ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ -ಶಾಕುಂತಲನಾಟಕ ನವೀನಟೀಕೆಗಳಿಂದ ಪುರಕ್ಕೆ ಪೋಗುವೆನೆಂದು ಅಪ್ಪಣೆಯಂ ಕೈಕೊಂಡು, ರಥವು ಬಿಟ್ಟು, ಒಬ್ಬ ನೇ ಪಾದಚಾರಿಯಾಗಿ ಒತ್ತಿನಲ್ಲಿರುವ ಆ ಮಾಲಿನಿಯೆಂಬ ನದೀತೀರಕ್ಕೆ ಬರುತ್ತೆ, ಅಲ್ಲಿರುವ ಕಮಲಷಂಡಗಳಲ್ಲಿ ಮಂಡಿತಂಗಳಾಗಿ ಸಂಚರಿಸುತ್ತಿರುವ ರಾಜಹಂಸೆಗಳ ಹಿಂಡುಗಳಿಂದಲೂ, ಮೊಲ್ಲೆ ಮಲ್ಲಿಗೆ ಜಾಜೆ ಸೇವಂತಿಗೆ ಮೊದಲಾದ ಕುಸುಮಗಳ ಮಕರಂದಪಾನವಂ ಗೆಯ್ಯು ಝೇಂಕಾರವಂ ಗೆಯ್ಯುತ್ತಿರುವ ಭಂಗೀಸಂಗದಿಂ ಸಂಗ ತವಾದ ಲತಾವಿತಾನಗಳಿಂದಲೂ, ಚಕ್ರವಾಕ ಪಾರಾವತ ಶುಕ ಪಿಕ ಮೊದಲಾದ ಪಕ್ಷಿಗಳ ಕಲಕಲಧ್ವನಿಯಿಂದಲೂ ರಮಣೀಯವಾಗಿರುವ ಆ ಮಾಲಿನೀ ನದೀತೀ ರವಂ ನೋಡಿ,_* ಈ ನದೀತೀರವು ಎನ್ನ ಕಂಗಳಿಗೆ ಮಂಗಳವನ್ನುಂಟುಮಾಡುತ್ತಿರು ವುದು ಎಂದು ಶೈತ್ಯ ಸೌರಭ್ಯ ಮಾದ್ಯದಿಂದೊಡಗೂಡಿ ಬರುವಂಥ ಗಾಳಿಗೆ ಮೈ ಟ್ಟು ಕಮಲಗಂಧದಿಂ ಯುಕ್ತವಾಗಿ, ಮಾಲಿನೀನದಿಯ ತುಂತುರ್ವನಿಗಳು ತೆಗೆದು ಕೊಂಡು ಮೃದುವಾಗಿ ಸಂಚರಿಸುತ್ತಿರುವ ಈ ವಾಯುವು ಮನ್ಮಥಬಾಣದಿಂ ವ್ಯಥೆ ಯಂ ಹೊಂದಿರುವ ಎನ್ನ೦ಥ ವಿರಹಿಗಳಿಗೆ ಅಗ್ನಿ ಜ್ವಾಲೆಯಂತಿದೆ: J ಅಂಗಗಳಿ೦ ದಾಲಿಂಗನವಂ ಗೆಯ್ಯುವುದಕ್ಕೆ ಯೋಗ್ಯವಾಗಿ ಬೀಸುತಿರುವುದು' ಎಂದು ಆ ವಾ ಯುವಂ ಸ್ತೋತ್ರವ ಗೆಯ್ಯುತ, ಒಂದು ಕ್ಷಣ ವಿರಹವ್ಯಥೆಯಿಂ ನಿಂದಿಸುತ್ತ ಬಂದು,-“ಮುಂದೆಡೆಯಲ್ಲಿ ತಂಪಿಗೆ ತವರ್ಮನೆಯಾಗಿರುವ ಲತಾಗೃಹದಲ್ಲಿ ಸಂತೋ ಪಯುಕ್ತಳಾದ ಶಕುಂತಲೆಯು ಇರುವಂತೆ ತೋಯುವುದು. ಹೇಗೆಂದರೆ- ಈ ಲತಾ ಗೃಹದ ಮುಂಭಾಗದಲ್ಲಿ ಶುಭ್ರವಾಗಿರುವ ಮರಳಿನಲ್ಲಿ ಆ ಶಕುಂತಲೆಯ ಹೆಜ್ಜೆಗಳ ಸಾಲುಗಳು ಮುಂಗಡೆ ಎತ್ತರವಾಗಿ ಹಿಂಭಾಗವು ಜಘನಭಾರದಿಂ ತಗ್ಗಾಗಿ ಈಗ ತಾನೇ ಅಡಿಯಿಟ್ಟು ಪೋದಂತೆ ತೋಲುವುದಾದ್ದರಿಂದೀವೃಕ್ಷದ ಮಳೆಯಂ ಸೇರಿ, ಕಾಣದಂತೆ ನಿಂತು ಆಶಕುಂತಲೆಯು ಮಾಡುವ ಚೇಷ್ಟೆ ಗಳಂ ನೋಡುವೆನೆಂದು ಮುಂ ದಡಿಯಿಟ್ಟು ಪೋಗಿ, ಮರದ ಮರೆಯಸೇರಿ, ಮುಂಭಾಗದಲ್ಲಿರುವ ಶಕುಂತಲೆಯಂ ನೋಡಿ, ಅಧಿಕಾನಂದದಿಂ ರೋಮಾಂಚದಿಂಯುಕ್ತನಾಗಿ, ಇದೋ ಎನ್ನ ಮನೋರಥ ಎದ್ದಂತೆ ಪ್ರೇಮಾಸ್ಪದಳಾದ ಶಕುಂತಲೆಯು ನಯವಾದ ಚಂದ್ರಕಾಂತ ಶಿಲೆಯ ಮೇಲೆ ವಿರಚಿಸಿರುವ ಹೂವಿನ ಹಾಸಿಗೆಯಲ್ಲಿ ಶಯನವಂ ಗೆಯು ಸಖಿಯರೀತ್ವರಿಂ ದುಪಚರಿಸಿಕೊಳ್ಳುತ್ತಲಿರುವಳು. ಅವಳು ತನ್ನ ಸಖಿಯರುಗಳೊಡನೆ ವಿಶ್ವಾಸಪೂರ್ವ ಕವಾಗಿ ಸಲ್ಲಾಪವಂ ಗೆಯ್ಯುವುದಂ ಕೇಳುವೆನು ಎಂದಿರುತ್ತಿರಲು ; ಇತ್ತಲಾ ಅನುಸೂಯೆ ಪ್ರಿಯಂವದೆಯರೆಂಬ ಸಖಿಯರೀಶ್ವರು ತಾವರೆಯೆ ಲೆಯ ಬೀಸಣಿಗೆಯಂ ಬೀಸುತ, (( ಎಲೆ ಶಕುಂತಲೇ, ನಾವು ಬೀಸುವ ಈ ತಾವರೆ