ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಶ್ರೀ ಮದಾನಂದೆ ರಾಮಯಣ ದರು, ಅಭಿಷೇಕ ಸಾಮಗ್ರಿಗಳು ಸಿದ್ಧವಾದವು ವಸಿಷ್ಠರೂ ಉಳಿದ ಮುತ್ತಿಗೆ ರೂ ಪಟ್ಟಭಿಷೇಕ ಮುಹಂರ್ತವನ್ನು ನಿರೀಕ್ಷಿಸುತ್ತಿದ್ದರು. ಅಷ್ಟರಲ್ಲಿ ಮಹಾವಿಷ್ಯ ವಿನ ಅಪ್ಪಣೆಯಂತೆ ಅಲ್ಲಿ ಅವತರಿಸಿದ್ದ ಮಂಥರೆಯ ನನ್ನ ಕರ್ತವ್ಯದ ಸಮಯವು ಒದಗಿತೆಂದು ಕೈಕೇಯಿಗೆ ದುರ್ಬೋಧನೆಗಳನ್ನು ತುಂಬಿದಳು . ಆದರೂ ಕೈಗೆ? ಯು-ಮಂಥರೆಯೇ, ನನಗೆ ಭರತನಿಗಿಂತಲ ರಾಮನಲ್ಲಿಯೇ ಬಹಳ ವಿನ್ಯಾಸ ಬರುವದು. ಈ ಮಂಗಳ ಕಾರ್ಯಗಳಲ್ಲಿ ನಾನೇಕೆ ತೊಂದರೆ ಕೊಡಲಿ' ಎಂದಳು. ಆ ಮಾತನ್ನು ಕೇಳಿ, ಮಂಥರೆಯು, “ಸಖಿಯೇ, ನಿನಗೇನು ತಿಳಿಯುವದು? ಇನ್ನೂ ಹುಡಿಗಿ, ನಿನ್ನಂತೆಯೇ ಲೋಕವೆಲ್ಲ ಇರುವದೆಂದು ತಿಳಿದಿರುವೆಮುಂದೆ ನೀನು ಕಡಿಯ ಕಸಕ್ಕಿಂತಲೂ ಕಡೆಯಾಗುವ ರಾಮನಿಗೆ ಪಟಾಭಿಷೇಕವಾದರೆ ಕೌಸಲ್ಯ ರಾಜರತಾಯಿ, ಸೀತಾದೇವಿಯೇ ಪಟ್ಟದ ರಾಣಿ, ಅವರು ನಿನ್ನನ್ನು ಲಕ್ಷ ಮಾಡುವರೇ ? ಎ೦ದಿಗೂ ಇಲ್ಲ. ದಶರಧನು ನನ್ನಲ್ಲಿ ಪರಮ ವಿಶ್ವಾಸವುಳ್ಳವನೆಂದು ತಿಳಿದಿರುವ ಹಾಗೆ ಎಂದಿಗೂ ತಿಳಿಯಬೇಡ, ಈಗಲೇ ನೋಡು, ನಿನ್ನಲ್ಲಿ ದಶರಥನಿಗಿರುವ ಪ್ರೇಮವು ಮಿಕ್ಕ ಇಬ್ಬರು ಪತ್ನಿಯರಲ್ಲಿಲ್ಲ. ನೀನು ಎಲ್ಲರಿಗಿಂತಲೂ ಸೌಂದರ್ಯವತಿ, ನವಯೌವನಸಂಪನ್ನಳೂ ಆದ್ದರಿo ದಲೇ ಅಲ್ಲವೇ ದಶರಥನು ಇಷ್ಟು ವಿಶ್ವಾಸಮಾಡುವದು? ಮುಂದೆ ಬರಬರುತ್ತ ನಿನಗೆ ವಯಸ್ಸು ಹಡುವದೇ ಹೊರತು ಕಡಿಮೆಯಾಗದು. ಅಗ ಎಂದಿಗೂ ದಶರಥನು ನಿನ್ನಲ್ಲಿ ಇಷ್ಟು ವಿಶ್ವಾಸವನ್ನಿಡಲಾರನು. ಅದಕ್ಕೆ ಕೌಸಲ್ಮಾ-ಮಿತ್ರ ಯರೇ ಸಾಕ್ಷಿಯಾಗಿರುವರು. ಎಲೈ ಮುಗೈದೆ, ವಿರಮಾಡು, ಮೋಸ ಹೋಗಬೇಡ, ಅದೇ ನೀನು ರಾಜಮಾತೆಯಾದೆಯೆಂದರೆ, ಎಲ್ಲರೂ ನಿನ್ನ ದಾಸಾ ನುದಾಸರಾಗುವರು. ನೀನು ಈಗ ನನ್ನ ಮಾತಗಳನ್ನು ಕೇಳದಿದ್ದರೆ, ಖಂಡಿತ ನಿನ್ನ ಪರಿಣಾಮವು ಬಹಳ ಶೋಚನಿಯವಾಗುವದು. ಈ ನನ್ನ ಮಾತನ್ನು ಸೆರಗಿನಲ್ಲಿ ಗಂಟುಹಾಕಿಕೊಂಡು ನೆನಪಿನಲ್ಲಿಡು” ಎಂದು ಕ್ರೂರರೀತಿಯಿಂಡ ಕೈಕೇಯಿಯ ನ್ನು ಬೋಧಿಸಿದಳು. ಕೈಕೇಯಿಗಾದರೂ ಕಾಲಾನುಗುಣವಾಗಿ ಹಾಗೆಯೇ ಮಾಡಬೇಕೆಂದು ತೋಚಿತು. ಆಗ ರಾಜಸಯಾದ ಕೈಕೇಯಿಯು ಮಂಥರೆಗೆ-ಮಂಥರೆಯೇ, ನೀನು ಹೇಳುವ ಮಾತುಗಳು ಯುಕ್ತವಾದವುಗಳೇ ಸರಿ. ಆದರೆ ದಶರಥಮಹಾರಾಜನು ತಮಾತುಗಳನ್ನು ಹ್ಯಾಗ ನೆರವೇರಿಸುವನೋ ತಿಳಿಯದು” ಎಂದಳು. ಬಳಿಕ ಮಂಥರೆಯು- ಪ್ರಿಯಸಖೀ, ದೇವಾಸುರರ ಯುದ್ಧದಲ್ಲಿ ಪತಿಯು ಎರಡು ವರಗಳನ್ನು ನನಗೆ ಕೊಟ್ಟಿರುವನೆಂದು