ಪುಟ:ಪ್ರೇಮ ಮಂದಿರ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ. ವಾಗೂ ಚಂದ್ರಚೂಡನು ಅವಳನ್ನು ನೋಡಿ ಮಮತೆಯಿಂದ ಪ್ರಶ್ನೆ ಮಾಡಿದನು. ಈ ಚಿತ್ರದ ಮನವು ಕೊನೆಗೆ ನಿನಗೆ ಸಾಧ್ಯವಾಯಿತೋ ಇಲ್ಲವೋ ? ” ಕೃಷ್ಣಾ ಕುಮಾರಿಯು ಸ್ವಲ್ಪ ಹೊತ್ತಿನವರೆಗೆ ಸುಮ್ಮನಿದ್ದು ಆ ಮೇಲೆ ಮುಖವನ್ನು ತಗ್ಗಿಸಿಕೊಂಡು ಮಾತನಾಡಿದಳು. “ ಸ್ವಾಮಿ, ನಿಮ್ಮ ಮುಂದೆ ನಾನು ಸತ್ಯವನ್ನು ಹೇಗೆ ಬಚ್ಚಿಡಲಿ, ಲಜ್ಞಾದೇವಿಯ ಆಣೆಯಿಂದ ಹೇಳುತ್ತೇನೆ; ಮನಸನ್ನು ಬಿಗಿಹಿಡಿಯುವದು ನನ್ನಿಂದ ಆಗುವದಿಲ್ಲ. ಸ್ವಾಮಿ, ನನಗೆ ಅಪ್ಪಣೆಯನ್ನು ಕೊಡಿರಿ, ನಾನು ಆಶ್ರಮದಿಂದ ಹೊರಟು ಹೋಗುತ್ತೇನೆ. ಈ ಪವಿತ್ರ ಸ್ಥಾನವು ಹತಭಾಗಿನಿಯಾದ ಈ ಪಾಪಿಷ್ಠೆಯಿಂದ ಇನ್ನು ಮುಂದೆ ಕಲಂಕಿತವಾಗುವದು ಬೇಡ. ” ಕೃಷ್ಣ ಯು ತನಗೆ ಈ ಪ್ರಕಾರದ ಉತ್ತರವನ್ನು ಕೊಡಓಹುದೆಂದು ಚಂದ್ರಚೂ ಡನು ತಿಳಿದಿರಲಿಲ್ಲ. ಅವಳ ಮಾತಿನಿಂದ ಆತನ ಮನಸ್ಸು ಕಲ್ಲೋಲವಾಯಿತು. ಆಗಲ ವನು ಕ್ರುದ್ಧ-ಸ್ವರದಿಂದ ಮಾತನಾಡಿದನು. ಪಾಪಾತ್ಮ, ನಿನ್ನ ಅದೃಷ್ಟದ ಭವಿಷ್ಯವ ತಿಳಿದ ಒಳಿಕಾದರೂ ನೀನು ಚಿತ್ರದಮನ ಮಾಡಬಹುದೆಂದು ನಾನು ತಿಳಿದಿದ್ದೆನು. ಕೃಷ್ಣ! ನಿನ್ನ ಈ ಅಹಂಕಾರವು ಶೀಘ್ರವಾಗಿಯೇ ಚೂರುಚೂರಾಗಿ ಹೋಗುವುದು. ಯಾವ ಅನಿಷ್ಟವನ್ನು ಪ್ರತೀಕಾರಮಾಡುವದಕ್ಕಾಗಿ ನಾನು ಇಷ್ಟೊಂದು ಪ್ರಯತ್ನ ಪಡು ಇರುವೆನೋ, ಆ ಅಸಿಷ್ಟವ ನಿಶ್ಚಯವಾಗಿ ಪ್ರಾಪ್ತವಾಗುವದು! ” ಕೃಷ್ಣಕುಮಾರಿಯು ಮೋರೆಯನ್ನು ತಗ್ಗಿಸಿ ನಿಂತುಕೊಂಡಳು. ಸಮೀಪದಲ್ಲಿಯೇ ಬಿದ್ದಿದ್ದ ಒಂದು ಕರಿಯ ಕಲ್ಲಿನ ಮೇಲೆ ಕುಳಿತುಕೊಂಡು ಚಂದ್ರಚೂಡನು ಮತ್ತೆ ಅವ ಇನ್ನು ಕುರಿತು ಮಾತನಾಡಿದನು. ( ಕೃಷ್ಣ! ಕರುಣಸಿಂಹನು ಯಾರೆಂಬುವದನ್ನು ಇಂದು ನಿನಗೆ ಹೇಳುತ್ತೇನೆ. ದುರ್ಗಾಧಿಪತಿಯಾದ ವಿಮಲಸಿಂಹನು ನನ್ನ ಶಿಷ್ಯನು ಆತನ ದುರ್ಗವು ಈಗ ಚಂದ್ರಾವತನಾದ ಭೀಮಸಿಂಹನ ವಶದಲ್ಲಿದೆ. ಭೀಮಸಿಂಹನು ದಾಂಭಿಕನು, ಕಪಟಿಯು, ಭಯಂಕರಮನುಷ್ಯನು! ಯುಕ್ತಿಯಿಂದಲೂ ಕೌಶಲ್ಯ ದಿಂದಲೂ ವಿಮಲಸಿಂಹನ ವಿರುದ್ದವಾಗಿ ದಿಲೀಪತಿಗೆ ದೂರ ಹೇಳಿ, ವಿಮಲಸಿಂಹನಿಂದ ದುರ್ಗವನ್ನು ಕಿತ್ತುಕೊಂಡನು. ಅಭಿಮಾನಿಯಾದ ವಿಮಲಸಿಂಹನು ಸರ್ವಸ್ವವನ್ನು ಪರಿ ತ್ಯಜಿಸಿ ರಾತ್ರಿಯಲ್ಲಿಯೇ ದುರ್ಗವನ್ನು ಬಿಟ್ಟು ಹೊರಟುಹೋದನು. ಆಗ ನಾನು ತೀರ್ಥಯಾತ್ರೆಗೆ ಹೋಗಿದ್ದೆನು. << ವಿಮಲಸಿಂಹನು ಮುಕಶಿವಲೀನದಿಯನ್ನು ದಾಟುತ್ತಿದ್ದಾಗ ಆತನ ನೌಕೆಯು ಒಂದು ಬಂಡೆಯ ಮೇಲೆ ಅಪ್ಪಳಸಿ ಒಡೆದು ಮುಳುಗಿಹೋಯಿತು. ಅದರಲ್ಲಿ ಒಬ್ಬ ಹುಡುಗನೂ, ಒಬ್ಬ ಹುಡಿಗೆ ಇದ್ದರು. ಆ ಹುಡುಗನೇ ವಿಮಲಸಿಂಹನ ಒಬ್ಬನೇ ಒಬ್ಬ ಮಗನಾದ ಕರುಣಸಿಂಹನು! ಮತ್ತು ಆ ಹುಡುಗೆಯೇ ಸೀನು!!