ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಸತೀಹಿತೈಷಿಣೀ

ಹೇಳಿರುವ ಜ್ಞಾನಸ್ವರೂಪವನ್ನು ಸಾಕ್ಷಾತ್ಕಾರ ಮಾಡಿಕೊಡುವಷ್ಟು ಶಕ್ತತೆ(ಪ್ರೌಢಸ್ತಿತಿ)ಯನ್ನು ಹೊಂದುವುದು. ಉದಾಹರಣಗೆ ಬೇಕೆಂದರೆ, ಎಂಟುವರ್ಷಗಳಿಗೆ ಮೀರಿದ ಬಾಲ-ಬಾಲೆಯರನ್ನು ನಯಮಾರ್ಗದಲ್ಲಿ ಕರೆದು, ಯಾವುದೇ ಒಂದು ಸಣ್ಣ ನೀತಿಯನ್ನು ಬೋಧಿಸಿದರೂ, ಅವರದನ್ನು ಆಕ್ಕರೆಯಿಂದ ಸಂಗ್ರಹಿಸುವುದಲ್ಲದೆ ಅದರಂತೆ ನಡೆಯಬೇಕೆಂದೂ ಅವರು ತಮ್ಮಿಂಗಾದಷ್ಟು ಪ್ರಯತ್ನಿಸುವುದೂ, ಪ್ರಯತ್ನದಲ್ಲಿ ಉಂಟಾಗಬಹುದಾದ ಕುಂದು ಕೊರತೆಗಳನ್ನು ಕುರಿತು ಮತ್ತೆ ಬೋಧಕರಲ್ಲಿ ಹೇಳಿ-ಕೇಳಿ ತಿಳಿಯತಲೆಳಸುವುದೂ. ನಮ್ಮಲ್ಲಿ ಸಭ್ಯಗೃಹಸ್ಥರೆನ್ನಿಸುವವರಿಗೆಲ್ಲಾ ಅನುಭವವಾಗಿರಬೇಕಲ್ಲವೆ? ಹೀಗಾಗುವ ಗ್ರಾಹಕಶಕ್ತಿ, ಜ್ಞಾನಕಶಕ್ತಿಗಳೇ ವೃಜ್ಞೆಯ ಕಾರುಹಾಗಿದ್ದು, ಜ್ಞಾನಪ್ರಕಾಶಕ್ಕೆ ಮುಖ್ಯ ಕಿರಣಗಳಾಗುವವಲ್ಲವೇನು?

ನಗೇಶ:- ಆಗಲಿ; ಕನ್ಯೆಯರ ಬುದ್ದಿಯು ಪ್ರೌಢಸ್ಥಿತಿಗೆ ಒರಬೇಕಾದರೆ, ನಿನ್ನ ಅಭಿಪ್ರಾಯದಲ್ಲಿ ಕಾಲನಿರ್ಣಯವೇನು?

ನಂದಿನಿ: - ಅಪ್ಪ! ಪ್ರೌಢಿಮೆಯುಂಟಾಗಲಕ್ಕೆ ಕಾಲನಿರ್ಣಯಮಾಡಿ ಹೇಳಲಾರೆನು. ಏಕೆಂದರೆ, ಶಿಕ್ಷಣಾಬಲದಿಂದ ಅವರ ೧೪-೧೬ ವರ್ಷಗಳಲ್ಲಿಯೇ ಜ್ಞಾನಪ್ರಸಾರವಾಗುವುದು, ಹಾಗಾಗದೆ ಶಿಕ್ಷಣಕ್ಕೇ ಅಘಾನವಾದರೆ ಮರಣದವರೆಗೂ ಮೌಢ್ಯತೆಯೇ ಇರುವುದು. ಇದನ್ನು ತಿಳಿಯಬೇಕೆಂದರೆ, ೬೦-೭೦ ವರ್ಷಗಳ ಮುಪ್ಪಿನಲ್ಲಿಯೂ ಚಾಪಲ್ಯರೋಗದಿಂದ ಮರುಳಾಟವಾಡುತ್ತಿರುವವರನ್ನೂ, ೧೩-೧೪ ವರ್ಷಗಳ ಬಾಲ್ಯದಲ್ಲಿಯೇ (ಎಳಮೆ) ಭಕ್ತಿ-ಜ್ಞಾನ-ವೈರಾಗ್ಯಗಳ ಭದ್ರ ಕವಚವನ್ನು ಧರಿಸಿ, ಸ್ವಧರ್ಮಪರಿಪಾಲನೆಯಲ್ಲಿ ನಿರತರಾಗಿರುವವರನ್ನೂ ನಾವು ಅಲ್ಲಿಗಲ್ಲಿಗೆ ನೋಡುತ್ತಿಲ್ಲವೇನು? ಇದರಿಂದ ಪ್ರೌಢಸ್ಥಿತಿಯು ಎಂದಿಗೆ, ಹೇಗೆ, ಉ೦ಟಾಗಬಹುದೆಂಬುದನ್ನು ಸುಲಭವಾಗಿಯೇ ನಿರ್ಧರಿಸಬಹುದಲ್ಲವೇ? ಹಾಗೂ ಮತ್ತೊಂದು ವಿಚಾರವಿದೆ. ಏನಂದರೆ,-

   ಸುಶಿಕ್ಷಿತರಾದ ಸ್ತ್ರೀಯರಿಗೆ ಅವರ ೧೦-೧೧ ವರ್ಷಗಳೊಳಗೆ ಉಚಿತನುಜತ ವ್ಯಾಪಾರಿಜ್ಞಾನವ್ರಂಬಾಗುವುದು. ಹೀಗೆ ಉಂಟಾದ ಜ್ಞಾನ೦ಕುರದಿಂದ ಆಗಲೇ ಇವರಲ್ಲಿ ಲಜ್ಞಾ-ಮಾನ-ಭಯ-ವಿಚಾರ ವಿಮರ್ಶೆಗಳು ಒಂದನ್ನು ಮತ್ತೊಂದು ಅನುಸರಿಸಿ ಬರುವುವು. ಇವುಗಳು ಹೃದಯಂಗ.