ಮಂಟೇಸ್ವಾಮಿ ಕಾವ್ಯ
thumb|ಮಂಟೇಸ್ವಾಮಿ [೧][೨] ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ನಾಟಕ ಸಾಹಿತ್ಯ ಬರೆದಿರುವರು ಎಚ್.ಎಸ್.ಶಿವಪ್ರಕಾಶ್, ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಾದಾರಿ ಮಾದಯ್ಯ, ಮಂಟೇಸ್ವಾಮಿ ಕಥಾಪ್ರಸಂಗ, ಷೇಕ್ಸ್ಪಿಯರನ ಸ್ವಪ್ನನೌಕೆ, ಮಧುರೆಕಾಂಡ, ಮಾಧವಿ ಮಾತೃಕಾ ಇವು ಇವರು ಬರೆದ
ಮಂಟೇಸ್ವಾಮಿ ಕಾವ್ಯ ಕರ್ನಾಟಕದ ಪ್ರಮುಖ ಕಾವ್ಯಗಳಲ್ಲಿ ಒಂದಾಗಿದೆ. ನೀಲುಗಾರರು, ದಕ್ಷಿಣ ಕರ್ನಾಟಕ ವೃತ್ತಿಪರ ಗಾಯಕರು.ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ ಮತ್ತು ಗ್ರಾಮೀಣ ಬೆಂಗಳೂರು ಜಿಲ್ಲೆಗಳಲ್ಲಿ ಶತಮಾನಗಳಿಂದ ಪ್ರದರ್ಶನ ನೀಡುತ್ತಿದ್ದಾರೆ.
ಮಂಟೇಸ್ವಾಮಿಯ ಪರಿಚಯ
[ಸಂಪಾದಿಸಿ]ಮಂಟೇಸ್ವಾಮಿ ಒಬ್ಬ ವೀರಶೈವ ಸಂತ ಮತ್ತು ಜಾನಪದ ಕಾವ್ಯಗಳ ನಾಯಕರಗಿದ್ದರು. ಇವರು ಸುಮಾರು ಹದಿನೈದನೇ ಶತಮಾನದಲ್ಲಿ ಜೀವಿಸಿದವರಾಗಿದ್ದರು.ಇವರ ಸುತ್ತ ದಂತಕಥೆಗಳನ್ನು ಸೃಷ್ಟಿಸಲಾಗಿದೆ. ಚಿಕ್ಕೆಲ್ಲೂರು, ಬೊಪ್ಪಗೌಡನಪುರ ಮತ್ತು ಕಪ್ಪಡಿಯಲ್ಲಿರುವ ದೇವಾಲಯಗಳಲ್ಲಿ ಮಂಟೇಸ್ವಾಮಿಯವರ ವ್ಯಕ್ತಿತ್ವದ ಬಗ್ಗೆ ಮಹಾಕಾವ್ಯಗಳನ್ನು ಚಿತ್ರಿಸಲಾಗಿದೆ. ಮಂಟೇಸ್ವಾಮಿಯವರ ಕಾವ್ಯ, ಹನ್ನೆರಡನೇ ಶತಮಾನದ ಅಲ್ಲಮಪ್ರಭು ಅವರ ವಚನಗಳ ಸರಿಸಮಾನವಾಗಿದೆಯೆಂದು ಹೇಳುತ್ತಾರೆ ಮತ್ತು ಅವುಗಳ ನಡುವೆ ವ್ಯತ್ಯಾಸವೇನು ಇಲ್ಲ ಎಂದು ಹೇಳುತ್ತಾರೆ.
ಮಂಟೇಸ್ವಾಮಿಯ ಜೀವನ ಚರಿತ್ರೆ
[ಸಂಪಾದಿಸಿ]ಮಂಟೇಸ್ವಾಮಿ ನಾಟಕೀಯವಾಗಿ ಕಲ್ಯಾಣದಲ್ಲಿ ಪ್ರವೇಶಪಡೆದುಕೊಂಡಾಗ ಮಹಾಕವ್ಯ ಪ್ರಾರಂಭವಾಗುತ್ತದೆ. ಅವರು ಒಂದು ಸತ್ತ ಕರುವನ್ನು, ಕಲ್ಲುಗಳಿಂದ ತುಂಬಿದ ಕುಂಬಳಕಾಯಿಯನ್ನು ಕೈಯಲ್ಲಿ ಹಿಡಿದು,ಸಗಣಿಯ ರಾಶಿಯ ಮೇಲೆ ನಾಟಕಗಳಲ್ಲಿ ಬರುವ ಹಾಗೆ ಬರುತ್ತಾನೆ. ನಂತರ ಬಸವಣ್ಣನ ಹೆಂಡತಿ ಅಲ್ಲಿಗೆ ಬಂದು ಅವನನ್ನು ಅರಮನೆಗೆ ಕರೆದುಕೊಂಡು ಹೊಗುತ್ತಾಳೆ.ಅರಮನೆಯಲ್ಲಿ ಮಂಟೇಸ್ವಾಮಿ ಮತ್ತು ಶರಣರ ನಡುವೆ ವಾದವಿವಾದಗಳಾಗುತ್ತದೆ. ಅಲ್ಲಿ ಮಂಟೇಸ್ವಾಮಿಯವರ ಹಿರಿಮೆ ಸಾಬೀತಾಗುತ್ತದೆ ಮತ್ತು ಪ್ರಾಮಾಣಿಕ ಭಕ್ತರಲ್ಲದ ಮೇಲೆ ವಿಜಯವನ್ನು ಸಾಧಿಸುತ್ತಾರೆ.
ಇದಾದನಂತರ, ಮಂಟೇಸ್ವಾಮಿ ತಮ್ಮ ಶಾಶ್ವತ ನಿವಾಸ ಹುಡುಕಿಕೊಂಡು ದಕ್ಷಿಣ ಕರ್ನಾಟಕದ ಕಡೆಗೆ ಪಯಣ ನಡೆಸುತ್ತಾರೆ. ಕೊನೆಗೆ ಬೊಪ್ಪಗೌಡನಪುರ ಎಂಬ ಊರಿನಲ್ಲಿ ಶಾಶ್ವತ ನಿವಾಸವನ್ನು ಕಂಡುಕೊಳ್ಳುತಾರೆ. ಈ ಪಯಣದಲ್ಲಿ ಅವರು ಅನೇಕ ಶಿಶ್ಯರನ್ನು ಪಡೆಯುತ್ತಾರೆ. ಅವರು ತಮ್ಮ ಹೋರಾಟಕ್ಕಾಗಿ ಮಕ್ಕಳನ್ನು ಉಪಯೋಗಿಸಿಕೊಳ್ಳುತಿದ್ದರು. ಪ್ರತಿಯೊಂದು ಶಿಶುವು ಒಂದೊಂದು ಸಮುದಾಯವನ್ನು ಪ್ರತಿನಿಧಿಸುತ್ತದೆ. ರಾಚಪ್ಪಜ್ಜಿ, ತೋಪು ದೊಡ್ಡಮ್ಮ, ಚನ್ನಜಮ್ಮ, ಮಡಿವಾಳ ಮಚ್ಚಯ್ಯ, ಪಾಲರಡಯ್ಯ ಮತ್ತು ಸಿದ್ದಪ್ಪಾಜಿ ಅವರ ಪ್ರಮುಖ ಅನುಯಾಯಿಗಳು. ಬಾಚಿ ಬಸವಯ್ಯ ಇವರ ಅನುಯಾಯಿಯಾಗಬೇಕೆಂದು ಮರುಜನ್ಮದಲ್ಲಿ ಬಾಲ ಕೆಂಪಣ್ಣನಾಗಿ ಹುಟ್ಟಿ ನಂತರ ಸಿದ್ದಪ್ಪಾಜಿ ಎಂದು ಹೆಸರು ಪಡೆಯುತ್ತಾನೆ.
ಹಲಗೂರಿನ ಪಾಂಚಾಲದವರ(ಕಮ್ಮಾರ) ಜೊತೆಗೆ ಸಿದ್ದಪ್ಪಾಜಿಯ ಜಗಳವಾದಾಗ, ಅದನ್ನು ಒಂದು ಪ್ರತಿಮೆಯ ಮೂಲಕ ತೋರಿಸಲಾಗಿದೆ.ಇದು ತಂತ್ರಜ್ಞಾನವು ಅದರ ಪಾರಂಪರಿಕ ಹಂತದಿಂದ ನಾಗರೀಕತೆಯಲ್ಲಿ ಸ್ವತಂತ್ರಗೊಳ್ಳುವುದನ್ನು ಪ್ರತಿನಿದಿಸುತ್ತದೆ. ಈ ಘಟನೆ ಬಹಳ ನಾಟಕೀಯವಾಗಿ ನಿರೂಪಿಸಲ್ಪಟ್ಟಿದೆ. ಅಂತಿಮವಾಗಿ ಮಂಟೇಸ್ವಾಮಿ ಅನೇಕ ಅನುಯಾಯಿಗಳನ್ನು ಬೇರೆ ಬೇರೆ ಸಮುದಾಯಗಳಿಂದ ಹೊಂದಿ ಬೊಪ್ಪಗೌಡನಪುರದಲ್ಲಿ ಉಳಿದುಕೊಳ್ಳುತ್ತಾರೆ. ಇವರ ಸಮಾಧಿ ಇದೇ ಊರಿನಲ್ಲಿ ನೋಡಬಹುದು. ಇವರ ಪ್ರಮುಖ ಅನುಯಾಯಿಗಳಲ್ಲಿ ಇಬ್ಬರ ದೇವಾಲಯಗಳನ್ನು ಚಿಕ್ಕೆಲ್ಲೂರು ಮತ್ತು ಕಪ್ಪಾಡಿಯಲ್ಲಿ ಕಂಡುಬರುತ್ತದೆ. ಮಂಟೇಸ್ವಾಮಿ ಕವ್ಯ ಮತ್ತು ಅದರ ಮಹಾಕಾವ್ಯವೂ ಅನೇಕ ಗುಣಲಕ್ಷಣಗಳಿಂದ ಕೂಡಿದೆ. ಅವರು ಬೌಗೋಳಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಾದೇಶಿಕ ಭಾಷೆಯನ್ನು ಆರಿಸಿಕೊಂಡರು, ಇದರ ಕುರಿತಾಗಿ, ಸಾಹಿತ್ಯ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಎರಡನೆಯದಾಗಿ, ನಿರೂಪಣಾ ಶೈಲಿಯು ಕಾವ್ಯಾತ್ಮಕ, ನಾಟಕೀಯ ಹಾಗು ಸರಳತೆಯಿಂದ ಕೂಡಿದೆ. ಮೂರನೆಯದಾಗಿ, ಇದು ಪ್ರಾಸಂಗಿಕ, ಪ್ರತಿ ಸಂಚಿಕೆಯನ್ನು ಸ್ವತಂತ್ರವಾಗಿ ಪಠಿಸಬಹುದು. ಈ ಕವ್ಯದಲ್ಲಿ, ಓದಿರದ ಸಮುದಾಯಗಳ ಜೀವನವನ್ನು ನಿರೂಪಿಸಿದ್ದಾರೆ. ಈ ಮಹಾಕವ್ಯದಲ್ಲಿ ಬ್ರಹ್ಮಾಂಡದ ಮೂಲದ ಬಗ್ಗೆ ತಿಳಿಸಿದ್ದಾರೆ ಮತ್ತು ಸಮುದಾಯದ ಕಥೆಗಳು ಉಪಕಥೆಗಳಾಗಿ ಕಂಡುಬರುತ್ತದೆ. ಇದು ಈ ಸಮುದಾಯಗಳಿಗೆ ಗುರುತನ್ನು ಮತ್ತು ಹೆಮ್ಮೆಯನ್ನು ನೀಡುತ್ತದೆ. ವಾಸ್ತವವಾಗಿ ಇದು ನಾಗರೀಕತೆಯ ಇತಿಹಾಸದ ವಿವಿಧ ಹಂತಗಳನ್ನು ಚಿತ್ರಿಸಲಾಗಿದೆ.
ಮಂಟೇಸ್ವಾಮಿಯ ಪವಾಡ
[ಸಂಪಾದಿಸಿ]ಒಮ್ಮೆ ಮಂಟೇಸ್ವಾಮಿ, ಮಡಿವಾಳ ಮಚ್ಚಯ್ಯ ಎಂಬ ನಿಜವಾದ ಶರಣನ ಹಣೆಬರಹವನ್ನು ಪರೀಕ್ಷಿಸಲು ಮಂಟೇಸ್ವಾಮಿ ಒಬ್ಬ ಎಳರಿಂದ ಒಂಬತ್ತರ ವರ್ಶದ ನಡುವಿನ ಒಬ್ಬ ಹುಡುಗನ ಮಾಂಸದ ಊಟವನ್ನು ಹಾಕಬೇಕು ಎಂದು ಹೇಳುತ್ತಾನೆ, ಅದಕ್ಕಾಗಿ ಮಚ್ಚಯ್ಯ ಮತ್ತು ಅವನ ಪತ್ನಿ ಈ ವಿವರಣೆಗೆ ಸೂಕ್ತವಾದ ತಮ್ಮ ಏಕೈಕ ಪುತ್ರವನ್ನು ಕೊಂದು ಅಥಿತಿಗಳಿಗೆ ಅವನ ಮಾಂಸದಲ್ಲಿ ಅಡುಗೆಯನ್ನು ತಯಾರಿಸುತ್ತಾರೆ. ಅಥಿತಿಯಾದ ಮಂಟೇಸ್ವಾಮಿ, ಇವರ ಭಕ್ತಿಯಿಂದ ಸಂತೋಶವಾಗಿ ಅವರ ಮಗುವಿಗೆ ಮತ್ತೆ ಜೀವನವನ್ನು ಕೊಡುತ್ತಾನೆ ಮತ್ತೆ ತನ್ನ ಭಕ್ತರಿಗೆ ಆಶಿರ್ವದಿಸುತ್ತಾನೆ.