ದ್ವಿತೀಯಾಂಕಂ. ೩೧ ನಮ್ಮ ವರಾನ್ವೇಷಣಪ್ರಯತ್ನವು ಸಾಕು ! ದೈವೇಚ್ಛೆಯಿದ್ದಂ. ತಾಗಲಿ ! ನಾರದಂ-ರಾಜೇಂದ್ರಾ! ಈ ಸ್ವಲ್ಪ ವಿಚಾರಕ್ಕಾಗಿ ಸತ್ವಜ್ಞನಾದ ನೀ ನೂ ಚಿಂತಿಸಬಹುದೆ ? ಸೃಷ್ಟಿಕರ್ತನಾದ ಭಗವಂತನು ಮೊದ ಲು ವರನನ್ನು ' ಸೃಷ್ಟಿಸಿದಮೇಲಲ್ಲವೇ ಕನೈಯನ್ನು ಸೃಷ್ಟಿಸಿರ ಬೇಕು!ನಿನ್ನ ಮಗಳು ಹುಟ್ಟುವುದಕ್ಕೆ ಮೊದಲೇ ಅವಳಿಗೆ ತಕ್ಕ ವ ರನು ಎಲ್ಲಿಯೋ ಹುಟ್ಟಿರಬೇಕು, ಈ ಸೂಕ್ಷಾಂಶವನ್ನು ನೀನು ಯೋಚಿಸಬೇಡವೆ?ಭಗವಂತನು ನಿನ್ನ ಮಗಳಿಗಾಗಿ ಸಂಕಲ್ಪಿಸಿರು ವ ವರನಾವನೆಂಬುದನ್ನು ತಿಳಿಯಲಾರದುದಕ್ಕಾಗಿ, ಒಂದುವೇಳೆ ನೀನು ಚಿಂತಿಸಬಹುದೇಹೋರತು, ಈ ಪ್ರಪಂಚದೊಳಗಾಗಿ ನಿನ್ನ ಮಗಳಿಗೆ ತಕ್ಕ ವರನೇ ಇಲ್ಲವೆಂದು ಕೊರಗುವುದು ತಪ್ಪ ! ಅಫುಟಿತಫುಟನಾಸಮರನಾದ ಆ ಭಗವಂತನ ಸಂಕಲ್ಪವನ್ನು ಹೀಗೆಂದು ತಿಳಿಯುವುದು ಯಾರಿಗೆ ತಾನೇ ಸಾಧ್ಯವು! ವ್ಯ, ಜನನಿಯ ಗರ್ಭಕೊಟರದೆ ಮೆಯ್ಯುಡುಗಿರ್ಷ್ಪ ಕಿಶೋರಕಕ್ಕೆ ಕಾ! ನನದೊಳನಾಕುಲಂ ಕೆಡೆದು ಮೆಯ್ಕರೆದಿರ್ಪ್ಪ ಮಹಾಹಿಗಳೆ ಜೀ ! ವನಮನೆ ಕಲ್ಪಿಸುತ್ತೆ ಸುಖದಿಂ ಪರಿಪೋಷಿಸುತಿರ್ಪನಾವನಾ | ವನರುಹನಾಭನೇ ಘಟಿಯಿಸಿರೆವಂ ನೆರೆ ದುರ್ಘಟಕಾರವರ್ಗಮಂ|| ಪರ್ವತಂ-ರಾಜಾ ! ಗುಣವತಿಯಾದ ನಿನ್ನ ಕನೈಗೆ ಈ ಮನುಷ್ಯಲೋಕ ದಲ್ಲಿಯೇ ತಕ್ಕ ವರನು ಲಭಿಸಲಾರನೆಂದು ಭ್ರಮಿಸುವೆಯಲ್ಲವೆ ? ಅದು ನಿಜವಾಗಿದ್ದ ಪಕ್ಷದಲ್ಲಿ, ಶ್ರೀಹರಿಯೇ ತಾನಾಗಿ ವರರೂಪ ದಿಂದ ಬಂದು, ನಿನ್ನ ಮಗಳನ್ನು ವರಿಸಿದರೂ ವರಿಸಬಹುದು, ಆ ತನ ಸಂಕಲ್ಪವನ್ನಿ ದಿರುನೋಡತ್ತಿರಬೇಕಾದುದೊಂದೇ ನಿನ್ನ ಕಾರವು. ರಾಜಂ- ಪೂಜ್ಯರೆ ! ನಿಮ್ಮ ಹಿತವಾದಗಳನ್ನು ತಿರಸಾವಹಿಸಿದೆನು.
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೪೨
ಗೋಚರ