ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಂಡೀವ

ವಿಕಿಸೋರ್ಸ್ದಿಂದ

ಒಂದು ದಿವ್ಯ ಧನುಸ್ಸು. ಈ ಧನುಸ್ಸು ಬ್ರಹ್ಮನಿಂದ ಇಂದ್ರನಿಗೂ,ಇಂದ್ರನಿಂದ ವರುಣನಿಗೂ,ವರುಣನಿಂದ ಅಗ್ನಿಗೂ ಬಂತು. ಖಾಂಡವದಹನ ಸಮಯದಲ್ಲಿ ಅಗ್ನಿ ಅರ್ಜುನ ಮಾಡಿದ ಉಪಕಾರಕ್ಕಾಗಿ ಆತನಿಗಿದನ್ನು ಕೊಟ್ಟ. ಈ ಧನಸ್ಸು ಎರಡು ಅಕ್ಷಯ ಬತ್ತಳಿಕೆಗಳೊಂದಿಗೆ ಅರ್ಜುನನಿಗೆ ಪ್ರಾಪ್ತವಾಗಿತ್ತು. ಈ ಕಾರಣದಿಂದಲೇ ಅವನು ಗಾಂಡೀವಿ ಎನಿಸಿದ. ಇದರ ಮಹಿಮೆಯಿಂದ ಅರ್ಜುನ ಎಲ್ಲ ದಿಕ್ಕುಗಳನ್ನು ಗೆದ್ದು, ಇಂದ್ರನನ್ನು ಸೋಲಿಸಿದುದಲ್ಲದೆ ಇದರ ತುದಿಯಿಂದ ಶಿವನ ನೆತ್ತಿ ಮೇಲೆ ಹೊಡೆದು ಗಾಯ ಮಾಡಿದ. ಮಹಾಪ್ರಸ್ಥಾನ ಸಮಯದಲ್ಲಿ ಅರ್ಜುನ ಇದನ್ನು ಸಮುದ್ರದಲ್ಲಿ ಬಿಸಾಡಿದನೆಂದು ಹೇಳಲಾಗಿದೆ.