ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಾಶ್ವಾಸಂ
೧೫೯


ಚನದ ಬಲಿಸಲ್ವ ಮನಮಂ
ತನುವಿನ ಬುಸಲ್ವ ನೆಲನಿನಿಸಿಆಕೆಯಂ || ೧೫೩||

ಕಂ ॥ ಪ್ರತ್ಯಂತ ದೇಶ ಭೂಬ್ಬದ
ಪತ್ಯರನೆಟ್ಟ ಪುಗಿಸಿ ಕಾಂತಾರ ನಗೋ ||
ಪತ್ಯಕಮಂ ಕೌಸಲ್ಯಾ
ಪತ್ಯಂಗೋಲಗಿಪೆನವರ ಹರಿವಿಷ್ಟರಮಂ ||೧೫೪ ||

ಎಂದು ಮನದೊಳ್ ಮಂತಣಮಿರ್ದು ಲಕ್ಷಣಂ ಸಭೆಯಿನೆಟ್ಟು ಪೋಪು ದುಂ-

ಚ || ಕ್ರಮದೊಡೆಯಂಗೆ ತಂದೆ ಧರೆಯಂ ಕುಡಲೆಂದಿರೆ ದೈವಯೋಗದಿಂ |
ಸಮನಿಸಿದತ್ತು ಪುಣ್ಯ ಪುರುಷಂಗಮರಣ್ಯ ನಿವಾಸವೆಂದು ಖೇ ||
ದಮನೊಳಕೊಂಡು ಗದ್ದದ ರವಂ ನತ ದೀನ ಮುಖಂ ಪ್ರಲಾಪ ಸಂ |
ಭ್ರಮಮುದಿತಾಶ್ರು ಶೋಕರಸ ಭಾಜನವಾದುದು ತತ್ಸಭಾ ಜನಂ || ೧೫೫ ||

ಮಾಲಿನಿ|| ವಿಗತ ದಿಗಿಭವಾಶಾ ದೇಶಮಸ್ತಂಗತಾರ್ಕ೦ |
ಗಗನ ಪರಿಧಿ ಯಾತ ಪ್ರಾಣವಾತಂ ಶರೀರಂ ||
ಸೊಗಯಿಸದವೊಲಾಗ೪ ರಾಘವಂ ಪೋಗೆ ಕಣ್ಣ೦ |
ಬಗೆಗಮಿಟಿಕೆಯಾದತ್ತಾ ಸಭಾ ಚಕ್ರವಾಲಂ || ೧೫೬ ||

ಅನ್ನೆಗಮಾ ವೃತ್ತಾಂತವೆಲ್ಲಮಂ ಸುಮಿತ್ರೆ ಕೇಳ ಪರಾಜಿತಾ ಮಹಾದೇವಿ
ಯಲ್ಲಿಗೆ ವಂದು-

ಕಂ || ಎರೆದಳ್ ಗಡ ಕೈಕೆ ವಸುಂ
ಧರೆಯಂ ಭರತ೦ಗೆ ರಾಮನಿತ್ತ೦ ಗಡಿದೇಂ ||
ದೊರೆಕೊಳ್ಳು ಮೆ ಕರ್ಣಪರಂ
ಪರೆಯಿಂ ಕೇಳ್ವುದನೆ ನಿಮಗೆ ಪೇಲ್ಪಂದೆಂ ||೧೫೭||

ಎಂಬುದುಮಪರಾಜಿತೆ ಭಯಚಕಿತ ಚಿತ್ತೆಯಾಗಿ-

ಕಂ || ಎರೆವನ್ನಳೆ ಕೈಕೆ ವಸುಂ
ಧರೆಯಂ ತೃಣವಾಗೆ ಬಗೆದು ಕುಡುವನ್ನನೆ ನಂ ||
ದರದೈರ್ಯಂ ರಾಮಂ ನುಡಿ
ದೊರೆಕೊಳು೦ ದೈವಘಟನೆಯಿ೦ದಾಗದುದೇ೦ || ೧೫೮ ||