ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಪೀಠಿಕೆ .

        ಆರ್ಯಮಹಾಶಯರಿಗೊಂದು ವಿನಂತಿ :-
             ಮಹಾಶಯರೇ ? ನಮ್ಮ ಕರ್ನಾಟಕ ಭಾಷೆಯಲ್ಲಿ ಈಚಿಗೆ ಅಂದರೆ ಹತ್ತಿ               
         ಪತ್ತು ವರ್ಷಗಳಿಂದ ಅನೇಕವಿಧವಾದ ನಾವಲುಗಳೂ, ಕಥೆಗಳೂ, ಅನೇಕ ಮಹನೀ
         ಯರಿಂದ ಬರೆಯಲ್ಪಟ್ಟಿರುವುದು ಸಕಲರಿಗೂ ವೇದ್ಯವಾಗಿದೆ. ಆದರೆ ಆಂಗ್ಲೀಯಭಾಷೆ 
         ಯಲ್ಲಿರುವಂತೆ ಕನ್ನಡದಲ್ಲಿ ಪತ್ತೆದಾರೀನಾವಲುಗಳು ಅತಿಯಾಗಿ ಇಲ್ಲವು. ಪತ್ತೇದಾ 
         ರೀನಾವಲುಗಳು ಮನುಷ್ಯನ ಮನಸ್ಸನ್ನು ಆಹ್ವಾದಪಡಿಸಿ ಅವನನ್ನು ಯೋಚನೆಮಾಡು 
         ವಹಾಗೆ ಮಾಡುತ್ತವೆ. ಹೀಗೆ ಯೋಚನಾಶಕ್ತಿಯನ್ನು ಹೆಚ್ಚಿಸುವುದರಿಂದ ಮನು      
         ಷ್ಯನು ಅನೇಕ ವಿಷಯಗಳನ್ನು ಗ್ರಹಿಸಬಲ್ಲನು. ಮತ್ತು ಪೊಲೀಸ್ ಅಧಿಕಾರಿಗಳಿಗೆ 
         ಅನೇಕವೇಳೆ ಸಹಾಯಕನಾಗಿಯೂ ಆಗಬಹುದು.
              ಈ ಅಭಿಪ್ರಾಯಗಳನ್ನಿಟ್ಟು ಕೊಂಡೇ ನಾವು ಕೆಲವರು ಒಂದು ಸಂಘವನ್ನೇರ್ಪ 
         ಡಿಸಿಕೊಂಡು ಸ"'ನಾ ದಲುಗಳನ್ನು ಬರೆದು ಮಾಸಪತ್ರಿಕೆಗಳ ಮೂಲಕ ಪ್ರಚು 
         ರಪಡಿಸಿಯೂ ಕೈಲಾದಾಗ ಬಹಳ ಅಲ್ಪ ಬೆಲೆಗೆ --ಲಾಭಾಪೇಕ್ಷೆಯಿಲ್ಲದೆ-ಜನಗಳಿಗೆ 
         ಕೊಡಬೇಕೆಂತಲೂ ಯೋಚಿಸಿರುವೆವು.ಆಗಲೇ ಈ ಸಂಘದವರು ಅನೇಕ ನಾವಲುಗ 
         ಳನ್ನು ಬರೆದಿರುವರು. ಆದರೆ ದ್ರವ್ಯ ನಿಲ್ಲದೇ ಇರುವುದರಿಂದಲೂ, ಪ್ರೋತ್ಸಾಹ ಕಡ 
         ಮೈಯಾಗಿರುವುದರಿಂದಲೂ, ಅವುಗಳು ಮೂಲೆಯಲ್ಲಿ ಬಿದ್ದಿವೆ. ಸಮಯ ಸಿಕ್ಕಿದಾ 
         ಗೆಲ್ಲಾ ಅವುಗಳನ್ನು ಪ್ರಚುರಪಡಿಸುವೆವು. ತಿಳಿದವರು ತಪ್ಪುಗಳಿದ್ದರೆ ಮನ್ನಿಸಿ 
         ನಮ್ಮನ್ನು ಪ್ರೋತ್ಸಾಹಿಸಬೇಕೆಂಬುದೇ ಪ್ರಾರ್ಥನೆ. ಈ ಪುಸ್ತಕವನ್ನು ಪ್ರಕಟಿಸಲು 
         ಸಹಾಯಮಾಡಿದ ಕಾದಂಬರಿ ಸಂಗ್ರಹ ಮಾಸಪತ್ರಿಕಾ ಸಂಪಾದಕರಾದ ಮ|| ಸಿ. 
         ವೆಂಕಟರಮಣ ಶಾಸ್ತ್ರಿಗಳಿಗೆ ನಾವು ನಿರಂತರವೂ ಕೃತಜ್ಞರಾಗಿರುತ್ತೇವೆ.
                                                   ಗ್ರಂಥಕರ್ತ.