ವಿಷಯಕ್ಕೆ ಹೋಗು

ಪುಟ:ಮಾಲತಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ನಾಲ್ಕನೆಯ ಪರಿಚ್ಛೇದ
೩೩

ಕೆಳಗೆಲ್ಲಾ ಕತ್ತಲೆ. ಕತ್ತಲೆಯು ಆವರಿಸಿಕೊಂಡಿದ್ದ ನಿಶ್ಯಬ್ದವಾದಾ ನದಿಯ ತೀರದಲ್ಲಿ ಹೋಗುತ್ತಿರುವಾಗ ರಮೇಶನು ಒಂದಸಾಧಾರಣ ಭಯದಿಂದ ನಡುಗಿದನು. ಅವನ ಹೃದಯವು ಸೃಂಭಿತವಾಗಿ ನರಗಳಲ್ಲಿ ರಕ್ತಪ್ರವಾಹವು ನಿಂತುಹೋದಹಾಗಾಗಿ ನಡೆಯುವ ಶಕ್ತಿಯು ಉಡುಗಿಹೋಯಿತು; ಆದರೆ ಇದ್ದಹಾಗೆ, ಅದೇನು? ಏನೋ ಶಬ್ದವಾದಹಾಗಾಯಿತು ! ನದಿನೀರಲ್ಲಿ ಭಾರಪದಾರ್ಥವಾವದೊ ಬಿದ್ದ ಶಬ್ದ !

ಪ್ರನಃ ಆ ಸಂಜೆಯಲ್ಲಿ ನಡೆದ ಭಯಾನಕವಾದಾ ಘಟನೆಯು ರಮೇಶನ ಮನಕೆ ಹೊಳೆಯಿತು. ಮೈಯೆಲ್ಲಾ ಮುಳ್ಳಿಂದ ಚುಚ್ಚಿದಹಾಗಾಯಿತು. ರಮೇಶನಿಗೆ ನಿರ್ಜಿವವಾಗಿದ್ದ ಪ್ರಾಣದಲ್ಲಿ ಪಾಣವುಬಂದಿತು, ನಾಡಿಯಲ್ಲಿ ರಕ್ತಚಲನೆಯುಂಟಾಯಿತು. ಕಾಲಲ್ಲಿ ಬಲವು ಬಂದಿತು. ರಮೇಶನು, ‘ಮಾಲತಿ! ಮಾಲತಿ!’ ಎಂದು ಕೂಗುತ್ತ ಶಬ್ದವು ಕೇಳಿಬಂದಿದ್ದ ದಿಕ್ಕಿಗೆ ಓಡಿ ಹೋದನು. ನದಿಯ ದಡದಲ್ಲಿ ಎತ್ತರವಾಗಿದ್ದೊಂದು ಗಡ್ಡೆಯಮೇಲೆ ನಿಂತು ನೋಡಿದನು. ಆಸ್ಥಳದಲ್ಲಿ ಎದ್ದಿದ್ದ ಅಲೆಗಳು ತಂಡತಂಡವಾಗಿ ಅಳಸಿ ಹೋಗಿ ಆಳವಾಗಿ ಹರಿಯುತ್ತಿದ್ದ ನದಿಯ ಪ್ರವಾಹದೊಂದಿಗೆ ಸೇರಿಹೋಗುತ್ತಿದ್ದಿತು. ರಮೇಶನು ತುದಿಗಾಲಲ್ಲಿ ನಿಂತು ಕುತ್ತಿಗೆಯನ್ನೆತ್ತಿ ದೃಷ್ಟಿಸಿ ನೋಡಿದನು. ನದಿಯಲ್ಲಿ ತೆರೆಗಳಿರಲಿಲ್ಲ. ಎಲ್ಲಾ ಸಾಮಾನ್ಯವಾಗಿದ್ದ ಹಾಗೆ ಕಂಡಿತು. ಸುಖಮಯಿಯು ನಿಶ್ಯಬ್ದವಾಗಿ ಹರಿಯುತ್ತಿತ್ತು. ರಮೇಶನು ನಾಲ್ಕು ಕಡೆಯೂ ನೋಡಿದನು. ಮಾಲತಿಯ ಚಿಹ್ನೆಗಳಾವವೂ ಕಂಡುಬರಲಿಲ್ಲ. ರಮೇಶನು ಹುಚ್ಚನಹಾಗೆ, 'ಮಾಲತಿ! ಮಾಲತಿ’ ಎಂದು ಕೂಗಿದನು. ನದಿಯ ಆಕಾಶವೂ ದಿಕ್ಕುಗಳೂ ರಮೇಶನಾ ಆರ್ತನಾದಕ್ಕೆ ಮಾದನಿಯನ್ನು ಕೊಟ್ಟವು. ಆದರೆ, ಆವ ಮಾಲತಿಯಾಗಲೀ ಉತ್ತರವನ್ನು ಕೊಡಲಿಲ್ಲ!