ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಬಲೂರು
ಗೋಚರ
ಅಬಲೂರು ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನಲ್ಲಿದೆ. ಇಲ್ಲಿನ ಬ್ರಹ್ಮೇಶ್ವರ ದೇವಾಲಯ ಮತ್ತು ವೀರಸೋಮೇಶ್ವರ ದೇವಾಲಯಗಳು ಪ್ರಸಿದ್ಧವಾಗಿವೆ. ಏಕಾಂತದ ರಾಮಯ್ಯನೆಂಬ ಶರಣ ಇಲ್ಲಿ ತನ್ನ ತಲೆಯನ್ನು ಕತ್ತರಿಸಿಟ್ಟು ವೀರಶೈವಮತದ ಪ್ರಾಮುಖ್ಯವನ್ನು ಸ್ಥಾಪಿಸಿದನೆಂದು ಶಾಸನ ಮತ್ತು ಗ್ರಂಥಗಳಲ್ಲಿ ಹೇಳಿದೆ. ವೀರಶೈವರು ಇದು ಬಹಳ ಪ್ರಸಿದ್ಧವಾದುದೆಂದು ತಿಳಿದಿದ್ದಾರೆ. ಇತಿಹಾಸ ಸಂಶೋಧಕರಿಗೆ ಬೇಕಾದ ಅನೇಕ ಸಂಗತಿಗಳು ಇಲ್ಲಿವೆ. (ಬಿ.ಎಸ್.)