ಶ್ರೀ ಮದಾನಂದ ರಾಮಯಣ, ವೆವೋ, ಅದು ನಾ ಹೊಂದುವದೆ ಹೊರತು ಯಾವಾಗ ಇರತಕ್ಕದ್ದಲ್ಲ ದೆಂಬದು ಎಲ್ಲರಿಗೂ ತಿಳಿದ ವಿಷಯವೇ ಅಲ್ಲವೆ? ನೋಡಿರಿ, ಒಂದು ಹಗ್ಗವನ್ನು ನೋಡಿ ಅದಕ್ಕೆ ಸರ್ಪವೆಂದು ಹೆಸರಿಟ್ಟರೆ, ಎಷ್ಟು ಹೊತ್ತಿನ ವರೆಗೂ ಅದು ಸರ್ಪ ವಾಗಿದ್ದೀತು? ಹಗ್ಗವೆಂದು ತಿಳಿದಮೇಲೆ ಅದು ಹಾವಾದೀತೇ ಹ್ಯಾಗೆ? ಅದರಂ ತಲೆ ಅಜ್ಞಾನದಿಂದ ಭಾಸಮಾನವಾದ ಈ ಜಗತ್ತನ್ನು ವಿವೇಕದಿಂದ ವಿಚಾರಿಸಲು, ನಿಜಸ್ವರೂಪವು ಗೊತ್ತಗುವದು. ಆ ಮೇಲೆ ಮೋಹವು ಹ್ಯಾಗೆ ಉಳಿಯಬೇಕು? ಎಂದಿಗೂ ಉಳೆಯಲಾದು. ಈ ಸಮಸ್ತ ಜಗತ್ತುಗಳೂ ಸಾಕ್ಷಾತ್ಪರಬ್ರಹ್ಮನಲ್ಲಿ ಭಾಸಮಾನವಾಗಿದೆ. ಅಧಾನವು ಯಾವಾಗಲೂ ಸತ್ಯವೆಂದೇ ಹೇಳಬೇಕು. ಹಗ್ಗದಲ್ಲಿ ಭಾಸಮಾನವಾದ ಹಾವಿಗೆ ಹಗ್ಗ ನೇ ಅದಿಪ್ಯಾನವಲ್ಲವೇ? ಅದು ಹೇಗೆ ಸತ್ಯವೊ, ಅದರಂತೆಯೇ ಜಗತ್ತಿಗೆ ಆಧಾರವಾದ ಬ್ರಹ್ಮನೂ ಸತ್ಯವಾದ ವನು, ಅತನು ನಿತ್ಯನು, ಯಾವಾಗಲೂ ಪರಿಶುದ್ಧನು, ಸ್ವತಂತ್ರನು, ಸ್ವಯ೦ಪ್ರಕಾಶನು, ಅಂಧಾ ಪರಬ್ರಹ್ಮನೇ ಬ್ರಹ-ವಿಷ್ಣು-ಮಹೇಶ್ವರ ರೂಪಗಳಿಂದ ಸೃಷ್ಟಿ-ಸ್ಥಿತಿ-ಲಯಗಳನ್ನು ನಡೆಸುತ್ತೇನೆ. ಅತನೇ ಸಚ್ಚಿದಾನಂದ ರೂಪನು, ಆತನ ತ್ಯದಿಂದಲೇ ನಾವೆಲ್ಲರೂ ವ್ಯವಹಾರ ಮಾಡುವೆವ, ಆ ಪ್ರಭುವಿನ ವಾಖೆಯೇ ಜಗತ್ತನ್ನೆಲ್ಲಾ ವ್ಯಾಪಿಸುವದು, ಸದಸ್ಯರು ಕೃಪೆಯಿಂದ ಆತ ಬನವಾರತಂದರೆ, ಸನು ಬಂಧನಗಳೂ ದೂರವಾಗುವವು. ಅಂಥಾ ಜ್ಞಾನಿಯಾದ ಪುರುಷನಿಗೆ ಜಗತ್ತಿನಲ್ಲಿ ತಿಳಿಯತಕ್ಕ ಬೇರೆ ವಿಷಯಗಳು ಯಾವವೂ ಉಳಿಯುವದಿಲ್ಲ. ಪ್ರಾಣಿಗಳು ಅನೇಕ ಜನಗಳನ್ನು ಹೊಂದಿದ್ದರೂ ಅವರು ಪ್ರಕ ಆಗುಣಗಳಿಂದ ಬದ್ಧರಾಗಿ ನಿಜ ಸ್ವರೂಪವನ್ನು ತಿಳಿಯಲಾರರು. ಆದ್ದರಿಂದ ಮೊದಲು ಸದ್ಗುರುವಿಗೆ ಶರಣುಹೋಗಬೇಕು. ಆತನೇ ಮುಮುಕ್ಷುಗಳಿಗೆ ಜ್ಞಾನಪ್ರದನು. ಆತನ ಬೋಧದಿಂದ ಚಿತ್ತಶುದ್ದಿಯಾದ ಬಳಿಕ ಆತ್ಮಜ್ಞಾನವು ತಾನ' ವ್ಯಕ್ತವಾಗುವದು, ಒಂದು ಸಾರೆ ಹೀಗೆ ಜ್ಞಾನವಾಯಿತೆಂದರೆ, ಮುಂದೆ ಯಾವಾಗಲೂ ಅದಕ್ಕೆ ಬಾಧಕವಿಲ್ಲ. ಸತ್ಯ, ಜ್ಞಾನ, ಸಮ, ಧೈರ್ಯ, ಭೂತ ದಯೆ, ಇಂದ್ರಿಯನಿಗ್ರಹ, ಭಗವದ್ಭಕ್ತಿ ಇವುಗಳು ಶರೀರದಲ್ಲಿ ಹೇಳಿದಂತೆ ಆ ಜ್ಞಾನವು ದೃಢವಾಗುತ್ತದೆ. ಆದಕಾರಣ ಈ ಗುಣಗಳನ್ನು ನಾವು ಆತ್ಯಾದರದಿಂದ ಸ್ವೀಕಾರ ಮಾಡಬೇಕು, ಮತ್ತು ಚೌರ್ಯ, ದ್ಯೋತ, ಪರದೂಷಕ, ಮತ್ಸರ, ದಂಧ, ಕ್ರೌರ್ಯ, ಪರಹಿಂಸೆ, ಲೋಭ, ನಿಂದ್ಯವಾದ ಆಚರಣೆ, ವೇದದ್ವೇಷ, ಸತ್ಪುರುಷರ ತಿರಸ್ಕಾರ, ಕಲ್ಲಕತನ, ಇವೇ ಮೊದಲಾದ ತಾಮಸ ವೃತ್ತಿಗಳನ್ನು
ಪುಟ:ಶ್ರೀ ಮದಾನಂದ ರಾಮಾಯಣ.djvu/೫೨
ಗೋಚರ