ಪುಟ:ರಾಮಚಂದ್ರ ಚರಿತ ಪುರಾಣಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

54

ಪ೦ಪರಾಮಾಯಣದ ಕಥೆ

ಮಕ್ಕಳಾದ ಮಹೋದರ ವಜ್ರೋದರರು ಅಡ್ಡವಾಗಿ ಬಂದು, ಮಹೋದರನು ಅಂಗದನೊಡನೆಯ ವಜೋದರನು ಹನುಮನೊಡನೆಯೂ ಕಾದಿ ಸತ್ತರು. ಹನುಮನು ಕುಂಭಕರ್ಣನ ಮಕ್ಕಳಾದ ಮಾಲಿ ಜ೦ಬುವಾಲಿಯೆಂಬವರನ್ನು ಕೊಲ್ಲಲು ಕುಂಭಕರ್ಣನು ಹನುಮನ ಮೇಲೆ ಬಿದ್ದನು. ಇದನ್ನು ಕಂಡು ರಾಘವನ ಸಾಮಂತರು ಕೆಲವರು ಬಂದು ಹನುಮನನ್ನು ಹಿಂದಿಟ್ಟು ತಾವು ಕಾದಿದರು. ಆಗ ಕುಂಭಕರ್ಣನು ಬಹಳ ಸಿಟ್ಟಾಗಿ ಪ್ರಭಣ ವಿದ್ಯಾ ಶರದಿಂದ ಕಪಿಧ್ವಜರ ಸೈನ್ಯವು ಮೈಮರೆತು ನೆಲಕ್ಕೆ ಬೀಳುವಂತೆ ಮಾಡಲು ಸುಗ್ರೀವನು ನಿದ್ರಾ ಪ್ರಬೋಧಿನಿಯೆಂಬ ದಿವ್ಯ ಬಾಣದಿಂದ ಹನುಮು ಮೊದಲಾದವರ ನಿದ್ರೆಯನ್ನು ಕಳೆದನು. ಆಗ ರಾವಣನು ಕೋಪಾವಿಷ್ಟನಾಗಿ ನುಗ್ಗಿ ಬರಲು ಇ೦ದಗಿಯು ತಂದೆ ಯನ್ನು ತಡೆದು ಆತನಪ್ಪಣೆಯನ್ನು ಪಡೆದು ಯುದ್ದಕ್ಕೆ ನಿಂತು ಸುಗ್ರೀವನನ್ನು ಮೂದಲಿಸಿ ಕಾದುತ್ತಿರುವಲ್ಲಿ ಮೇಘವಾಹನನು ಜನಕಾತ್ಮಜನ ಮೇಲೆ ಬಿದ್ದನು. ಇಂದಗಿಯು ಸುಗ್ರೀವನನ್ನು ವಿರಥನನ್ನಾಗಿ ಮಾಡಿ ತನ್ನ ಗ್ರಾಸ್ತ್ರದಿಂದ ಬಿಗಿದನು ; ಮೇಘವಾಹನನು ಪ್ರಭಾಮಂಡಲನನ್ನು ಮೂರ್ಛಿತನನ್ನಾಗಿ ಮಾಡಿದನು. ಮತ್ತೊಂದು ಕಡೆಯಲ್ಲಿ ಕುಂಭಕರ್ಣನಿಗೂ ಹನುಮಂತನಿಗೂ ಭಯಂಕರವಾದ ಯುದ್ಧವು ನಡೆದು ಕುಂಭಕರ್ಣನು ಹನುಮಂತನನ್ನು ಹಿಡಿದು ನಾಗಪಾಶ ವಿದ್ಯೆ ಯಿಂದ ಕಟ್ಟಿ ಹಾಕಿದನು. ಆಗ ಅ೦ಗದನು ಬಂದು ಘೋರ ಯುದ್ಧವನ್ನು ಮಾಡಿ ಕುಂಭಕರ್ಣನನ್ನು ಗೆದ್ದು ಹನುಮಂತನನ್ನೆತ್ತಿಕೊಂಡು ಬಂದು ರಾಘವನಿಗೊಪ್ಪಿಸಿದನು. ವಿಭೀಷಣನು ಇಂದಗಿ ಮೇಘವಾಹನರೊಡನೆ ಯುದ್ಧಕ್ಕೆ ನಿಲ್ಲಲು ಅವರು ತಮ್ಮ ಚಿಕ್ಕಪ್ಪನೊಡನೆ ಕಾದುವುದು , ತಕ್ಕದ್ದಲ್ಲವೆ೦ದು ಹಿ೦ಜಗಿದರು. ಆಗ ವಿಭೀಷಣನು ಪನ್ನಗಶರ ವೇಷ್ಟಿತರಾಗಿದ್ದ ಸುಗ್ರೀವ ಪ್ರಭಾಮಂಡಲರನ್ನು ಕಂಡು ಏನು ಮಾಡಲೂ ತೋರದೆ ವ್ಯಥೆ ಪಡುತ್ತಿರುವಲ್ಲಿ ಸೂರನಸ್ತಮಿಸಲು ರಾವಣನು ಯುದ್ದವನ್ನು ಸಾಕುಮಾಡಿದನು. ಆಗ ಲಕ್ಷ್ಮಣನು ಪನ್ನಗಶರ ಮೂರ್ಛಾಗತರಾಗಿದ್ದ ಹನುಮಂತ ಸುಗ್ರೀವ ಪ್ರಭಾಮಂಡಲರನ್ನು ಪ್ರಜ್ಞೆಗೆ ತರುವ ಉಪಾಯವನ್ನು ಅಪ್ಪಣೆ ಕೊಡಿಸಬೇಕೆಂದು ರಾಮನನ್ನು ಕೇಳಲು, ಆತನು ಹಿಂದೆ ವರವಿತ್ರ ದಿವಿಜನನ್ನು ನೆನೆದಲ್ಲಿ ಅವರ ಉಪದ್ರವವು ಕ್ಷಣ ಮಾತ್ರದಲ್ಲಿ ಪರಿಹಾರವಾಗುವುದೆಂದು ತಿಳಿಸಿದನು. ಲಕ್ಷ್ಮಣನು ರಾಮನಪ್ಪಣೆ ಯಂತೆ ಮಾಡಲು ಗರುಡಾಧಿಪನಾದ ಮಹಾಲೋಚನನೆಂಬ ದೇವನಿಗೆ ಆಸನ ಕಂಪವಾಗಿ ರಣಪ್ರಪಂಚದಲ್ಲಿರುವ ರಘುವೀರನು ತನ್ನನ್ನು ನೆನೆದನೆಂದು ಅವಧಿಜ್ಞಾನದಿಂದ ಆತನು ತಿಳಿದು, ಸಿಂಹವಾಹಿನಿ ಗರುಡವಾಹಿನಿಯೆಂಬೆರಡು ವಿದ್ಯೆಗಳನ್ನೂ ದಿವ್ಯಾಸ್ತ್ರಗಳನ್ನೂ ಕೊಟ್ಟು ಬರುವಂತೆ ತನ್ನ ನುಚರನಾದ ಚಿಂತಾ ವೇಗನೆಂಬ ದೇವನಿಗೆ ಅಪ್ಪಣೆಮಾಡಲು ಆತನು ಬಂದು ಸಿಂಹವಾಹಿನಿಯನ್ನು ಶ್ರೀರಾಮನಿಗೂ ಗರುಡವಾಹಿನಿಯನ್ನು ಲಕ್ಷ್ಮೀಧರನಿಗೂ ಸದ್ಭಾವದಿಂದಿತ್ತನು.