೧೦) ಕೊಹಿನುರು wwwxrwwwww ನಿಂತನು. ಪುನಃ ಪೂರ್ಣದೃಷ್ಟಿ ಯಿಂದ ಹುಡುಗಿಯ ಮುಖವನ್ನು ದೃಷ್ಟಿಸಿ ನೋಡಿದನು. ಇದ್ದಕ್ಕಿದ್ದ ಹಾಗೆ, ಘಂಟೆಯ ನಾದವನ್ನೂ ಹೆಂಗಸರ ಹಾಡನ್ನೂ ಆನಂದದ ಕೋಲಾಹಲದ ಧ್ವನಿಯನ್ನೂ ಅಣಗಿಸುವಹಾಗೆ ಅಮರನು, (* ಇದೇನು ! ಇವಳು ಅವಳಲ್ಲ ! ೨೨ ಎಂದು ಘಟ್ಟಿಯಾಗಿ ಕೂಗಿದನು. (ಇದೇನೇ ! ಇದೇನೇ ! ಮದುವೆ ಗಂಡು ಓಡಿಹೋದನಲ್ಲೇ !೨೨ ಅಮರನು ಬೇಗಬೇಗನೆ ಅಲ್ಲಿಂದ ಹೊರಟು ಹೊರಗೆ ಒಂದುಬಿಟ್ಟನು. ಅವನನ್ನು ಹಿಡಿದು ನಿಲ್ಲಿಸಲು ಅನೇಕರು ಅವನ ಹಿಂದೆ ಓಡಿಬಂದರು. ಹುಡುಗನು ಕತ್ತಿಯನ್ನೆತ್ತಿ ಹಿಡಿದುಕೊಂಡು • ಜೋಕೆ ! ಯಾರೂ ನನ್ನನ್ನು ಮುಟ್ಟ ಕೂಡದು, ೨೨ ಎಂದು ಗದರಿಸಿಕೊಂಡನು. ಅಮರಸಿಂಹನು ಹೊರಗೆ ಬಂದು, ಒಬ್ಬ ಕುದುರೆಯ ಸವಾರನನ್ನು ಕುದುರೆಯಿಂದ ನೆಲಕ್ಕೆ ತಳ್ಳಿ ಬಿಟ್ಟು ಆ ಕುದುರೆಯಮೇಲೆ ಸವಾರನಾಗಿ ಉದಯ ಪುರದಕಡೆಗೆ ವೇಗವಾಗಿ ಓಡಿಸಿಕೊಂಡು ಹೊರಟುಹೋದನು. ಐ ದ ನೆ ಯ ಸ ರಿ ಚ ದ . ದಿನ ಕಳೆಯಿತು, ತಿಂಗಳು ಕಳೆಯಿತು, ವರ್ಷ ಕಳೆಯಿತು, ಕುಮಾರ ಅಮರಸಿಂಹನ ಚಿತ್ತವಿಕಾರವು ದಿನೇ ದಿನೇ ಹೆಚ್ಚುತ ಬಂದಿತು. ರಾಣಾ ಜಯಸಿಂಹನು ಮಗನಮೇಲೆ ಬಹಳ ಕೋಪಿಸಿಕೊಂಡನು. ಪೂರ್ಣವಾಗದ ಮದುವೆಯನ್ನು ಪೂರೈಸಬೇಕೆಂದು ಮಗನಿಗೆ ಅಪ್ಪಣೆ ಮಾಡಿದನು. ರಾಣಿ ಕರ್ಣಾವತಿಯು, ಮಗನು ತಂದೆಯ ಅಪ್ಪಣೆಗೆ ವಿಾರಿದ ಹಾಗಾಗುವುದೆಂಬ ಭಯದಿಂದ ಕುಲಪುರೋಹಿತನನ್ನು ಕರೆಯಿಸಿಕೊಂಡು ಇದ್ದ ಸಂಗತಿಗಳನ್ನೆಲ್ಲಾ ಅವನಿಗೆ ತಿಳಿಸಿದಳು. ಪುರೋಹಿತನು ರಾಣಾ ಬಳಿಗೆ ಹೋಗಿ ಅನೇಕ ಶಾಸ್ತ್ರವಚನಗಳನ್ನು ದಹರಿಸಿ, “ ಹುಡುಗನಿಗೆ ವಯಸ್ಸು ಬಂದ ಬಳಿಕ ತಾನಾ ಗಿಯೇ ವಿವಾಹವನ್ನು ಸಂಪೂರ್ಣಮಾಡಿ ಹೆಂಡತಿಯನ್ನು ಸಂಗ್ರಹಿಸುವನು. ಮಿವಾರದ ರಾಜವಂಶದಲ್ಲಿ ಹುಟ್ಟಿದವರು ಯಾರು ಯಾವಾಗತಾನೇ ಧರ್ಮ ಪತ್ನಿ ಯನ್ನು ತ್ಯಜಿಸಿರುವರು ? ೨೨ ಎಂದು ಹೇಳಿದನು.
ಪುಟ:ಕೋಹಿನೂರು.djvu/೧೧೦
ಗೋಚರ