(೨೫ ಶೋಕಸಾಗರ! ಬೇಗನೆ ಈ ಲೋಕದಿಂದ ಹೊರಡಿಸಿರಿಸಾಹೇಬ! ಹೀಗೆ ಸ್ಪಷ್ಟವಾಗಿ ಮಾತಾಡಿದ್ದನ್ನು ಕೇಳಿ ಅಬದಾಲಿಯು ಸಂತಾಪಗೊಂಡನು. ದೊಡ್ಡ ಮನಸ್ಸಿನ ವೀರರು ಶತ್ರುಗಳ ನಿಜವಾದ ಗುಣಗಳನ್ನು ಅಭಿನಂದಿಸುವರು; ಆದರೆ ಅಷ್ಟು ದೊಡ್ಡ ಸ್ತನವು ಶಹಾನಿಗೆ ಕಾಲದಲ್ಲಿ ಬರಲಿಲ್ಲ. ಆ ಸ್ವಾಮಿನಿಷ್ಠ ಸರದಾರನ ವಿಷಯವಾಗಿ ಆತನಲ್ಲಿ ಎಳ್ಳಷ್ಟುದಯವು ಉತ್ಪನ್ನವಾಗಲಿಲ್ಲ. ಆತನು ಕೊಡಲೆ ಗಾರ ದಿಯ ಶಿರಚ್ಛೇದಮಾಡಿಸಿದನು! ಖಡ್ಗ ಪಟುವಾದ ಜನಕೋಜಿಸಿದೆಯ ಗತಿಯ ಹೀಗೆಯೇ ಆಯಿತು. ಈ ಇಪ್ಪತ್ತು ವರ್ಷದ ತರುಣಧೀರನನ್ನು ದಂಡದ ಹಣತುಂಬಿ ಉಳಿಸಿ ಕೊಳ್ಳಬೇಕೆಂದು ಕಾಶೀರಾಜಪಂಡಿತನೂ, ಸುಜಾಲದ್ದಲನೂ ಬೇಕಾದಷ್ಟು ಯತ್ನಿ ಸಿದರು ; ಆದರೆ ಅದು ವ್ಯರ್ಥವಾಗಿ ದುರಾಣಿಗಳು ಆ ವೀರಾಗ್ರಣಿಸಿಂದೆಯ ಶಿರ ಚೈದವನ್ನೂ ಮಾಡಿದರು! ೧೯ ನೆಯ ಪ್ರಕರಣ.-ಶೋಕಸಾಗರ ! ಭಾವುಸಾಹೇಬನು ಪಾನಿಪತದ ರಣಭೂಮಿಯಲ್ಲಿ ಸಿಕ್ಕುಬಿದ್ದ ಅನಿಷ್ಟದಾಯಕ ವಾದ ಸುದ್ದಿಗಳು ಒಂದರಂಂದೊಂದು ಪುಣೆಗೆ ಬರಹತ್ತಲು, ನಾನಾಸಾಹೇಬಪೇಶವೆಯ ಸುಮಾರು ಐವತ್ತು ಸಾವಿರ ಸೈನ್ಯದೊಡನೆ ಸಹಾಯಾರ್ಥವಾಗಿ ಉತ್ತರಕ್ಕೆ ಸಾಗಿದ್ದನು. ಆತನ ಸೆಸದ ಬೀಡು ನರ್ಮದಾ ನದಿಯ ದಂಡೆಯಮೇಲೆ ಬಿಟತು. ಆಗ ಸೌಷ ಮಾಸವಿದ್ದು, ಮಕರಸಂರ್ಕಮಣವು ಸಮೀಪಿಸಿದ್ದರಿಂದ, ನರ್ಮದಾತೀರದಲ್ಲಿಯೇ ಸಂಕ್ರ ಮಣ ಮಾಡಿಕೊಂಡು ಮುಂದಕ್ಕೆ ಹೋಗಬೇಕೆಂದು ನಾನಾಸಾಹೇಬನು ನಿಶ್ಚಯಿಸಿದನು. ಭೋಗಿ, ಸಂಕ್ರಮಣ, ಕರಿ ಎಂಬ ಮೂರು ದಿನಗಳು ಸಂಕ್ರಮಣದ ಹಬ್ಬದ ದಿನಗಳಾ ಗಿರುವವಷ್ಟೆ? ಸಂಪ್ರದಾಯದಂತೆ ಭೋಗಿಯದಿವಸ ಪೇಶ್ವಿಯವರ ಮನೆಯ ಸ್ತ್ರೀ-ಪುರು ಷರು ಮಂಗಲಸ್ನಾನ ಮಾಡಿದರು. ಮಧ್ಯಾಹ್ನದಲ್ಲಿ ತುಪ್ಪ, ಹುಗ್ಗಿ, ಪಾಯಸ ಇವು ಗಳ ಭೋಜನವಾಯಿತು, ಮರುದಿನ, ಅಂದರೆ ಮಕರಸಂಕ್ರಮಣದ ದಿವಸ ಎಲ್ಲರೂ ನರ್ಮದೆಯಲ್ಲಿ ಸ್ನಾನಮಾಡಿ ವಿಧ್ಯುಕ್ಯ ದಾನ-ಧರ್ಮಗಳನ್ನು ಮಾಡಿದರು. ಮಧ್ಯಾ ಹದಲ್ಲಿ ದೊಡ್ಡ ಭೂಜನಸಮಾರಂಭವಾಯಿತು. ಆಗ ಆಶ್ರಿತರನ್ನೂ, ದರಕದಾರರನ್ನೂ ಮಾನಕರಿಗಳನ್ನೂ, ಬೇರೆ ಸರದಾರರನೂ ಶ್ರೀಮಂತರು ಊಟಕ್ಕೆ ಕರೆದಿದ್ದರು. ಭೋಜನೋತರದಲ್ಲಿ ಒಂಬತ್ತು ತಾಸಿನಕಡೆಗೆ ಎಳ್ಳು-ಬೆಲ್ಲದ ದರ್ಬಾರವಾಯಿತು. ಸನಾಸಾಹೇಬಸುಭಾಜನೊಜಿಭೋಸಲೆ, ಬಾಬೂಜಿನಾಯಿಕ ಬಾರಾಮತೀಕರ, ಗೋಪಾಳರಾವ ಗೋವಿಂದ ಪಟವರ್ಧನ, ಸದಾಶಿವರಾಮಚಂದ್ರ, ವಿಠಲನಿಶಾಮ, ಯಮಾಜೆಶಿವದೇವ, ಹರಿಅಪ್ಪಾ ಮೊದಲಾದ ಸರದಾರರು ದರ್ಬಾರಕ್ಕೆ ಬಂದಿದ್ದರು. ಪದ್ಧತಿಯಂತೆ ನಾಚು-ರಂಗು, ತಾಂಬೂಲ- ಪರಿಮಳ ಮೊದಲಾದವುಗಳ ಆನಂದೋತ್ರ
ಪುಟ:ಕುರುಕ್ಷೇತ್ರ ಗ್ರಂಥ.djvu/೧೩೦
ಗೋಚರ