ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

16

ಪಂಪರಾಮಾಯಣದ ಕಥೆ

ನಿಶ್ಚಯಿಸುತ್ತಿರುವಲ್ಲಿ ಅವರು ಜಿನೇಂದ್ರಮಂದಿರವನ್ನು ಹೊಕ್ಕು ಪ್ರದಕ್ಷಿಣ ಪೂರ್ವಕವಾಗಿ ನಮಸ್ಕಾರವನ್ನು ಮಾಡಿ ಜಿನೇಶ್ವರನ ದರ್ಶನಸ್ತುತಿ ಮಾಡಿದರು. ಅಷ್ಟರಲ್ಲಿ ವಜ್ರ ಕರ್ಣನು ಕಳುಹಿಸಿದ ಚಾರರು ಆಹಾರವಸ್ತುಗಳೊಡನೆ ಬಂದು, ಶತ್ರು ಸೈನ್ಯವು ಪಟ್ಟಣವನ್ನು ಮುತ್ತಿರುವುದರಿಂದ ತಾನು ಇಲ್ಲಿಗೆ ಬರುವುದಕ್ಕೂ ತಮ್ಮನ್ನು ಕರೆಯಿಸಿಕೊಳ್ಳುವುದಕ್ಕೂ ತಿಳಿಯದವನಾಗಿ ದೊರೆಯು ನಮ್ಮನ್ನು ಕಳುಹಿಸಿರುವ ನೆಂದು ತಿಳಿಸಿ, ಅಲ್ಪ ವಾದ್ಯಗಳನ್ನು ಕೊಟ್ಟು ಸತ್ಕರಿಸಲು, ರಾಮಲಕ್ಷ್ಮಣರು ಊಟಮಾಡಿ ಗಂಧ ತಾಂಬೂಲಗಳನ್ನು ಸ್ವೀಕರಿಸಿ, ಬಂದಿದ್ದವರನ್ನು ಹಿಂದಕ್ಕೆ ಕಳುಹಿಸಿದರು.
ದಾಶರಥಿಯು ಲಕ್ಷ್ಮಣನನ್ನು ನೋಡಿ, ಅನಿಮಿತ್ತವಾಗಿ ವಜ್ರ ಕರ್ಣನು ತಮಗೆ ಮರ್ಯಾದೆಮಾಡಿದುದರಿಂದ ಅವನು ಮಾನ್ಯನೆಂದೂ, ಅವನ ಹಗೆ ಯಾದ ಸಿ೦ಹೋದರನನ್ನು ದಂಡಿಸಬೇಕೆಂದೂ ತಿಳಿಸಲು, ಕೂಡಲೆ ಲಕ್ಷ್ಮಣನು ಹೊರಟು ಸಿ೦ಹೋದರನ ಅರಮನೆಯ ಬಾಗಿಲಿಗೆ ಬಂದು “ ನೀನು ಜಿನೇಶ್ವರ ನಲ್ಲಿರುವ ಮಾತೃಶ್ಯವನ್ನು ತೊರೆದು ಜಿನಭಕ್ತನಾದ ವಜ್ರ ಕರ್ಣನನ್ನು ಮನ್ನಿಸ ತಕ್ಕದ್ದು ” ಎಂಬ ಈ ನಾಡಿಗೊಡೆಯನಾದ ಭರತನ ಆಜ್ಞೆಯನ್ನು ದೊರೆಗೆ ತಿಳಿ ಸೆಂದು ಬಾಗಿಲ ಕಾಯುವವನಿಗೆ ಹೇಳಿದನು. ಅವನು ಹಾಗೆ ತಿಳಿಸಲು, ಸಿಂಹೋದರನು ಸಿಂಹದಂತೆ ಮುನಿದು ಭರತನನ್ನು ಹಿಯಾಳಿಸಿ ಕತ್ತಿಯನ್ನು ಹಿರಿದನು. ಅದಕ್ಕೆ ಲಕ್ಷ್ಮಣನು ಕೋಪಗೊಂಡು ದೊರೆಯ ಪರಿವಾರವನ್ನು ನಾಶಮಾಡಲು, ಸಿಂಹೋದರನು ಸಿಂಹದಂತೆ ಲಕ್ಷ್ಮಣನ ಮೇಲಕ್ಕೆ ಹಾರಿದನು. ಆಗ ಲಕ್ಷ್ಮಣನು ಬಾಲಕನನ್ನು ಹಿಡಿಯುವಂತೆ ಅವನನ್ನು ಹಿಡಿದು ಎಳೆದುಕೊಂಡು ಹೋಗಲು ಮಾರ್ಬಲವು ಅವನ ಮೇಲೆ ಬಿದ್ದಿತು. ಅದನ್ನೆಲ್ಲ ನಾಶಮಾಡಿ ಸಿ೦ಹೋದರನನ್ನು ಸೆರೆಹಿಡಿದುಕೊಂಡು ಆತನು ರಾಮನ ಬಳಿಗೆ ಬಂದನು. ಲಕ್ಷ್ಮಣನು ಬರಿಗೈಯಲ್ಲಿ ಮಾಡಿದ ಸಾಹಸವನ್ನು ವಜಕರ್ಣನೂ ಪುರಜನರೂ ನೋಡಿ ಆಶ್ಚರ್ಯ ಪಟ್ಟರು. ಸಿ೦ಹೋದರನು ಇವರು ಬಲಾಚ್ಯುತರೆಂದರಿತು ರಾಮಲಕ್ಷ್ಮಣರಿಗೆ ಭಕ್ತಿಯಿಂದೆರಗಲು, ರಾಮನು ಅವನ ಭಯವನ್ನು ಕಳೆದು, ವಜಕರ್ಣನಲ್ಲಿ ಪುನಃ ಸ್ನೇಹ ವನ್ನು ಮಾಡಿ ಬಾಳುವಂತೆ ಅವನಿಗೆ ಹೇಳಿದನು. ಅದಕ್ಕೆ ಅವನು ಈ ಪ್ರಪಂಚದ ಸೌಖ್ಯವನ್ನೊಲ್ಲೆನೆಂದೂ ತಪಕ್ಕೆ ನಿಲ್ಲುವೆನೆಂದೂ ತಿಳಿಸಿದನು.
ಇತ್ತ ಕಡೆ, ವಜ್ರ ಕರ್ಣನು ಮಿತಪರಿವಾರದೊಡನೆ ಬಸದಿಯನ್ನು ಹೊಕ್ಕು ಬಲಗೊಂಡು ದರ್ಶನಸ್ತುತಿಮಾಡಿ ರಾಮಲಕ್ಷ್ಮಣರಿಗೆರಗಿ ಉಚಿತ ಸ್ಥಾನದಲ್ಲಿ ಕುಳಿತು ಕೊಂಡನು. ರಾಮದೇವನು ವಜಕರ್ಣನ ನಿಜವ್ರತ ಪರಿಪಾಲನೆಗೆ ಮೆಚ್ಚಿ ತನಗೆ ಬೇಕಾದುದನ್ನು ಬೇಡಿಕೊಳ್ಳೆಂದು ಹೇಳಲು, ಸಿ೦ಹೋದರನಿಗೆ ಕರುಣೆಯನ್ನು ತೋರಬೇಕೆಂದು ಅವನು ಕೇಳಿಕೊಂಡನು. ಇದನ್ನು ನೋಡಿ ರಾಮನು ಅವನ