ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪ೦ಚಮಾಶ್ವಾಸಂ

೧೧೫

ಚ || ನನೆಯ ಸರಳಂತೆ ನೆರೆದಿಂಗಳ ತಣ್ಣ ದಿರಂತೆ ಕಂತುರಾ |
ಜನ ಕರವಾಳಮೆಲ್ಗೊಳಪಿನಂತೆ ನವೋತ್ಸಲ ದಾನದಂತೆ ಪೂ ||
ವಿನ ಮರೆಯ೦ತೆ ತುಂಬಿಗಳ ಮಾಲೆ ತೆಲಿಂಬೊಳೆವಂತೆ ಲೋಲಲೋ |
ಚನ ರುಚಿ ಸುತ್ತಿ ಮುತ್ತಿದುದಶೇಷ ನೃಪಾಲ ಸಭಾಂತರಾಳಮಂ || ೭೦ ||

ಅ೦ತು ನೋಡಿ -

ಚ ॥ ಎಆಗದೆ ಪೂತ ಚಂಪಕವನಕ್ಕೆ ನಮೇರು ಮಹೀರುಹಕ್ಕೆ ಬಂ |
ದೆ೦ಗುವ ಚ೦ಚರೀಕದವೊಲಾಕೆಯ ಕೇಕರನನ್ಯ ರಾಜಕ ||
ಕೈ ಆಗದೆ ರಾಘವಂಗೆ ಆಗೆ ಕಂಚುಕಿ ಕಣ್ಣ ಆದಾ ಲತಾಂಗಿಗ |
ಜೈ ತೊಳಭಿವರ್ಣಿಸಲ್ಬಗೆದಳಾ ಧರಣೀಶ ಗುಣೆಕ ದೇಶಮಂ ||೭೧||

ಉ || ಪ್ರಾಕೃತನಲ್ಲನೀ ದಶರಥಾಗ್ರತನೂಭವನೇಕವಾಕ್ಯನಾ |
ಶಾಕರಿ ಕರ್ಣ ಚಾಮರಯಶಂ ಚರಮಾಂಗನನಂತವೀರ್ಯನಿ ||
ಕಾಕು ಕುಲಾಮೃತಾರ್ಣವ ಸುಧಾಕಿರಣಂ ರಣಮೇರು ಲೋಕ ಲು೦ |
ಟಾಕ ನಿದಾಘ ತಾಪ ಹರ ವರ್ಷಣ ಮೇಘನುದಾತ್ತರಾಘವಂ || ೭೨ ||

ಕಂ || ಕರಿಯಂ ಕಾಮಂ ಬಿಸ ಪಾ೦
ಡುರವರ್ಣ೦ ರಾಮನಿದುವೆ ಭೇದಮಭೇದಂ ||
ನಿರತಿಶಯಮಪ್ಪರೂಪಿಂ
ವರನಾಗಲ್ ನಿನಗೆ ತಕ್ಕನೀ ರಘುವೀರಂ ||೭೩||

ಎಂಬುದುವಾಸಮಯದೊಳಾ ವಿದ್ಯಾಧರ ಮಹತ್ತರಂ ವಿಧಿಪೂರ್ವಕಮಾ
ವಿಷಮ ಚಾಪವನರ್ಚಿಸುವುದುಂ-

ಮ || ರಸನಾ ಶಂಪಾ ಶತಂ ಸಂಚಳಿಕೆ ಪುದಿಯೆ ಪೂಾರಮಾಶಾಂತಮಂ ದ |
ಸೆ ವಜ್ವಾಲೆ ದೀರ್ಣಾನನ ಕುಹರ ಸಹಸ್ರಂಗಳಿಂ ಕಣ್ಣಳಿ೦ದೆ ||
ಸೆಗಂಗಾರಂಗಳೆಂ ಕೆದ ಫಣಸಹಸ್ರಂಗಳಂ ಬಿರ್ಚಿ ಕಣ್ಣ |
ರ್ವಿಸಿ ವಜ್ರಾವರ್ತ ಚಾಪಂ ಪಡೆದುದು ಭಯಮಂ ಕಾಳ ಕಾಳಾಹಿ ರೂಪo ||೭೪||

ಕಂ || ಸಿಡಿಲಂತೆ ಮೊಳಗಿ ನೆಲನಂ
ಪೊಡೆಯುತ್ತುಂ ಸತ್ತು ದೆಸೆಗಮವ್ವಳಿಸುತ್ತು೦ ||
ಪಡೆದುವಗುರ್ವ೦ ಜವನೆರ್ದೆ
ಗಿಡೆ ವಜ್ರಾವರ್ತ ಸಾಗರಾವರ್ತಂಗಳ್ ||೭೫||

1. ನಾ ಚ.