ಚೋಳ ಕಡಿತು, ನನಗೊಂದು ಚೋಳ ಕಡಿತು
ಗೋಚರ
ಚೋಳ ಕಡಿತು, ನನಗೊಂದು ಚೋಳ ಕಡಿತು
[ಸಂಪಾದಿಸಿ]- ಸಾಮಾನ್ಯವಾಗಿ ಕುಂಡಲಿನಿ ಶಕ್ತಿಯನ್ನು ಅಂದರೆ ಮನುಷ್ಯನಲ್ಲಿ ನಿಹಿತವಾದ ದೈವಿ ಶಕ್ತಿಯನ್ನು ಸರ್ಪರೂಪವಾಗಿ ಕಲ್ಪಿಸುತ್ತಾರೆ. ಈ ಕವನದಲ್ಲಿ ಶರೀಫರು ತಮ್ಮ ಬದುಕನ್ನು ಬದಲಾಯಿಸಿದ ಘಟನೆಯನ್ನು, ಅದಕ್ಕೆ ಕಾರಣವಾದ ಶಕ್ತಿಯನ್ನು ಚೋಳಿನ ರೂಪದಲ್ಲಿ ಬಣ್ಣಿಸಿದ್ದಾರೆ. ಕುಂಡಿಲಿಯನ್ನು ಸಾಮಾನ್ಯವಾಗಿ ಆರು ಅಥವಾ ಏಳು ಹೆಎಯ ಸರ್ಪಕ್ಕೆ ಹೋಲಿಸುತ್ತಾರೆ. ಇಲ್ಲಿ ಚೇಳಿಗೆ ಹೋಲಿಸಿದೆ.
- ಚೋಳ ಕಡಿತು ನನಗೊಂದು ಚೋಳ ಕಡಿತು
ಚೋಳ ಕಡಿತು ನನಗೊಂದು ಚೋಳ ಕಡಿತು
ಕಾಳಕತ್ತಲದೊಳಗೆ ಕೂತಿತ್ತು, ನನಕಂಡ ಬಂತು ||ಪಲ್ಲ||
ಎಷ್ಟು ದಿನದ ಸಿಟ್ಟು ಇಟ್ಟಿತ್ತು, ತೀರಿಸಿ ಬಿಟ್ಟಿತು
ಯಾರಿಗೆ ಹೇಳಿದರ ಏನ ಆದೀತು
ಗುರುತಾತು ಈ ಮಾತು
ಹುಟ್ಟಿದ ಮಗಳ ಕಂಡಿದ್ದಿಲ್ಲ
ಇದರ ಕಷ್ಟ ಶಿವನೇ ಬಲ್ಲ
ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು ||೧||
ಮೂರು ದೇಹದೊಳಗ ತಾನಿತ್ತ
ಪರಮಾತ್ಮನಾದದೊಳು ತಾನು ಬೆಳೆದಿತ್ತ
ಸಾರಿಬಂದು ಎನ್ನ ನೋಡುತ
ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು ||೨||
ದೇವರಮನಿ ಮೂಲೆಯೊಳಗಿತ್ತು
ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು
ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು
ಕಲಿಕರ್ಮ ನುಂಗಿತ್ತು
ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು
ಕಚ್ಚುತಿರಲು ಎಚ್ಚರಾದಿತು, ಹುಚ್ಚು ಹಿಡಿದಂಗಾತು ||೩||
ನೋಡಿ
[ಸಂಪಾದಿಸಿ]ಉಲ್ಲೇಖ
[ಸಂಪಾದಿಸಿ]- ಶಿಶುನಾಳ ಶರೀಫರ ಪದಗಳು -ಅನಾಮಿಕ