ಪುಟ:ಪ್ರೇಮ ಮಂದಿರ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ. ha 4/+. • + - - - ತಂದೆ ತಾಯಿಗಳಿಗೂ ನನಗೂ ಕೇಶವನ್ನುಂಟು ಮಾಡಬೇಡ. ” ಚಂದ್ರಚೂಡನು ವಾತ್ಸಲ್ಯಭರದಿಂದ ಮಾತನಾಡಿದನು. - ಲಲಿತೆಯ ಕಣ್ಣುಗಳಲ್ಲಿ ಬಾಷ್ಟ್ರಗಳು ತುಂಬಿದುವು. ಅಳುದನಿಯಿಂದ ಅವಳು ಮಾತನಾಡಿದಳು, “ ತಮ್ಮ ಇಚ್ಛೆಯೇ ಹಾಗಿದ್ದ ಮೇಲೆ ನಾನು ಮನೆಗೆ ಹೋಗಲಿಕ್ಕೆ ಬೇಕು.”

  • ಹೋಗು. ಮಗಳೇ ಹೋಗು.”

ಸೇವಕರು ಲಲಿತೆಯ ಮೇಣೆಯನ್ನು ಇಟ್ಟುಕೊಂಡು ಸಮೀಪದಲ್ಲಿಯೇ ಕುಳಿತು ಕೊಂಡಿದ್ದರು. ಲಲಿತೆಯು ಚಟಕ್ಕನೆ ಎದ್ದು , ಚಂದ್ರಚೂಡನ ಚರಣಕಮಲಗಳಿಗೆ ಭಕ್ತಿ ಪೂರ್ವಕವಾಗಿ ವಂದಿಸಿ ಮೇಣೆಯಲ್ಲಿ ಕುಳಿತುಕೊಂಡಳು. ಸೇವಕರು ಮೇಣೆಯನ್ನು ಎತ್ತಿದರು. (ಮಗಳೇ, ಹೋಗಿ ಬಾ, ಭವಾನೀ ಮಾತೆಯ ಕೃಪೆಯಿಂದ ನಿನ್ನ ಮನೋರ ಥವ ಪೂರ್ಣವಾಗಲಿ, ” ಹೀಗೆಂದು ಚಂದ್ರಚೂಡನು ಆಶೀರ್ವದಿಸಿದ ಕೂಡಲೇ ಮೇಣಾ ವಾಹಕರು ನಡೆಯಹತ್ತಿದರು. ಆ ಮೇಣೆಯು ಕಣ್ಮರೆಯಾಗುವವರೆಗೂ ಚಂದ್ರಚೂ ಡನು ಆಶ್ರಮದ ಹೊರಬದಿಯಲ್ಲಿ ನಿಂತುಕೊಂಡು ನೋಡುತ್ತಿದ್ದನು. ಆತನನ್ನು ನೋಡಿ ದರೆ, ಶಕುಂತಲೆಗೆ ನಿರೋಪವನ್ನಿತ್ತು ಆಕೆಯ ಗಮನಪಥವನ್ನೇ ನೋಡುತ್ತ ನಿಂತು ಕೊಂಡಿದ್ದ ಕಣ್ವ ಮಹರ್ಷಿಯೋ ಎಂಬಂತೆ ತೋರುತ್ತಿದ್ದನು. ಅಲ್ಪಾವಧಿಯಲ್ಲಿಯೇ ಲಲಿತೆಯ ಮೇಣೆಯು ಕಾಣದಂತಾಯಿತು. ವನ್ಯವೃಕ್ಷಲತೆಗಳ ಆತನ ದೃಷ್ಟಿ ಪಥಕ್ಕೆ ಅಡ್ಡವಾದ ಒಳಿಕ ಚಂದ್ರಚೂಡನು ಕಣ್ಮರೆಸಿಕೊಂಡು ಆಶ್ರಮದ ಕಡೆಗೆ ತಿರುಗಿದನು. ಆಶ್ರಮದ್ವಾರದಲ್ಲಿ ಬಂದೊಡನೆಯೇ ಚಂದ್ರಚೂಡನು ಕೋಮಲಸ್ವರದಿಂದ ಕೂಗಿ ದನು. “ ಕೃಷ್ಣ! ” ಆತನ ಕೂಗನ್ನು ಕೇಳಿದೊಡನೆಯೇ ಕಾವಿಯ ಒಟ್ಟೆಯನ್ನು ಪರಿಧಾನ ಮಾಡಿ ಕೊಂಡಿದ್ದ ಒಬ್ಬ ಸುಂದರ ಯುವತಿಯು ಆಶ್ರಮದ ಬಾಗಿಲಿಗೆ ಬಂದು ನಿಂತುಕೊಂಡಳು. ಅವಳ ನೈಸರ್ಗಿಕವಾದ ಸೌಂದರ್ಯವು ಆ ಕಾವಿಯ ವಸ್ತ್ರದಿಂದ ಅಧಿಕೋಜ್ವಲವಾಗಿ ತೋರುತ್ತಿತ್ತು, ಆ ರೂಪವತಿಯ ಲಾವಣ್ಯದಲ್ಲಿ ಕೋಮಲತೆಯಿದ್ದಿಲ್ಲ; ಆದರೆ ಒಂದು ಪ್ರಕಾರದ ತೀವ್ರತೆಯು ದೃಗ್ಗೋಚರವಾಗುತ್ತಿತ್ತು. ಪ್ರಿಯವಾಚಕರೇ, ಶ್ರಾವಣಮಾಸ ದಲ್ಲಿ ದೊಡ್ಡದೊಂದು ಮಳೆಯ ಸೆಳಕು - ಧಬ ಧಬ' ಸುರಿಯುತ್ತಿರಲು ಇರ್ತಡಿಗಳ ಲ್ಲಿಯೂ ತುಂಬಿ ಹೊರಸೂಸಿ ಹರಿಯುತ್ತಿರುವ ಗಂಗಾನದಿಯಂತಹ ದೊಡ್ಡ ಪ್ರವಾಹದ ಭಯಂಕರ ಸ್ವರೂಪವನ್ನು ಲಕ್ಷಕ್ಕೆ ತಂದುಕೊಳ್ಳಿರಿ. ಆ ಉದ್ಧಾಮವಾದ ಚಂಚಲಭಾ ವೆಗಳೆಲ್ಲವೂ ಕೃಷ್ಣಾ ಕುಮಾರಿಯ ಮೊಗವನ್ನು ನೋಡಿದೊಡನೆಯೇ ಕಣ್ಣ ಮುಂದೆ ಕಟ್ಟಿದಂತಾಗುತ್ತಿದ್ದುವು.