ಅನಿರ್ವಾಚ್ಯವೆ ವಾಚ್ಯವಾದಲ್ಲಿ ಹಕಾರವೆನಿಸಿತ್ತು; ಆ ಹಕಾರವೆ ನಿರಂಜನ ಪ್ರಣವವೆನಿಸಿತ್ತು; ಆ ನಿರಂಜನ ಪ್ರಣವವೆ ಜಂಗಮಾಕೃತಿ ಜಗದಾಧಾರ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.