ಈ ಪುಟವನ್ನು ಪ್ರಕಟಿಸಲಾಗಿದೆ
೫೪
ನೇತ್ರವತಿಯ ಸ್ವಪ್ನ ಫಲ.
ಅಜಿತನು ವೀರನೆ ಹೌದು; ಆದರೂ ಆತನ ಅವಸಾನವನ್ನು
ನೋಡಬಾರದೆ ? ಮನುಷ್ಯನಿಗೆ ಶಕ್ತಿಯನ್ನೂ ಯುಕ್ತಿಯನ್ನೂ ದೇವರೇ
ಕರುಣಿಸುವನು, ಆದರೆ ಸೊಕ್ಕು ತಲೆಗೆ ಅಡರಿ, ಮನುಷ್ಯನು ತಾನು
ಭೂಮಿಯ ಮೇಲೆ ಇದ್ದಾನೋ ಇಲ್ಲವೋ ಎಂಬಂತೆ ನಡೆಯುವುದಕ್ಕೆ ತೊಡಗಿದನೆಂದರೆ, ದೇವರೇ ಆತನ ಕೈ ಬಿಟ್ಟು ಬಿಡುವನು, ಬೆಂಕಿಯಾಗಿ
ಬಾನಿಗೇರಿದವನ ಬಿರುಸು ಆಗ ಬೂದಿಯಾಗಿ ಭೂಮಿಗೆ ಬೀಳುವುದು.
ಅಜಿತನು ಆ ದುರ್ದಶೆಗೆ ಬಂದನು. ಅಂಥ ಅವಸ್ಥೆಯು ನಮ್ಮ ಹಗೆಗಾರರಿಗೆ ಕೂಡ ಬರಬಾರದು.