ಪುಟ:ಜೀರ್ಣವಿಜಯನಗರಾದರ್ಶನಂ .djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದ ರ್ಶo ೫ರಿ ಟ ವ ಕ ಇದರ ಒಳ ಭಾಗದಲ್ಲೆಲ್ಲಾ ಇಬ್ಬರುಮನುಷ್ಯರು 'ಧಾರಾಳವಾಗಿ ನಡೆದು ಹೋಗತಕ್ಕಷ್ಟು ಅಗಲವಾದ ಮಾಳಿಗೆಯಂತಹ ಸಂದು ನೋಟ್ಟಾಬಟ್ಟೆ ಯಾಗಿ ಹೋಗುತ್ತಿರುವುದು, ಇದನ್ನು ವಿತಕ್ಕೆ ಹೀಗೆ ನಿರ್ಮಿಸಿದರೆ ಗೊತ್ತಾಗುವುದಿಲ್ಲ. - ಇದರ ಸವಿಾಪದಲ್ಲಿಯೇ ಗೋಡೆ ಇಲ್ಲದ ಕಲ್ಲಿನ ತಳಹದಿಯೊಂದು ಕಾಣಬರುವುದು, ಇದು ನೆಲಮಟ್ಟಕ್ಕಿಂತ ಅತ್ಯುನ್ನತವಾಗಿ ನಾಲ್ಕು ಕಡೆಗೂ ಚಕವಾಗಿದೆ ಇದೇ ಮಾದರಿಯ ತಳಹದಿಗಳು ಅದರ ಸುತ್ತಲು ಅನೇಕ ವಾಗಿರುವುವು. ಇದರ ಮುಂದುಗಡೆ ಪೂರ್ವ ಭಾಗದಲ್ಲಿರುವ ತಳಹದಿಯು ಸ್ಥಳಸಹಿತವಾಗಿದೆ, ಮತ್ತೆ ಕೆಲವು ಇಳ ಪದಿಗಳು ಮೇಲಕ್ಕೆ ಕಾಣಬಾರದೆ ನೆಲದಲ್ಲಿಯೇ ಹೂತುಹೋಗಿವೆ, ಪೂರ್ವ ಕಾಲದಲ್ಲಿ ಇವು ಕಡುಗಣನಾತೀ ತಗಳಾಗಿ, ದೊಡ್ಡಕೇರಿಯಾಗಿ ಮನೆಗಳಿಂದ ತುಂಬಿ ಬಹುರಮ್ಯಗಳಾಗಿರ ಬಹುದೆಂದು ತೋರುವುದು. - ಇಂದಮುಂದಕ್ಕೆ ಸ್ವಲ್ಪ ದೂರ ಹೋದರೆ ಅಲ್ಲಿ ಪಾತಾಳೇಶ್ವರನ ದೇವಾಲಯವು ಕಾಣಬರುವುದು, ಇದು ಇರುವುದೆಂಬಸಂಗತಿ ಈಗ್ಗೆ ಎರಡುವರುಷಗಳ ಕೆಳಗೆ ಕಂಡುಹಿಡಿಯಲ್ಪಟ್ಟಿತು. ತತ್ತೂರ ಇದು ಹೂತು ಹೋಗಿ ಪ್ರಜೆಗಳಿಗೆ ಅಗೋಚರವಾಗಿ ವ್ಯವಸಾಯಮಾಡಲ್ಪಟ್ಟ ಸ್ಥಾನವಾಗಿ ಇತ್ತು ಈ ಆಲಯವು ನೆಲಮಟ್ಟಕ್ಕೆ ೫-೬ ಗಜಗಳ ಆಳ ದಲ್ಲಿದೆ ಇದರಲ್ಲಿ ಅಲ್ಲಲ್ಲಿ ನೀರೂರುತ್ತಿರುವುವರಿಂದ ಸುತ್ತಲೂ ಒಂದು ಕಾಲುವೆಯನ್ನು ಅಗೆ ಯಿಸಿ ನೀರನ್ನು ಹೊರಕ್ಕೆ ಹೋಗುವಂತೆ ಮಾಡಿರುವರು. ಈ ದೇವಾಲ ಯವು ಪೂರ್ವಾಭಿಮುಖವಾಗಿ ವಿಗ್ರಹ ಹೀನವಾಗಿರುವುದು, ಇದರಲ್ಲಿ ಒಂದು ನಂದಿವಿಗ್ರಹ ವಿರುವುದಾದರೂ ಇದನ್ನು ಯಾರೋ ಭಿನ್ನಮಾಡಿರು ವರು, ಇಲ್ಲಿಂದ ಸ್ವಲ್ಪ ದೂರ ಪಶ್ಚಿಮದಿಕ್ಕಿಗೆ ಹೊರಟು ಎದುರಿಗೆ ಬರು ವರಸ್ತೆಯೊಂದಿಗೆ ಉತ್ತರದಿಕ್ಕಿಗೆ ಹೊರಡಬಹುದು.