್ಸಿಗೂ, ವ್ಯಾಕರಣ ಶಬ್ದಾರ್ಥಕ್ಕೂ, ವಿರುದ್ಧವಾಗಿರುವದೆಂದು ಹೇಳಲು ಪಂಡಿ ತರಿಗೆ ಶಕ್ತಿ ಸಾಲದೆ ಅವನು ಬರೆದದ್ದೇ ಛಂದಸ್ಸು, ಅವನು ಬರೆದದ್ದೇ ವ್ಯಾಕರಣ, ಅವನು ಕೊಟ್ಟ ಅರ್ಥವೇ ಶಬ್ದಾರ್ಥವೆಂದು ಪ್ರೇಕರ್ ಛಂದಸ್ಸು, ಮೇಕಸೀರ್ ವ್ಯಾಕರಣ, ಷೇಕಸೀರ್ ನಿಘಂಟುಗಳಿಗೆ ಅವ ಕಾಶವನ್ನುಂಟುಮಾಡಿ ಹುಟ್ಟಿರುವ ಅವನ ಕಾವ್ಯಗಳಲ್ಲೂ, ವಿಜಾತೀ ಯವಾದ ಗಂಭೀರತೆಯೂ, ಕಾವ್ಯರಸವೂ, ಉಳ್ಳ ಉತ್ತಮ ಕಾವ್ಯವನ್ನು ಭಾಷಾಂತರಿಸಲು ಈ ಬಡ ಕನ್ನಡದ ಪ್ರಾಸ, ಗಣ, ಮಾತ್ರ, ಛಂದಸ್ಸಿನ ಕತ್ತರಿಗೆ ಸಿಕ್ಕಿ ಒದ್ದಾಡಲೇಬೇಕಾದ ಕರ್ಣಾಟಕದ ಸುಂಡಗಳು ಪ್ರಯತ್ನಿ