ಈ ಪುಟವನ್ನು ಪರಿಶೀಲಿಸಲಾಗಿಲ್ಲ.
344 ಕರ್ಣಾಟಕಕವಿಚರಿತೆ [16 ನೆಯ
ಚಿಕಿತ್ಸೆಯನು ಸರಿಸದೆ ಪರಿಚಾರವ ಪರಿಸಿದವರು ಯೋಗ್ಯರಲ್ಲ. ಇನ್ನಾರು ಕೆಲವರು ಪರಿಚಾರವನು ಪರಿಸದೆ ಇದ್ದವರು ಆನೆಗಳ ಸಾಧ್ಯಾಸಾಧ್ಯವನರುಯರು. ರೋಗಗ ಳನರುಯದೆ ಔಷಧವಂ ಮಾಡಿದಡೆ ಆನೆಗಳಿಗೆ ವ್ಯಾಧಿ ಹೆಚ್ಚುವುದು. ಪರಿಚಾರದಲ್ಲಿ ಕುಶಲನಾಗಿ ಚಿಕಿತ್ಸಾಪರನಾಗಿ ಕರ್ಮಜ್ಞನಾಗಿ ಕುಲೀನನಾಗಿದ್ದ ವೈದ್ಯನು ಪೂಜ್ಯನು. ನಾನಾಪ್ರಕಾರದಲು ನಾಲ್ಕು ಸ್ಥಾನವನು ಅರತು ಆಲಸ್ಯವಿಲ್ಲದೆ ವೈದ್ಯವಂ ಮಾಡು ವಾತನು ಉತ್ತಮೋತ್ತಮನೆಂದು ಪಾಲಕಾಪ್ಯನು ಅಂಗರಾಯಂಗೆ ಹೇಳುವನು.
__ __ __ __
ಬಸವೇಶ ಸು. 1600 ಈತನು ಪದೈಕೋತ್ತರಶತಸ್ಥಲವನ್ನು ಬರೆದಿದ್ದಾನೆ. ಇವನು ವೀರ
ಶೈವಕವಿ; ಸುಮಾರು 1600 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ.
ಇವನ ಗ್ರಂಥ ಪದೈಕೋತ್ತರಶತಸ್ಥಲ ಇದು ವಾರ್ಧಕಷಟ್ಫದಿಯಲ್ಲಿ ಬರೆದಿದೆ; ಪದ್ಯ 112. ಪದ್ಯರೂಪ
ವಾಗಿರುವುದರಿಂದ ಗ್ರಂಥಕ್ಕೆ ಪದ ಎಂಬ ಉಪಪದವು ಸೇರಿದೆ. ಈ ಏಕೋ ತ್ತರಶತಸ್ಥಲವನ್ನು ಮೊದಲು ಶಿವನು ಪಾರ್ವತಿಗೂ ಬಳಿಕ ಬಸವನು ಚೆನ್ನ ಬಸವಾದಿಗಳಿಗೂ ಹೇಳಿದಂತೆಯೂ ಅದನ್ನೇ ಕವಿ ಸದ್ಭಕ್ತಜನಕರಿವಂತೆ ನಿರೂಪಿಸುವಂತೆಯೂ ಹೇಳುತ್ತಾನೆ. ಗ್ರಂಥದಲ್ಲಿ ಪ್ರತಿಪಾದಿತವಾದ ವಿಷ ಯವು ಈ ಪದ್ಯದಲ್ಲಿ ಸೂಚಿಸಿದೆ_ _
ವೀರಶೈವಾಂಬುರಾಶಿಯೊಳೊಗೆದ ವ್ರತನಿಯಮ | ಸಾಗರತ್ನಂಗಳೊಳನರ್ಘ್ಯಮಣಿನೂರೊಂದ | ನಾರೈದು ತೆಗೆದು ಪರಿವಿಡಿದೋರಣಂಗೊಳಿಸಿ ಸಾರದನುಭವಸೂತ್ರದಿಂ || ಹಾರವಿಸಿ ಹರುಷದಿಂ ಹವಣಿಸಿದ ಹಾರವ ವಿ | ಕಾರವಳುದಿರ್ದ ಶರಣರ್ಗೆ ತೊಡಲಿತ್ತನುವು | ದಾರಬಸವೇಶ ನಂಬಿದ ಶರಣಸಹವಾಸರಾರೈದು ಚಿತ್ತವಿಪುದು || ಈ ಗ್ರಂಥದಿಂದ ಒಂದು ಪದ್ಯವನ್ನು ಉದ್ಧರಿಸಿ ಬರೆಯುತ್ತೇವೆ-- ಕ್ಷಮೆದಮೆಗಳನವರತ ದೇಹದೊಳಗಾವರಿಸಿ | ಭ್ರಮೆಯಡಗಿ ಹಮ್ಮೆಡುಗಿ ಮೃಡನ ಶರಣಾಳಿಯೊಳು |