ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಕುರುಕ್ಷೇತ್ರ ! ತತ್ರದಿಂದಾದದ್ದಕ್ಕೆ ನಾವು ಹೆಸರಿಡಬಾರದೆಂಬದು! ಈ ಅನರ್ಥಕಾರಕ ಯುದ್ದದಿಂದ ಪೇಶೆಯವರ ಸಾಮರ್ಥ್ಯವು ಕುಗ್ಗಿದರೂ, ಅವರ ರಾಜ್ಯವು ಮುಂದೆ ೫೭ ವರ್ಷ ಬಾಳಿ ಶವದೆಂಬದು ಎರಡನೆಯ ಕಾರಣವು. ಈ ಐವತ್ತೇಳು ವರ್ಷಗಳಲ್ಲಿ, ದೊಡ್ಡಮಾಧವ ರಾವ, ನಾನಾಫಡಣವೀಸ, ಮಹದಾಜಿಸಿಂಗೆ, ಯಶವಂತರಾವಹೋಳಕರ, ರಾಮಶಾಸ್ತ್ರಿ ಗಳು ಮೊದಲಾದ ಪ್ರಸಿದ್ದ ಪುರುಷರು ಆಗಿಹೋಗಿರುವರು, ಈಗಿನ ಪೇಳ್ವೆಯರ ಸಾವು ರ್ಥ್ಯವು, ಹೈದರ, 'ಟೀಪು, ನಿಜಾಮ ಮೊದಲಾದವರನ್ನು ನಡುಗಿಸಿತು. ನಮ್ಮ ಇಂಗ್ಲಿಷಸರಕಾರದ ರಾಜ್ಯ ವಿಸ್ತಾರದ ಕಾರ್ಯಕ್ಕೆ ಪ್ರಾಮುಖ್ಯವಾಗಿ ಈ ಪೇಶ್ವ ಸರಕಾರದ ಶಾಖೋಪಶಾಖೆಗಳಿಂದಲೇ ಹೆಚ್ಚು ತೊಂದರೆಯಾಯಿತೆಂದು ಇತಿಹಾಸವು ಹೇಳುತಿ ರು ವದು. ಇರಲಿ, ಈಕ ದ ಪೇಳ್ವೆಯವರ ಸದ್ಗುಣವನ್ನು ಕುರಿತು ಒಂದು ಪ್ರಸಂಗವನ್ನು ಇಲ್ಲಿ ಸ್ವಲ್ಪದರಲ್ಲಿ ಉಲ್ಲೇಖಿಸುವೆವು; ಯಾಕಂದರೆ, ಸದ್ಯುಣದ ಸತ್ನಿಯೆಯೇ ನಿಜ ವಾದ ಸಮಾಧಾನಕ್ಕೆ ಕಾರಣವಾಗುವದು, ನಿಜಾಮನಿಂದೆ ಪೇಶೆ ಸರಕಾರಕ್ಕೆ ಬರುವ ವಾರ್ಷಿಕಖಂಡಣೆಯು ಹಾಗೇ ಉಳಿ ದಿತ್ತು. ಅದರ ಮಡಿ ಕಳಿಸಲಿಕ್ಕೆ ನಿಜಾಮಸರಕಾರಕ್ಕೆ ತಿಳಿಸಬೇಕೆಂದು ನಾನಾ ಫಡಣವೀಸನು ಹೈದರಾಬಾದದಲ್ಲಿದ್ದ ತನ್ನ ವಕೀಲನಿಗೆ ಬರೆದನು. ಅದರಂತೆ ವಕೀ ಬನು ನಿಜಾಮಸರಕಾರಕ್ಕೆ ತಿಳಿಸಲು, ನಿಜಾಮನ ವಜೀರನದ ವಶ್ರುಖಾನನು ನೆರೆದ ದರ್ಬಾರದಲ್ಲಿ ಪೇಶೆಯವರ ವಕೀಲನಿಗ-ನಿಮ್ಮ ನಾನಾಗೇ ಇಲ್ಲಿಯವಗೆ ಬಂದು ೮ * ಮ ಡಿ ಕೊಡು ಮ ತಿಳಿಸಿರಿ. ” ಎಂದು ಉದ್ದಟತನದಿಂದ ನುಡಿದು , ನಾನ ಘರ್ಷಣವೀಸನ, ಅರ್ಥಾತ್ ದೇಶವಸರಕಾರದ ಅಪಮಾನಮಾಡಿದನು. ಈ ಸಂಗತಿಯನ್ನು ವಕಿಲನು ತನ್ನ ಯಜಮಾನರಾದ ಪೇಯವರಿಗೆ ತಿಳಿಸಲು, ನಾನಾಫಡಣವೀಸನುಮತ್ತು ಖಾನನನ್ನು ಒತ್ತಿ ಇಟ್ಟುಕೊಳ್ಳದಿದ್ದರೆ ನಾನು ನಾನಾನೇ ಅಲ್ಲವೆಂದು ಪ್ರತಿ ಜೈ ಮಾಡಿ, ನಿಜಾಮನೊಡನೆ ದಂಡಯಾತ್ರೆಗೆ ಹೊರಡಲು ಸಿದ್ದವಾಗುವದಕ್ಕಾಗಿ ಜೈನ್ಯಾಧಿಕಾರಿಗಳನ್ನು ಗುಪ್ತರೀತಿಯಿಂದ ಆಜ್ಞಾಪಿಸಿದನು. ಹಿಂದೆ ಹೋಳಕರ, ಭೋಸಲೆ, ಗಾಯಕವಾಡ ಮೊದಲಾದ ಮಹಾರಾಷ್ಟ್ರ ಸರದಾರರಿಗೆ ಇಂಥ-ಇಂಥ ಮುಕ್ಕಾಮಿಗೆ ಇಂಥ-ಇಂಥವರು ಸೈನ್ಯದೊಡನೆ ಇಂಥ-ಇಂಥ ದಿವಸ ಬಂದು ಕೂಡಬೇ. ಕೆಂದು ಗುಪ್ತ ಆ ಜ್ಞ ಪತ್ರಗಳು ಹೋದವು. ಪುಣೆಯಲ್ಲಿ ವಿಶೇಷಗದ್ದಲವೇನು ಇದ್ದಿದೆ. ಇದನ್ನು ನೆಡಿ ಪುಣೆಯಲ್ಲಿದ್ದ ನಿಜಾಮನ ವಕೀಲನು ತನ್ನ ಒಡೆಯನಾದ ನಿಜಾಮನಿಗೆ-ಇಲ್ಲಿ ಯುದ್ದದ ವಿಶೇಷಸೌರಣೆಯೇನು ನಡೆದಿರುವದಿಲ್ಲ. ಬಾಹ್ಮಣರು ದಿನಕ್ಕೆ ಮೂರುಸಾರೆ ಸ್ನಾನಮಾಡುವರು, ಎರಡುಸಾರೆ ದೋತರ ಒಗೆಯುವರು; ಆದ್ದ ದಿಂದ ತಾವು ನಿಶ್ಚಿಂತರಾಗಿರಬೇಕು.” ಎಂದು ಪತ್ರ ಬರೆದನು. ಇದರಿಂದ ನಿಜಾಮನು ಉಬ್ಬಿದನು, ಬುದ್ಧಿಪೂರ್ವಕವಾಗಿ ಆತನು ಶ್ರೀಮಂತರ ಅಪಮಾನವನ್ನು ಮಾಡಹ ತಿದನು. ಒಮ್ಮೆ ಆತನು ಪೇಯವರ ವಕೀಲನಾದ ಕಾಳೆ ಎಂಬವನನ್ನು ಕುರಿತುಆವಕೀಲಸಾಹೇಬ, ನಿಮ್ಮ ಬಾಲಪೇಯವರಾದ ಸವಾಯಿ ಮಾಧವರಾಯರು ನಮ್ಮ ಈ