ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಾಶ್ವಾಸಂ
೧೫೭

ಕಂ || ಕ್ರಮವನತಿಕ್ರಮಿಸಿ ಪರಾ
ಕ್ರಮವಿಲ್ಲೆಂದಿಲಿಕೆಗೆಯ್ದು ಭರತ೦ಗಿತ್ತಂ ||
ದಮಿತಾರಿ ದಶರಥಂ ರಾ
ಜಮನೆ೦ಗುಂ ರಾಮನಿತ್ತನೆ೦ಗುಮೆ ಲೋಕಂ || ೧೪೨ ||

ಮ||ಸ|| ನಮಗಕ್ಕುಂ ನಿಸ್ಸಹಾಯಂ ಬಹುವಿಧದಿನಪಾಯಂ ಸುಖೋಪಾಯಮಕ್ಕುಂ|
ತಮಗೇಕಾಯತ್ತಮಕ್ಕುಂ ಪ್ರಜೆ ಪರಿಜನವೆ೦ದಬ್ಬೆ ಕೌಟಿಲ್ಯದಿಂ ರಾ ||
ಮನೀರೇ ಅಬ್ದ ಮಂ ಬೇಡಿದಳಜಿಯದೆ ನೀಮಿತ್ತೊಡಂ ಮಿಕ್ಕರಂ ಮ |
ಟೈಮಿರಲ್ ಪೇಚಿಗುವೇ ರಾಘವ ಕೊಡೆನೆಳಲೊಳ್ ಸಾಗರಾವರ್ತಚಾಪo||

ಎಂದು ಪೊಡೆವ ಸಿಡಿಲಂತೆ ಗರ್ಜಿಸಿ ಮಣಿಮಯಾಸನದಿನೆಣ್ಣು-

ಕಂ || ರೋಮಾಂಚದೊಡನೆ ಸಭೆಗೆ ಮ
ನೋಮುದಮಪ್ಪಂತು ನುಡಿಯೆ ಲಕ್ಷಣದೇವಂ ||
ರಾಮಂ ಪರಾರ್ಥ ಚರಿತ
ಪ್ರೇಮಂ ಕಣ್ಣರ್ವುಜರ್ವಿ ನೋಡಿದನಾಗಳ್|| ೧೪೪ ||
ಸಿರಿಯಣ್ಣನ ಜರ್ವಿಂಗೋ
ಸರಿಸಿದುದಲ್ಲದೊಡೆ ಶಾರ್ಜಪಾಣಿಯ ಮುನಿಸು೦ ||
ಹರನುರಿಗಣ್ಣುಂ ಲೋಕಮ
ನರೆಗಳಿಗೆಗೆ ಬೂದಿಮಾದೊಂದಚ್ಚರಿಯೇಮ|| ೧೪೫ ||


ಪರಿಹರಿಸಿದನೊದಗಿದ ಕೊ
ಪ ರಸಾವೇಶಮನುಪೇಂದ್ರನಣ್ಣನ ಚಿತ್ತಂ ||
ಕೊರಗಿದಪುದೆಂದುದಾತ್ತಂ
ಪಿರಿಯಂಗಿಚ್ಚಾ ವಿಘಾತಮಂ ಮಾಡುವನೇ|| ೧೪೬ ||

ದಾರುಣ ಭಾವಮನುಪಸ೦
ಹಾರಿಸಿ ಕಣ್ಣದು ಮಟ್ಟಮಣ್ಣನ ಕೆಲದೊಳ್ ||
ವಾರಿಜನಾಭಂ ಗರುಡೋ
ದ್ವಾರ ಹರಿಣಿಯ ಕೆಲದ ಫಣಿಯವೊಲಿರ್ದ೦|| ೧೪೭ ||


ಅನಂತರಂ ದಶರಥಂಗೆ ರಾಮನಿಂತೆಂದಂ-


1. ದಿನದಿ. ಕ. ಖ. ಗ. ಘ.