ಯಾಜ್ಞವಲ್ಕ್ಯ--ದೇವೀ, ವಿಚಾರಮಾಡು. ಸವತಿಮತ್ಸರವು ಕೆಟ್ಟದು. ನಾನು
ಮೈತ್ರೇಯಿಯ ಪಾಣಿಗ್ರಹಣಮಾಡುವದರಿಂದ ನಿನ್ನಲ್ಲಿ ಆಕೆಯ ವಿಷಯದ ಮತ್ಸರವು ನಿಶ್ಚಯವಾಗಿ ಉತ್ಪನ್ನವಾಗುವದು.
ಕಾತ್ಯಾಯನಿ--ದ್ವೈತಭಾವವಿದ್ದರೆ ಸವತಿಮತ್ಸರವಷ್ಟೆ? ನನಗೂ ಮೈತ್ರೇ
ಯಿಗೂ ದ್ವೈತಭಾವವು ಉತ್ಪನ್ನವಾಗುವ ಹಾಗೆಯೇ ಇಲ್ಲ. ವಿಷಯಸುಖಾಪೇಕ್ಷಿಗಳಲ್ಲಿ ಮತ್ಸರವು. ಅದೆಮೂಲತಃ ನಮ್ಮಲ್ಲಿರುವದಿಲ್ಲ. ನಾನು ಪತಿಯು ದೈವತವೆಂದು ತಿಳಿದು, ಪತಿಮೂಲವಾದ ಸಂಸಾರವನ್ನು ಪತಿಸೇವೆಯೆಂದು ತಿಳಿದು ಅತ್ಯಾಸಕ್ತಿಯಿಂದ ನಡಿಸುತ್ತಿರುವೆನು. ಮೈತ್ರೇಯಿಯಂತು ಜ್ಞಾನಲುಬ್ಧಳಾಗಿ ಕೇವಲ ನಿಮ್ಮಮೇಲಿನ ಭಕ್ತಿಯಿಂದ ನಿಮ್ಮ ಪಾಣಿಗ್ರಹಣಮಾಡುವಳು; ನಾನು ಇನ್ನುಮೇಲೆ ಮೈತ್ರೀಯಿಯ ಹೆಜ್ಜೆಯಮೇಲೆ ಹೆಜೆ ಯನ್ನಿಟ್ಟು ನಡೆಯತಕ್ಕವಳು. ಅಂದಬಳಿಕ ನಮ್ಮಲ್ಲಿ ಮಾತ್ಸರ್ಯವು ಹ್ಯಾಗೆ ಉತ್ಪನ್ನವಾಗುವದು? ಮೇಲಾಗಿ ನನ್ನಮೇಲೆ ತಮ್ಮ ಅಪಾರವಾದ ಪ್ರೇಮವಿರುತ್ತದೆಂಬದನ್ನು ನಾನು ಒಲ್ಲೆನು. ನನ್ನಮೇಲಿನ ತಮ್ಮ ಪ್ರೇಮವು ಯಾತರಿಂದಲೂ ಕಡಿಮೆಯಾಗುವಹಾಗಿಲ್ಲ. ಇದರಿಂದಲೂ ಮಾತ್ಸರ್ಯದ ಉತ್ಪತ್ತಿಗೆ ಆಸ್ಪದವು ದೊರೆಯುವಹಾಗಿಲ್ಲ!
ಯಾಜ್ಞವಲ್ಕ್ಯ - ದೇವೀ, ವಿಚಾರಕ್ಕೂ ಪ್ರತ್ಯಕ್ಷಆಚಾರಕ್ಕೂ ಅಂತರವಿರು
ವದು. ನಿನ್ನ ಮಾತುಗಳು ಕೇಳಲಿಕ್ಕೆ ಬಲು ಸಮರ್ಪಕವಾಗಿವೆ. ಅದರಂತೆ ನಡೆಯಲುಮಾತ್ರ ಶಕ್ಯವಾಗಿರುವದಿಲ್ಲ. ನಿನ್ನಂತ ಮೈತ್ರೇಯಿಯನ್ನು ನಾನು ವಿಶೇಷವಾಗಿ ಪ್ರೀತಿಸಲಿಕ್ಕಿಲ್ಲವೆಂದು ನೀನು ಹ್ಯಾಗೆ ತಿಳಿದುಕೊಳ್ಳುವೆ? ಈ ತಿಳುವಳಿಕಿಯಿಂದಲೇ ನೀನು ಮೋಸಹೋದೀ! ಕದಾಚಿತ್ ನನ್ನ ಪ್ರೇಮವು ಮೈತ್ರೇಯಿಯಮೇಲೆ ದಿನದಿನಕ್ಕೆ ಹೆಚ್ಚುತ್ತ ಹೋಗಿ, ಅದರಿಂದ ನಿನ್ನಲ್ಲಿ ಮಾತ್ಸರ್ಯವು ಉತ್ಪನ್ನವಾಗುವ ಸಂಭವವಿರುತ್ತದೆ.
ಕಾತ್ಯಾಯನಿ--ಭಗವನ್ ಕ್ಷಮಿಸಬೇಕು. ಮೈತ್ರೇಯಿಯ ವಿಷಯವಾಗಿ
ನಾನು ಹೊಟ್ಟೇಕಿಚ್ಚುಪಡುವದು ಸರ್ವಥಾ ಶಕ್ಯವಿರುವದಿಲ್ಲ. ನಿಮ್ಮ ಕಾತ್ಯಾಯನಿಯು ಅಷ್ಟು ಗ್ರಾಮ್ಯಸ್ತ್ರೀಯಾಗಿರಬಹುದ? ಮುನಿವರ್ಯ, ಪತಿಗೆ ಅತ್ಯಂತಪ್ರಿಯವಾದ ವಸ್ತುವಿನ ವಿಷಯವಾಗಿ ಸತಿಯು ಮತ್ಸರಪಡುಬಹುದೆ ? ಹೀಗೆ ಪತಿಯ ಒಲವಿನ ವಿರುದ್ಧವಾಗಿ ನಡೆಯುವವಳು ಸತಿಯು ಹ್ಯಾಗೆ? ಸತಿ-ಪತಿಗಳ ದೇಹಗಳು ಭಿನ್ನವಾಗಿದ್ದರೂ ಅವರ ಆತ್ಮಗಳಲ್ಲಿ ಏಕರೂಪತೆಯಿರುವದಷ್ಟೆ? ಅಂದಬಳಿಕ, ಮೈತ್ರೇಯಿಯ ಮೇಲೆ ನಿಮ್ಮ ಪ್ರೇಮವು ಹೆಚ್ಚಾದಮಾನದಿಂದ, ಮೈತ್ರೇಯಿಯ ಮೇಲಿನ ನನ್ನ ಪ್ರೇಮವು ಹೆಚ್ಚದೆ ಹ್ಯಾಗೆಯಿದ್ದೀತು! ನಾನು ತಮ್ಮ ಸಹಧರ್ಮಿಣಿಯಲ್ಲವೆ? ನಿಮಗೆ ಪ್ರಿಯವಾದದ್ದು ನನಗೆ ಪ್ರಿಯವು, ನಿಮಗೆ ಅಪ್ರಿಯವಾದದ್ದು ನನಗೆ ಅಪ್ರಿಯವು!
ಯಾಜ್ಞವಲ್ಕ್ಯ-- ದೇವೀ,ನಿನ್ನ ಮಾತನ್ನು ನಾನು ಅಲ್ಲಗಳಿಯಲಾರೆನು. ನೀನು
ಅಂಥ ಸಜ್ಜನಳೆಂಬದನ್ನು ನಾನು ಬಲ್ಲೆನು; ಆದರೆ ಮೈತ್ರೇಯಿಯು ತಾರುಣ್ಯದಮೂಲಕ ಅವಿವೇಕಿಯಾಗಿ ಮಾತ್ಸರ್ಯತಾಳಿದರೆ ಮಾಡುವದೇನು?