ಆಶ್ವಾಸ ೧೩- ಬಲಾಚ್ಯುತ ಪುಣ್ಯ ಪ್ರಭಾವ ವರ್ಣನೆ
ರಾಮಚ೦ದ್ರನ ಸೇನೆಯ ಕೋಲಾಹಲವು ಕಿವಿಗೆ ಬೀಳಲು ರಾವಣನು ಮುನಿದು ಸನ್ನಾಹ ಭೇರಿಯನ್ನು ಹೋಯಿಸಿ ಮನುಷ್ಯಮಾತ್ರದವನು ತನ್ನ ಮೇಲೆ ಎತ್ತಿ ಬಂದನಲ್ಲವೇ ಎಂದು ಕಿಡಿಕಿಡಿಯಾದನು. ರಾವಣನ ಸಾಮಂತರೆಲ್ಲರೂ ತಂತಮ್ಮ ಸೇನೆಗಳೊಡನೆ ಬ೦ದು ಸೇರಲು ಅವನು ಮೂವತ್ತು ನಾಲ್ಕು ಸಾವಿರ ದಕ್ಷೌಹಿಣೀ ಬಲದೊಡನೆ ಯುದ್ಧಕ್ಕೆ ಸಿದ್ದನಾದನು. ರಾತ್ರಿ ಕಳೆದು ಬೆಳಗಾಗಲು ಇಂದಗಿ ಮಾರೀಚ ಜಿತಶತ್ರು ಮೇಘವಾಹನ ಕುಂಭಕರ್ಣ ಮೊದಲಾದ ಮಹಾ ರಥರೊಡನೆ ಕೂಡಿ ರಾವಣನು ರಣಭೂಮಿಗೆ ಬರುತ್ತಿರುವಲ್ಲಿ ಉತ್ಪಾತಗಳೂ ಅಪಶಕುನಗಳೂ ತೋರಿದರೂ ಅವನ್ನು ರಾವಣನು ಲಕ್ಷ್ಯಮಾಡದೆ ಬಂದು ಒಡ್ಡಿ ನಿಂತನು. ಆಗ ನಳ ನೀಲ ಆ೦ಗದ ಕುಮಾರ ಸುಷೇಣ ಜಾ೦ಬವ ಮೊದ ಲಾದ ವಾನರ ಪ್ರಮುಖರೂ ಪ್ರಭಾಮಂಡಲ ಹನುಮ ಮೊದಲಾದ ಖೇಚರ ನಾಯಕರೂ ವಿಭೀಷಣನೂ ಸುಗ್ರಿವನೂ ತಂತಮ್ಮ ಸೈನ್ಯಗಳೊಡನೆ ರಾಮ ಲಕ್ಷಣರ ಸುತ್ತಲೂ ತಕ್ಕ ರೀತಿಯಲ್ಲಿ ನಿಂತರು. ಆಗ ರಾಮನ ಸೈನ್ಯದಿಂದ ನಳ ನೀಲರೂ ರಾವಣನ ಸನದಿಂದ ಹಸ ಪ್ರಹಸರೂ ಇದಿರಾಗಿ ಕಾದಿ ನಳ ನು
ಹಸ್ತನನ್ನು ಕೊಲ್ಲಲು ಪ್ರಹಸ್ತನು ಕೋಪಾವೇಶದಿಂದ ನಳನ ಮೇಲೆ ಬಿದ್ದನು. ಅದನ್ನು ಕಂಡು ನೀಲನು ನಳನನ್ನು ಹಿಂದಕ್ಕೆ ಬಿಟ್ಟು ತಾನು ಮುಂದಕ್ಕೆ ನುಗ್ಗಿ ಪ್ರಹಸ್ತನನ್ನು ಕೊಂದನು. ಆ ಹೊತ್ತಿಗೆ ಸೂರನಸ್ತಮಿಸಲು ಉಭಯ ಬಲದ ವರೂ ಅಪಹಾರ ತೂಲ್ಯವನ್ನು ಹೋಯಿಸಿ ತಂತಮ್ಮ ಬೀಡಿಗೆ ಹೋಗಿ ಸಮರ ಪರಿಶ್ರಮವನ್ನಾರಿಸಿಕೊಳ್ಳುತ್ತಿದ್ದರು.
ಬೆಳಗಾದ ಕೂಡಲೆ ಉಭಯ ಸೈನಿಕರೂ ಯುದ್ಧ ಸನ್ನದ್ದರಾಗಿ ಬಂದು ಕಾದುತ್ತಿರುವಲ್ಲಿ ಮಾರೀಚನು ಸಂತಾಪನನ್ನೂ ಮಕರನು ಮಹೋದಧಿಯನ್ನೂ ಗಂಭೀರನು ಉದ್ದಾಮನನ್ನೂ ಸಿಂಹಕಟಿಯು ಪ್ರಥಿತನನ್ನೂ ಕೊಲ್ಲಲು ರಾವಣನ ಸೇನೆಯು ಜಯಘೋಷವನ್ನು ಮಾಡಿತು. ರಾಮನ ಸೇನೆಯು ಭಯಗೊಂಡಿತು. ಕೂಡಲೆ ರಾಮನ ಸೈನ್ಯದಲ್ಲಿಯ ಇತರ ಸಾಮಂತರು ಪ್ರಳಯಕಾಲದ ಭೈರವನ ಭೀಕರಾಕಾರವನ್ನು ತಾಳಿ ರಾವಣನ ಸಾಮಂತರನೇಕರನ್ನು ಕೊಂದರು. ಅದು ವರೆಗೆ ಹೊತ್ತು ಮುಳುಗಲು ಯುದ್ಧವನ್ನು ನಿಲ್ಲಿಸಿ ಅವರವರು ಅವರವರ ಬಿಡಾರಕ್ಕೆ ಹೋದರು. ಮರುದಿನ ಹೊತ್ತು ಮೂಡಿದೊಡನೆಯೇ ಯುದ್ಧವಾರಂಭವಾಗಿ ಉಭಯ ಪಾರ್ಶ್ವಗಳ ನಾಯಕರೂ ಅದ್ಭುತವಾಗಿ ಕಾದಿದರು. ಹೀಗೆ ಕೆಲವು ದಿನಗಳು ನಡೆದ ಮೇಲೆ ಹನುಮನು ಯುದ್ದಕ್ಕೆ ನಿಂತು ಅನೇಕ ಮಂದಿ ಶೂರರನ್ನು ಕೊಂದು ತನ್ನ ರಥವನ್ನು ರಾವಣನಿದ್ದೆಡೆಗೆ ಓಡಿಸಲು ರಾವಣನು ಬಹಳ ಸಿಟ್ಟುಗೊಂಡು ಅವನೊಡನೆ ಕಾದಲು ಸಿದ್ದನಾಗುತ್ತಿರುವಲ್ಲಿ, ನಯನ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೯
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಪ೦ಪರಾಮಾಯಣದ ಕಥೆ
53