ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೮

ರಾಮಚಂದ್ರಚರಿತಪುರಾಣಂ

ಮ || ಇರವೇಲ್ಕಂ ಪೆಂಪಿಂಗಿ ಪಾಂಗಣಯದಾನಿಲ್ಲಿರ್ಪುದು ಸುತ್ತುಗುಂ |
ಪರಿವಾರಂ ಗುಣಹಾನಿ ನೆಟ್ಟನೆನಗ ಕುಂ ಮುನ್ನವೆನ್ನಿತ್ತು ದುಂ ||
ಭರತಂ ಪೆತ್ತುದುಮಾಳಮಕ್ಕುಮಪವಾದಾತೋದ್ಯ ನಾದಂ ವಸುಂ |
ಧರೆ ನಿನ್ನೆ ವರಂ ದಿಶಾಕರಟ ಕರ್ಣಾಸ್ಪಾಲನಂಮಾಡುಗುಂ || ೧೪೮ ||

ಮ|| ಸ|| ತಲೆಯೊಳ್ ನಿಮಾ್ಥಿಯಂ ರನ್ನದ ತಲೆದೊಡವಂ ಪೊತ್ತು ಮೆಯ್ಯತ್ತ ಬಾಹಾ |
ಬಲದಿಂ ಬೆಂಕೊಂಡಖಂಡಪ್ರಭರನಹಿತರಂ ಸಾಧಿಪಂ ವಿದ್ವಿಷನ್ಮಂ ||
ಡಲಮಂ ಬೀಳ್ಕೊಂಡೆನೆಂದಯ್ಯನ ಚರಣಯುಗಕ್ಕರ್ಫ್ಯಪಾದ್ಯಂಗಳಂ ನಿ |
ಸುಲ ಮೌಳಿ ಸ್ಕೂಲ ಮುಕ್ತಾಫಲ ರುಚಿ ಜಲದಿಂ ರಾಮನುವ್ವಾ ಮನಿತ್ಯಂ |

ಅಂತು ವಿನತ ಮಸ್ತಕನಾಗಿ ಸಭೆಯಿನೆಟ್ಟು ಪೊಗೆ-
ಕಂ || ಒಡನೆ ದಶರಥನ ಕಣ್ಣಲ್
ನಡೆದುವು ಕಣೋಡನೆ ತಳರ್ದು ನಿಲ್ಲದೆ ಮನಮುಂ ||
ನಡೆದುದದನೊಡನೆ ನಿಡುಸುಯ್
ನಡೆದುದು ಸುಮ್ಮೊಡನೆ ನೃಪತಿ ಮಾರ್ಧೆಗೆ ಸಂದಂ || ೧೫೦ ||

ಮ||ಸ ||ಕಡೆಗಣ್ಣಿಂ ಕರ್ಣಮೂಲಕ್ಕೊಗೆದುಗುತರೆ ಬಾಷ್ಪಾಂಬುಗಳ್ ಸುಯ್ದ ಪೊಯೀ |
ರ್ದೆಡೆಯೊಳ್ 'ಸಂದೇಹಮಂ ಪುಟ್ಟಿಗೆ ಮಿಡುಕುವ ತಾಣಂಗಳಲ್ಲಲ್ಲಿ ಸತ್ವಂ ||
ಗಿಡೆ ಧೈಯ್ಯಂಗೆಟ್ಟು ಸಂಸಾರಮನುಜದ ಮಹಾಸತ್ವ ನುಂ ಮೂರ್ಛಮೋದಂ ।
ಗಡ ಜನ್ಯಾರಣ್ಯದೊಳ್ ಮಿಕ್ಕರನವಿಲಿಸದೇ ಮೋಹದಾವಾಗ್ನಿ ದಾಹಂ ||೧೫೧||


ಅಂತು ದಶರಥಂ ಮೂರ್ಛಿತನಾಗೆ -

ಮ||ಸ್ತ ||ಪತಿ ಪುತ್ರಂ ಪೋಗೆ ಮೂರ್ಛಾಭರ ಪರವಶನಾಗಿ ರ್ಪುದುಂ ಕೈಕೆ ಲಜ್ಞಾ |
ನತೆ ಕಾಂಚೀ ರತ್ನ ಘ೦ಟಾ ರವದೊಡನಪವಾದ ಪ್ರಣಾದಂ ದಿಶಾ ||
ತತಿಯಂ ತಳ್ತಯ್ಯ ತಯ್ಕೆ ಮೆದುಳುಗಲನೊಟ್ಟೆಸಿ ಬಾಷ್ಪಾಂಬು ಧಾರಾ |
ತತಿ ಮುಕ್ತಾಹಾರಮಂ ಪೆರೋಲೆಗೆ ಕುಡೆ ತದಾಸ್ಥಾನದಿಂದೆಟ್ಟು ಪೋದಞ ||

ಅನಂತರ೦ -
ಕಂ || ಅನುಜಂ ಸಭೆಯಿನಗಲ್ಲ
ಣ್ಣನ ಬಲಿಯಂ ಸಲ್ವ ಸಮಯದೊಳ್ ಬೇಗಂ ಲೋ ||


1. ಸಂದೇಹಮಂ ಸ೦ಗಳಿಗೆ ಮಿಡುಕುದಾಣ. ಗ, ಘ. 2. ತಾಪಂ. ಕ. ಚ.