ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪. ಕಾದಂಬರೀಸಂಗ್ರಹ ತ್ತಾನೆ, ಕಳ್ಳತನವನ್ನು ಮಾಡಿ, ಗುರುಪತ್ನಿಯ ಸಂಗಡ ಕ್ರೀಡಿಸಿ, ಹೆಂಡವನ್ನು ಕುಡಿದು, ಬ್ರಹ್ಮಹತ್ಯೆಯನ್ನಾಚರಿಸಿ, ದೇಹಕ್ಕೆಲ್ಲಾ ಭಸ್ಮ ಧಾರಣೆಮಾಡಿ, ಭಸ್ಮಶಯ್ಯೆ ಯಲ್ಲಿ ಮಲಗಿ ರುದ್ರಾಧ್ಯಾಯಪಾರಾಯಣಮಾಡಿದರೆ ಅವನು ಮೇಲೆ ಹೇಳಿದ ಸಕಲ ಪಾಪಗಳಿಂದಲೂ ವಿನಿರ್ವಮುಕ್ತನಾಗುತ್ತಾನೆ. ಅತಪ್ತ ತನೂರ್ನತದಾಮೋಅಶ್ನುತೆ ' ಎಂಬ ವೇದವಾಕ್ಯದಂತೆ ಮುಮುಕ್ಷುಗಳಿಗೆ ಲಿಂಗಾಂಕನವೂ ಅತ್ಯಾವಶ್ಯಕವು.” ಎಂದು ಹೇಳಲು

ಆಚಾರ್ಯರು "ಹಾ! ಇಲ್ಲಿ ಕೃಚ್ಛ್ರಚಾಂದ್ರಾಯಣಾದಿ ವ್ರತಗಳಿಂದ ತಪ್ತವಾದ ದೇಹವಲ್ಲದೇ ವಹ್ನಿಯಿಂದ ತಪ್ತವಾದ ದೇಹವಲ್ಲ; ಎಂದು ಬೃಹನ್ನಾರದೀಯದಲ್ಲಿ ಹೇಳಿದೆ. ಲಿಂಗಾಂಕಿತವಾದ ಅಥವಾ ಶಂಖಚಕ್ರಾಂಕಿತವಾದ ದೇಹವನ್ನು ನೋಡಿದ ಮಾತ್ರದಲ್ಲಿ ಸ್ನಾನಮಾಡಬೇಕು; ಅಥವಾ ಸೂರ್ಯದರ್ಶನಮಾಡಬೇಕು, ಹಾಗೆ ಮುದ್ರಾಂಕನವನ್ನು ಮಾಡಿಕೊಂಡು ಜೀವಚ್ಛವದಂತಿರುವನು ಶೂದ್ರನಂತೆ ಬಿಡಲ್ಪಡಬೇಕು, ಅವನಿಗೆ ಕೊಡುಲ್ಪಟ್ಟ ಹವ್ಯಕವ್ಯಾದಿಗಳು ವ್ಯರ್ಧಗಳಾಗುತ್ತವೆ. ಅನ್ನವುಮಂ ತ್ರಾಭಿಮಂತ್ರಿತವಾದರೂ ಅಂಧವನ ದರ್ಶನದಿಂದ ಬಿಡಲ್ಪಡಬೇಕು, ಶೂದ್ರನಿಂದಲಾದರೂ ಊಟಮಾಡಬಹುದು; ಮುದ್ರಾಂಕಿತವಾದ ತನುವಳ್ಳವನಿಂದ ಊಟಮಾಡಕೂಡದು, ಎಂದು ಬೃಹನ್ನಾರದೀಯದಲ್ಲಿದೆ. ಪೂರ್ವದಲ್ಲಿ ಗಾಯತ್ರಿಗೂ ಬ್ರಾಹ್ಮಣರಿಗೂ ವಾದ ನಡೆಯಿತು; ಆಗ ಗಾಯತ್ರಿಯು ನೀವು ಕಲಿಯುಗದಲ್ಲಿ ಪಾಷಂಡರೂ, ವೇದೋಕ್ತಕರ್ಮಹೀನರೂ, ತಾಂತ್ರಿಕರೂ, ಆಗಿರೆಂದು ಕೋಪದಿಂದ ಶಪಿಸಿದಳು. ಅದರಂತೆ ಕಲಿಯುಗಪ್ರಾಪ್ತವಾಗಲಾಗಿ ಅವರೆಲ್ಲಾ ವೇದಾರ್ಥಹೀನರೂ, ಪಾಷಂಡರೂ, ಲಿಂಗಚಕ್ರಾದಿಚಿಹ್ನಿತರೂ, ಜ್ಞಾನಕರ್ಮಪದಭ್ರಷ್ಟರೂ, ಕಾಮಕ್ರೋಧಾದಿಪೀಡಿತರೂ, ದುರಾತ್ಮರೂ, ಸತ್ಯಧರ್ಮವರ್ಜಿತರೂ, ಮತ್ತು ಶಾಪಭಾಗಿಗಳೂ, ಆದ ದ್ವಿಜಾಧಮರಾಗಿ ಹುಟ್ಟುತ್ತಾರೆ. ಕಲಿಯುಗದಲ್ಲಿ ಮೂರುಸಾವಿರ ವರ್ಷಗಳು ಕಳೆದನಂತರದಲ್ಲಿ ಸತ್ಯಧರ್ಮಪರಾಯಣರಾಗಿಯೂ, ಅದ್ವೈತಾರ್ಥಾನುಚಿಂತಕರೂ ಆಗಿ ಶಾಪವಿನಿರ್ಮುಕ್ತರಾಗುತ್ತಾರೆ, ಎಂದು ಮಾರ್ಕಂಡೇಯಪುರಾಣದಲ್ಲಿ ಹೇಳಲ್ಪಟ್ಟಿದೆ. ಪರಬ್ರಹ್ಮರೂಪಿಯಾದ ಈಶ್ವರನ ಪೂಜೆಯನ್ನು ಮಾಡಬೇಕೆಂದು ಶೃತಿಯಲ್ಲಿ ಹೇಳಲ್ಪಟ್ಟಿದೆ. ಅದನ್ನು ತಿರಸ್ಕರಿಸಲು ಯಾರಿಗೂ ಸಾಧ್ಯವಿಲ್ಲ. ವಿಭೂತಿ, ರುದ್ರಾಕ್ಷಿಗಳ ಧಾರಣೆಯು ಮನುಷ್ಯರಿಂದ ಮಾಡಲ್ಪಡಬೇಕು; ಆದರೆ ಲಿಂಗಾದ್ಯಂಕನಗಳನ್ನು ಮಾತ್ರ ಮಾಡಕೂಡದು ” ಹೀಗೆ ಆಚಾರ‌್ಯರು ಅವರಿಗುಪದೇಶಿಸಿ ಅವರ ಸಂದೇಹಗಳನ್ನೆಲ್ಲಾ ಶ್ರತ್ಯುಕ್ತಪ್ರಮಾಣಗಳಿಂದ ನಿವೃತ್ತಮಾಡಲು ಅವರು ತಮ್ಮ ಚಿಹ್ನೆಗಳನ್ನೆಲ್ಲಾ ತ್ಯಜಿಸಿ ಆಚಾರ್ಯರ ಶಿಷ್ಯರಾಗಿ ವೇದೋಕ್ತಕರ್ಮಾನುಯಾಯಿಗಳಾದರು.