ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪

         ಕಾದಂಬರೀಸಂಗ್ರಹ 
                                  ಬಂದು ಅಲ್ಲಿರುವ ವಿದ್ವಾಂಸರಿಗೆ ತಮ್ಮ ಭಾಷ್ಯಗಳಂ ಪ್ರವಚನ ಮಾಡಿಸಿ, ಅಲ್ಲಿ ಒಂದು ರಮ್ಯವಾದ ಸ್ಥಳದಲ್ಲಿ ಮನೋಹರವಾದ ದೇವಾಲಯವಂ ಕಟ್ಟಿಸಿ, ಒಳ್ಳೆಯ ಸುಮುಹೂರ್ತದಲ್ಲಿ ಮಂತ್ರಶಾರಗಳಿಂದ ಬೀಜಾಕ್ಷರಗಳಿಂದ ಕೂಡಿದ                               

ಶ್ರೀ ಚಕ್ರವಂ ಬರೆದು ಅಲ್ಲಿ ಶಾರದೆಯನ್ನು ಪ್ರತಿಷ್ಠೆಮಾಡಿ, ಆಕೆಯನ್ನ ನೇಕವಿಧವಾಗಿ ಪ್ರಾರ್ಥಿಸಿ, ವ್ಯಾಖ್ಯಾನ ನಿಹ್ಮಾಸನ ಪ್ರತಿಷ್ಠಾ ನಂತರದಲ್ಲಿ, ದಕ್ಷಿಣಾಮ್ನಾಯ ಜಗ ದ್ಗುರು ಶ್ರೀಮಠದ ಶಾರದಾ ಪೀಠದಲ್ಲಿ ಸುರೇಶ್ವರಾಚಾರನ್ನು ಜಗದ್ದುರುಪೀಠ ಪಟ್ಟಾಭಿಷಿಕ್ತರನ್ನಾಗಿ ಮಾಡಿ,ಶ್ರೀಮಠದ ಕಾರ್ಯನಿರ್ವಹಣಕ್ಕಾಗಿ ಶೃಂಗಗಿರಿ ಭಟ್ಟ ನೆಂಬ ಮಹಾ ಭೂತನನ್ನು ನಿಯಮಿಸಿದರು.

         ದಶಮವಲ್ಲರೀ
    ಗುರುಬ್ರಹ್ಮವಿದ್ಯಾಪ್ರಚಾರಾಯ ಶಿಷ್ಯೈಃ|
ಪ್ರಬಂರ್ಧಾ ಕೃರ್ತಾ ವೀಕ್ಷ್ಯ ಸಂಪ್ರಾಪ್ಯ ಮೋದಮ್ ||
  ಸುರೇಶಾಯ ಚಾದಾದನುಚ್ಞಾಂ ಕಯೋಶ್ವಿತ್ | ತ್ರಯೀಶಿರ್ಷಯೋಃ ಕರ್ತುಕಾಮಾಯಟೀಕಾಮ್ |
 ಬಳಿಕೊಂದುದಿನ ಸುರೇಶ್ವರಾಚಾರ್ಯರು ಆಚಾರ್ಯರಲ್ಲಿಗೆ ಹೋಗಿ ನಮಸ್ಕರಿಸಿ, “ ನಾನು ಭಾಷ್ಯಗಳಿಗೆ ವಾರ್ತಿಕವನ್ನು ರಚಿಸಬೇಕೆಂ ದಿದೇನೆ ; ಅಪ್ಪಣೆಯಾಗಬೇಕು” ಎಂದು ಪ್ರಾರ್ಥಿಸಲು ಆಚಾರ್ಯರು ಹಾಗೆಯೇ ಮಾಡೆಂದರು.                 
ಇದನ್ನು ತಿಳಿದ ಚಿತ್ಸುಖರೇ ಮೊದಲಾದವರು ಆಚಾರ್ಯರ  ಸವೊಪಕ್ಕೆ ಹೋಗಿ "ಸುರೇಶ್ವರರು ಕರ್ಮವಾದಿಗಳಷ್ಟೆ. ಈಗ ಅವರು ಮಾಡುವ ವೃತ್ತಿಗ್ರಂಥವು 'ಜ್ಞಾನಪರವಾಗದೇ ಕರ್ಮಪರವೆಲ್ಲಾಗುವುದು ?' ಎಂಬ ಶಂಕೆಯಿರುವುದು. ಆದ ರಿಂದ ವಿಷ್ಣ್ವವತಾರಿಯಾದ ಪದ್ಮಪಾದನನ್ನು ವಾರ್ತಿಕ ರಚನೆಮಾಡುವಂತೆ ಹೇಳ ಬಹುದು" ಎಂದರು.-ಇಷ್ಟರಲ್ಲಿ ಪದ್ಮಪಾದಮುನಿಯು ಬಂದು " ಹಸ್ತಾಮಲಕ್ದ ನನ್ನು ಭಾಷ್ಯಗಳಿಗೆ ವಾರ್ತಿಕವನ್ನು ಮಾಡುವಂತೆ ಹೇಳಬಹುದು ” ಎಂದನು.