ಉಮದಾಸಸ್ವಾಮಿಗಳ ಚರಿತ್ರ.
ನಿದ್ರೆಗೈಯುತ್ತಿರುವಾಗ ಸಮರ್ಥರು ಕಾಲಲ್ಲಿ ಪಾದುಕೆಗಳನ್ನು ಹಾಕಿಕೊಂಡು ಕೌಪಿನ ಪರಿಧಾನ ಮಾಡಿ,ಕೈಯಲ್ಲಿ ಜಪಮಾಲೆಯನ್ನು ಹಿರಿದು, ಬಗಲಲ್ಲಿ ಜೋ ಕಿಗೆಯನ್ನು ಹಾಕಿಕೊಂಡು, ತಲೆಯ ತುಂಬ ಜಡೆಗಳನ್ನು ಬಿಟ್ಟು, ಮಹಾರಾಜರಿಗೆ ದರ್ಶನವನ್ನೂ ಪುಸಾದವನ್ನೂ ಕೊಟ್ಟು ಅಂತರ್ಧಾನವನ್ನು ಹೊಂದಿದರು. ವು ಹಾರಾಜರು ಆನಂದದಿಂದ ನಿದ್ರೆಯಿಂದೆಚ್ಚತ್ತು ನೋಡುವಲ್ಲಿ, ಕೈಯಲ್ಲಿ ಮಾತ್ರ ತೆಂಗಿನಕಾಯಿಯು ಇತ್ತು, ಸಮರ್ಥರು ಅದೃಶ್ಯರಾಗಿದ್ದರು. ಈ ಎಲ್ಲ ಸಂಗತಿಯ ನ್ನು ಮಹಾರಾಜರು ತಮ್ಮ ಜೇಷ್ಠ ಪತ್ನಿಯಾದ ಸಯಿಬಾಯಿಗೂ ಮಾತೋಶ್ರಿಯಾದ ಜಿಜಾಬಾಯಿಗೂ ತಿಳಿಸಿದರು, ಅವರೆಲ್ಲರು ಇದನ್ನು ಕೇಳಿ ಆನಂದ ಪಟ್ಟರು. ತರುವಾ ಯ ಮಹಾರಾಜರು ಮಹಾಬಳೇಶ್ವರಕ್ಕೆ ಹೋಗಿ ಅಲ್ಲಿ ಬ್ರಾಹ್ಮಣ ಭೋಜನ ಹಾಕಿ ಬೇಕಾದಷ್ಟು ದಾನಧರ್ಮ ಮಾರಿದರು, ಭೋಜನ ಸವರಂಭವು ನಡೆದಿರುವಾಗಲೇ ಸಮರ್ಥರ ಕಡೆಯಿಂದ ಒಂದು ಆಜ್ಞಾ ಪತ್ರವು ಒಂದು ಕಲ್ಪಿತು, ಅದರಲ್ಲಿ “ಧರ್ಮ ಸ್ಥಾಪನ ಮಾಡುವ ಭಾರವು ನಿನ್ನ ಕೂಡಿರುತ್ತದ ಅರಸರೊಳಗೆ ನಿನ್ನಂಥ ಪ ವಂತನೂ, ನೀತಿವಂತನೂ, ಆಚಾರಶೀಲನೂ, ವಿಚಾರಶೀಲನೂ, ದೇವಧರ್ಮಗೂ ಬ್ರಾಹ್ಮಣಸ್ಪತಿಪಾಲಕನೂ, ಧೀರಉದಾರಗಂಭೀರನ್ನೂ, ವೀರಾಗ್ರೇಸರನ ಯರ ನ್ಯೂ ೪ಳನು, ನಿನ್ನಂಥ ಸರ್ವಜ್ಞ ಧರ್ಮ ಮೂರ್ತಿಗೆ ವಿಶೇಷ ಬರೆಯುವದೇನದ?" ಎಂಬ ಅರ್ಧವನ್ನು ಸುಂದರವಾದ ಮಹಾರಾಷ್ಟ್ರ, ಶ್ಲೋಕಗಳಿಂದ ಗರ್ಭಿತ ಮಾಡಿ ದ್ದರು, ಅದನ್ನು ಓದಿಕೊಂಡು ಮಹಾರಾಜರು ಬಹಳ ಸಂತೋಷ ಪಟ್ಟು ಆ ಪತ್ರವ ನ್ನು ತೆಗೆದುಕೊಂಡು ಬಂದಿದ್ದ ಶಿಷ್ಯನ ಸತ್ಕಾರ ಮಾಡಿ “ ನಾನು ಸರ್ವ ಅಪರಾ ಧಿಯಾಗಿದ್ದೇನೆ, ದಯಶೀಲರಾದ ತಾವು ಈ ಬಡವನನ್ನು ಕ್ಷಮಿಸಬೇಕು. ಆ ದಾಗಿ, ಈಗ ನಾನು ತಮ್ಮ ದರ್ಶನಕ್ಕಾಗಿ ಬರಬೇಕೆಂದು ಅಪೇಕ್ಷಿಸುತ್ತೇನೆ, ತಮ್ಮ ದರ್ಶನಾಪೇಕ್ಷೆಯಿಂದ ಬಳಲುವ ಈ ದರಿದ್ರನಿಗೆ ದರ್ಶನವೆಂಬ ದ್ರವ್ಯವನ್ನು ಕೊಟ್ಟು ಸಂತೃಪ್ತಗೊಳಿಸಲಿಕ್ಕೆ ತಾವು ಸಮರ್ಥರೇ ಇದ್ದೀರಿ, ಇತಿ ಶಿರಸಾಷ್ಟಾಂಗ ನಮಸ್ಕಾ ರ• ಎಂಬ ಉತ್ತರವನ್ನು ಬರೆದು ಶಿಷ್ಯನ ಕೈಯಲ್ಲಿ ಕೊಟ್ಟು ಕಳಿಸಿದರು. ಮಾರನೇ ದಿವಸ ಮಹಾರಾಜರು ಚಾಫಳ ಮಠಕ್ಕೆ ಬಂದು ವಿಚಾರಿಸಲಾಗಿ ಶ್ರೀಗಳವರು ಎರಡನೇ ಕಡೆಗೆಯೋರಟು ಹೋಗಿದ್ದರು, ಅಲ್ಲಿಂದ ಮಹಾರಾಜರು ದಿವಾಕರಭಟ್ಟ ನೆಂಬವನನ್ನು ತನ್ನ ಸಂಗಡ ಕರೆದುಕೊಂಡು ಸಿಂಗಣವಾಡಿಗೆ ಬಂದರು. ಆ ಸಮ ಜದಲ್ಲಿ ಸಮರ್ಥರು ತೋಟದಲ್ಲಿ ಒಂದು ವುದುಂಬರ ಗಿಡದ ಕೆಳಗೆ ಕುಳಿತು “ದಾಸಬೋಧ”ವನ್ನು ಬರೆಯುವಲ್ಲಿ ತೊಡಗಿದ್ದರು, ಆಗ ಕಲ್ಯಾಣಸ್ವಾಮಿ ಯು ಶಿವಾಜಿ ಮಹಾರಾಟರ ಕಡೆಯಿಂದ ತಂದ ಉತ್ತರವನ್ನು ಸಮರ್ಥರ ಕೈಯಲ್ಲಿ ತಂದು ಕೊಡಲು ಅವರು ಅದನ್ನು ಓದಿಕೊಂಡು (ಶಿವಾಜಿ ಮಹಾರಾಜನಿಗೆ ನನ್ನ ದರ್ಶನ ತೆಗೆದುಕೊಳ್ಳುವ ಆತುರವಿದ್ದಂತೆ ಈ ಉತ್ತರದ ಮೇಲಿಂದ ಕಾಣುತ್ತ