ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೬

ರಾಮಚ೦ದ್ರಚರಿತಪುರಾಣ೦

ಆಗಳವರ ಮಸಕನಂ ಕಂಡು ಭಯಂಗೊಂಡು ಖಚರ ಮಂಡಲಂ ಪ್ರಭಾ
ಮಂಡಲಂಗೆ ಕನ್ನೆ ಕೈಸಾರ್ದಳೆಂದು ಪುಸಾರ್ದು ನೋಡುತಿರ್ಪುದುಂ-

ಸ್ಟ್ತ್ರ || ಈ ವಜ್ರಾವರ್ತ ಕೋದಂಡಮನವಯವದಿಂದೇಅಸಲ್ ಸಾಲ್ವ ದೋರ್ದಂ |
ಡಾವಷ್ಟಂಭ ಪ್ರಚಂಡಂ ಜನಕಜೆಗೆ ವರಂ ಬರ್ಪುದೆಂಬೀ ವ್ಯವಸ್ಥಾ ||
ರಾವಂ ಕರ್ಣಾವತಂಸಂ ಪಸರಿಸೆ ನಿಜಪೀಠ೦ಗಳಿ೦ದೆದ್ದು ದಾಗಳ್ |
ತೀವುತಿರ್ಪನ್ನೆಗಂ ಭೂಷಣ ರುಚಿ ಕಕುಭಾನೀಕಮಂ ರಾಜಲೋಕಂ ||೭೬||

ಕಂ || ಮನಸಿಜನುಂ ಚಂದ್ರಮನುಂ
ದಿನಕರನುಮನೇಕರೇಕೆ ನೆರೆದರೆ ಪೇಟಿ೦ ||
ಬಿನೆಗಂ ನೃಪತನಯರ್ಬಿ
ಲ೪ನೇಸಲ್ ತಮ್ಮ ಬೆಳಗೆ ಬೆಳಗೆನೆ ಬ೦ದರ್ ||೭೭ ||

ಅಂತು ಬ೦ದಗುರ್ವುಸರ್ವೆ ಬಿಗುರ್ವಿಸಿದ ಬಿಳ೦ ಕಂಡು ಭಯಂಗೊ೦ಡ :-

ಮ || ಉರಿಯಂ ಕಾಯುವ ಕೆಂಡಮಂ ಕ ಆವ ಬಿಲ್ಲಂ ಕಂಡೆವಿಲ್ಲುಕೈವಂ |
ತರುಣೀರತ್ನಮನಿಟ್ಟು ಕೊಳ್ಳ ಸಮಕಟ್ಟಂದಟ್ಟಿದಂ ಖೇಚರಂ ||
ಮರುಳಾದಂ ಜನಕ ವ್ಯವಸ್ಥೆಯನೊಡಂಬಾರೊ ಕಲ್ಯಾಣ ತ |
ತರರೀ ಮಂಗಳ ಲಗ್ನದೊಳ್ ಕುಳಿಕದಂಷ್ಟಾ ಲಗ್ನಮಂ ಸೈರಿಸರ್ || ೭೮ ||

ಕಂ | ಅಹಿದರ್ಶನಮಲ್ಕು ಶುಭಾ
ವಹಂ ವಿವಾಹಕ್ಕೆ ವಿಷಮಮಿಾಮಾರ್ಗಮಹಿ ||
ಗ್ರಹಣಂ ಮುನ್ನಂ ಪಾಣಿ
ಗ್ರಹಣಂ ಬಲಿಯಂ ಗಳಿನವಘಟಿತ ಮೊಳವೇ || ೭೯ ||


ಮಧುಪರ್ಕಮಲ್ಕು ಮಂಗಳ
ವಿಧಾನದೊಳಗೊಂದುಮಲ್ಲು ಪಾವಂ ಪಿಡಿವೀ ||
ವಿಧಿ ಕನ್ಯಾ ಪರಿಣಯನ
ಪ್ರಧಾನ ಕಾರ೦ಗಡಿನ್ನವಘಟಿತಮೊಳವೇ || ೮೦ ||

ಕುಡುವೆಂ ಜಾನಕಿಯಂ ಪಿಡಿ
ದೊಡಜಗರಮನೆಂದು ಮುನ್ನ ಪೇಡೆಯಾಗಾ ||
ರುಡಮಂ ಕಲ್ಲು ವಿವಾಹ
ಕೊಡರಿಸುವಂ ಬಲಿದೆ ಪಿಡಿವನಾವನೊ ಪಾವಂ || ೮೧ ||

1. ವಿಷಮಾಹಿ, ಚ; # ಈ ಪದ್ಯವು ಕ. ಖ. ಚ. ಗಳಲ್ಲಿಲ್ಲ.