ಪುಟ:Banashankari.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

" ಧರ್ಮನಿಷ್ಟ ರಾಯರ ಮನೆಯಲ್ಲೇ ಹೀಗಾದರೆ–" "ಆ ದೈವಭಕ್ತಿಯೆಲ್ಲ ಸೋಗು ಕಣಯ್ಯ!" " ಅಯ್ಯೋ!" ಆದರೆ ತಿಳಿವಳಿಕೆಯ ಧನಿಗಳೂ ಎರಡು ಮತ್ತೂರು ಇಲ್ಲದಿರಲಿಲ್ಲ. "ಪಾಪ! ಅವರಾದರೂ ಏನು ಮಾಡಿಯಾರು ?" " ಏನು ಎತ್ತ ಅಂತ ತಿಳಿಯೋಕುಂಚೆಯೇ ಮದುವೆಯನೂ ಆಯ್ತು. ಸುಖ ಅನು ಭವಿಸಿ ಮುಗಿದದ್ದರೂ ಆಯ್ತು." "ಏಳೇಳು ಜನ್ಮದ ವೈರಿಗೂ ಹೀಗಾಗಬಾರದು ಕಣ್ರೀ." " ಆ ಮಗೂನ ತಲೆ ಬೋಳಿಸೋದು! ಅಯ್ಯಪ್ಪ, ಊಹಿಸೋಕಾಗಲ್ಲ.ಜು೦ ಎನ್ನುತ್ತೆ ಮೈ." ಆ ಸ್ವರಗಳ ನಡುವೆಯೊಂದು ಪ್ರಶ್ನೆ ಕೆದಕಿ ಕೆದಕಿ ಬರುತ್ತಿತು;

"ಅಲ್ಲ, ಅವಳ್ನ ಇನ್ನು ಮನೇಲಿ ಇಟ್ಟೊಳ್ಳೋದಾದರೂ ಯಾತಕ್ಕೆ? ಸದ್ದಿಲ್ವೆ ಆಚೆಗೆ ದಾಟಿಸ್ಬಾರದೆನ್?"
ಅಲ್ಲಿ ಇಲ್ಲಿ ಸಂಚಾರಮಾಡಿ ಆ ಪ್ರಶ್ನೆ ಅಮ್ಮಿಯ ಮಾವನ ಬಳಿಗೆ ಬಂದಿತು, ಅವರು ಅಮ್ಮಿ ಸಮಿಾಪ ಇರದೆ ಇದ್ದಾಗ ಮನೆಯಾಕೆಯನ್ನು ಕೇಳಿದರು :

" ಏನಂತಾರೆ ಗೊತ್ತೇನು ? "ಏನಂತೆ?" " ಸೊಸೇನ ಜೀವನಹಳ್ಳಿಗೆ ವಾಪ್ಸು ಕಳಿಸಾರು - ಅಂತೆ." ಅದು ಅರ್ಥವಿಲ್ಲದ ಮಾತಾಗಿರಲಿಲ್ಲ. ಹಾಗೆ ಕಳುಹಿಸಿಕೊಟ್ಟರೆ ನಿಂದೆ ನಿಂತು ಹೋಗು ತ್ತಿತು, ಆದರೆ ಹಾಗೆ ಮಾಡುವುದು ಸಾಧ್ಯವಿತೇ ? ಕೈ ಹಿಡಿದಾಕೆಯ ವಿಚಾರವನ್ನು ಊಹಿಸಿಕೊಂಡು ತಮ್ಮದೂ ಅದೇ ಅಭಿಪ್ರಾಯ ಎನ್ನುವಂತೆ ಅಮ್ಮಿಯ ಮಾವ ಹೇಳಿದರು. "ಹಾಗೆ ಕಳಿಸೋಕಾಗುತ್ತೆ ? ಅಲ್ಲಿ ಯಾರಿದ್ದಾರೇಂತ? ಹಾಗೆ ಆಕೇನ ಅಡವಿ ಪಾಲು ಮಾಡಿದರೆ ದೇವರು ಮೆಚ್ಚಿಯಾನೇ?" ಆದರೂ, ಆ ಸಮಸ್ಯೆಗೊಂದು ಪರಿಹಾರ ಬಲು ದೂರದಲ್ಲಿ ಅವರಿಗೂ ಕಾಣಿಸುತ್ತಿತು. ಅದು ಅಮ್ಮಿಯ ಅಣ್ಣ ರಾಮಕೃಷ್ಣನ ಮದುವೆ. ಆತ ಸಂಸಾರ ಹೂಡಿದನೆಂದರೆ ವಿಧವೆ ತಂಗಿಯನ್ನು ಅಲ್ಲಿಗೆ ಕರೆಸಿಕೊಳ್ಳುವುದು ಸಾಧ್ಯ, ಆದರೆ ಅವರಾಗಿಯೇ ಆ ಪ್ರಸಾಪ ಮಾಡು ವುದು ಯೋಗ್ಯವಾಗಿರಲಿಲ್ಲ. .ಮತ್ತೊಂದು ತಿಂಗಳು ಕಳೆದು ಮುಂಗಾರು ವಳೆಯ ದಿನ ಸಮಿಾಪಿಸುತ್ತಿದ್ದಂತೆ ರಾಮಕೃಷ್ಣನೇ ರಾಯನಹಳ್ಳಿಗೆ ಬಂದ. ಅಷ್ಟು ದಿನಗಳ ಮೇಲೆ ಅದೇ ಮೊದಲ ಬಾರಿ ಅಮ್ಮಿಯ ಮುಖ ಅರಳಿತು. ಆಕೆ ಲವಲವಿಕೆಯಿಂದ ಮನೆಯೊಳಗೆ ಹೆಜ್ಜೆಯಿಟ್ಟಳು. " "ಚೆನಾಗಿದೀಯೇನಪಾ ರಾಮಕೃಷ್ಣ ?" ಎಂದು ಅಮ್ಮಿಯಿ ಮಾವ ಕೇಳಿದರು, " "ಹೀಗಿದೀನಿ ಮಾವಯ್ಯ." " ಬೇಸಾಯದ ಏರ್ಪಾಟು ಮಾಡೊಂಡಿದೀಯೇನು?"